IPL 2026: ನಿನ್ನೆ ನಡೆದ ಆರ್‌ಸಿಬಿ - ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

Kannadaprabha News   | Kannada Prabha
Published : Apr 25, 2026, 07:48 AM IST
RCB vs GT

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ, ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಗುಜರಾತ್ ಪರ ಸಾಯಿ ಸುದರ್ಶನ್ ಅವರ ಶತಕ ವ್ಯರ್ಥವಾಯಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ನಾಸಿರ್‌ ಸಜಿಪ, ಕನ್ನಡಪ್ರಭ

ಬೆಂಗಳೂರು: ಹಾಲಿ ಚಾಂಪಿಯನ್‌ ಆರ್‌ಸಿಬಿ ಗೆಲುವಿನ ಹಾದಿಗೆ ಮರಳಿದೆ. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಬೌಂಡರಿ, ಸಿಕ್ಸರ್‌ ಸುರಿಮಳೆಗೈದ ವಿರಾಟ್‌ ಕೊಹ್ಲಿ, ದೇವದತ್‌ ಪಡಿಕ್ಕಲ್‌, ಆರ್‌ಸಿಬಿಗೆ 5 ವಿಕೆಟ್‌ ಅಂತರದ ದೊಡ್ಡ ಗೆಲುವು ತಂದುಕೊಟ್ಟರು. 7 ಪಂದ್ಯಗಳಲ್ಲಿ 5ನೇ ಗೆಲುವು ದಾಖಲಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಗುಜರಾತ್‌ 7ರಲ್ಲಿ 4ನೇ ಸೋಲು ಕಂಡಿತು.

ಆರ್‌ಸಿಬಿಯಿಂದ ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಜಿಟಿ 3 ವಿಕೆಟ್‌ಗೆ 205 ರನ್‌ ಸೇರಿಸಿತು. ಆದರೆ ಆರ್‌ಸಿಬಿ ಅಬ್ಬರದ ಮುಂದೆ ಈ ಮೊತ್ತ ಯಾವುದಕ್ಕೂ ಸಾಕಾಗಲಿಲ್ಲ. ಆರ್‌ಸಿಬಿ 18.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು.

ಸುದರ್ಶನ್‌ ಶತಕ:

ಗುಜರಾತ್‌ ಆರಂಭಿಕರು ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. ಸಾಯಿ ಸುದರ್ಶನ್‌-ಶುಭ್‌ಮನ್‌ ಗಿಲ್‌ 12.4 ಓವರ್‌ನಲ್ಲಿ 128 ರನ್‌ ಜೊತೆಯಾಟವಾಡಿದರು. ಗಿಲ್‌ 32, ಬಟ್ಲರ್‌ 25 ರನ್‌ಗೆ ಔಟಾದರೂ ಸುದರ್ಶನ್‌ ಶತಕ ಪೂರೈಸಿದರು. 58 ಎಸೆತಗಳಲ್ಲಿ 100 ರನ್ ಸಿಡಿಸಿದರು. 16 ಓವರ್‌ಗೆ 170 ರನ್‌ ಗಳಿಸಿದ್ದ ತಂಡ ಬಳಿಕ 3 ಓವರ್‌ಗಳಲ್ಲಿ ಒಂದೂ ಬೌಂಡರಿ ಸಿಡಿಸಲಿಲ್ಲ. ಕೇವಲ 17 ರನ್‌ ಗಳಿಸಿತು. ಇದು ತಂಡದ ಸ್ಕೋರ್‌ ಗಳಿಕೆ ಮೇಲೆ ಪರಿಣಾಮ ಬೀರಿತು.

ಗ್ರೇಟ್‌ ಚೇಸ್:

ಜೇಕಬ್‌ ಬೆಥೆಲ್‌(14)ರನ್ನು 3ನೇ ಓವರ್‌ನಲ್ಲೇ ಕಳೆದುಕೊಂಡರೂ ವಿರಾಟ್‌-ದೇವದತ್‌ ಜೋಡಿ ಅಬ್ಬರಿಸಿತು. ಈ ಜೋಡಿ 59 ಎಸೆತಕ್ಕೆ 115 ರನ್‌ ಸೇರಿಸಿತು. 27 ಎಸೆತಕ್ಕೆ 55 ರನ್‌ ಸಿಡಿಸಿದ ದೇವದತ್‌ 13ನೇ ಓವರ್‌ನಲ್ಲಿ ಔಟಾದರೆ, ಶತಕದತ್ತ ಮುನ್ನುಗ್ಗುತ್ತಿದ್ದ ವಿರಾಟ್‌(44 ಎಸೆತಕ್ಕೆ 81) 14ನೇ ಓವರ್‌ನಲ್ಲಿ ಹೋಲ್ಡರ್‌ ಎಸೆತದಲ್ಲಿ ಬೌಲ್ಡ್‌ ಆದರು. ಬಳಿಕ ಕೃನಾಲ್(ಔಟಾಗದೆ 23) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರ್‌: ಗುಜರಾತ್‌ 20 ಓವರಲ್ಲಿ 205/3 (ಸಾಯಿ 100, ಗಿಲ್ 32, ಭುವನೇಶ್ವರ್‌ 1-31), ಆರ್‌ಸಿಬಿ 18.5 ಓವರ್‌ಗಳಲ್ಲಿ 206/5 (ಕೊಹ್ಲಿ 81, ದೇವದತ್‌ 55, ರಶೀದ್‌ 2-49)

ಕೊಹ್ಲಿ 807 ಫೋರ್, 303 ಸಿಕ್ಸರ್‌: ಐಪಿಎಲ್‌ ದಾಖಲೆ

ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ 800 ಫೋರ್‌ಗಳ ಮೈಲುಗಲ್ಲು ಸಾಧಿಸಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 274 ಪಂದ್ಯಗಳಲ್ಲಿ 807 ಫೋರ್‌ ಸಿಡಿಸಿದ್ದಾರೆ. ಅಲ್ಲದೆ, ಅವರು 300 ಸಿಕ್ಸರ್‌ಗಳ ಮೈಲುಗಲ್ಲು ಸಾಧಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕ್ರಿಸ್‌ ಗೇಲ್‌ 357, ರೋಹಿತ್‌ ಶರ್ಮಾ 310, ವಿರಾಟ್‌ 303 ಸಿಕ್ಸರ್‌ ಸಿಡಿಸಿದ್ದಾರೆ.

02ನೇ ಆಟಗಾರ

ಸತತ 3 ಐಪಿಎಲ್‌ಗಳಲ್ಲಿ ಶತಕ ದಾಖಲಿಸಿದ 2ನೇ ಆಟಗಾರ ಸಾಯಿ ಸುದರ್ಶನ್‌. 2024, 2025, 2026ರಲ್ಲಿ ಶತಕ ಬಾರಿಸಿದ್ದಾರೆ. ಗೇಲ್‌ ಮೊದಲಿಗ. ಅವರು 2011-13ರಲ್ಲಿ ಈ ಸಾಧನೆ ಮಾಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗುಜರಾತ್ ಎದುರಿನ ಹೈವೋಲ್ಟೇಜ್‌ ಮ್ಯಾಚ್‌ಗೆ ಆರ್‌ಸಿಬಿ ತಂಡದಲ್ಲಿ ಎರಡು ಬದಲಾವಣೆ? ಕನ್ನಡಿಗನಿಗಿಲ್ಲ ಸ್ಥಾನ!
ಇವ್ರಂತೂ ಗೆಲ್ಲಲ್ಲ...! ಚೆನ್ನೈ ಎದುರಿನ ಮ್ಯಾಚ್ ಮುಗಿಯುವ ಮೊದಲೇ ಮೈದಾನ ತೊರೆದ ಮುಂಬೈ ಮಾಲೀಕ ಆಕಾಶ್ ಅಂಬಾನಿ! ವಿಡಿಯೋ ವೈರಲ್