ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಪೋಟಕ ಪ್ರದರ್ಶನ ನೀಡಲು ಸಜ್ಜಾಗಿದೆ. ಉಭಯ ತಂಡಗಳು ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳನ್ನು ಹೊಂದಿದ್ದು, ರೋಚಕ ಹಣಾಹಣಿಯನ್ನು ನಿರೀಕ್ಷಿಸಬಹುದು.
ಹೈದರಾಬಾದ್: ಕಳೆದ ಬಾರಿ ತನ್ನ ಆಕ್ರಮಣಕಾರಿ ಆಟದ ಮೂಲಕವೇ ಎದುರಾಳಿ ತಂಡಗಳ ನಿದ್ದೆಗೆಡಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ಈಬಾರಿ ಮತ್ತಷ್ಟು ಸ್ಪೋಟಕ ಆಟವಾಡುವ ಕಾತರದಲ್ಲಿದೆ. ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಭಾನುವಾರ ಮಾಜಿ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನ ಅಂಗಳದಲ್ಲಿ ಸೆಣಸಾಡಲಿದೆ. ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೈನ್ರಿಚ್ ಕ್ಲಾಸೆನ್ ಸೇರಿದಂತೆ ಹಲವು ಸ್ಫೋಟಕ ಬ್ಯಾಟರ್ಸ್ ತಂಡದಲ್ಲಿದ್ದಾರೆ. ಕಳೆದ ವರ್ಷ 3 ಬಾರಿ 250 + ರನ್ ಗಳಿಸಿದ್ದ ತಂಡ ಈ ಸಲ 300 + ರನ್ ಕಲೆಹಾಕುವ ಗುರಿ ಹೊಂದಿದೆ. ಅದನ್ನು ಬ್ಯಾಟಿಂಗ್ ಸ್ನೇಹಿ ತವರಿನ ಪಿಚ್ ನಲ್ಲಿ ನಡೆಯಲಿರುವ ಆರಂಭಿಕಪಂದ್ಯದಲ್ಲೇ ಸಾಧಿಸುವ ನಿರೀಕ್ಷೆಯಲ್ಲಿದೆ.
ನಾಯಕ ಕಮಿನ್ಸ್, ಶಮಿ, ಝಾಂಪ, ಉನಾಲ್ಕಟ್, ಎಶಾನ್ ಮಾಲಿಂಗಾ, ಹರ್ಷಲ್ ಪಟೇಲ್, ಮುಲ್ಟರ್ ಬೌಲಿಂಗ್ ಆಧಾರಸ್ತಂಭ. ಇನ್ನು, ಕೆಲ ಪಂದ್ಯದಲ್ಲಿ ರಿಯಾನ್ ಪರಾಗ್ ನಾಯಕತ್ವದಲ್ಲಿ ಆಡಲಿರುವ ರಾಯಲ್ಸ್ ಕೂಡಾ ಶುಭಾರಂಭದ ವಿಶ್ವಾಸದಲ್ಲಿದೆ.
ಸಂಜು ಸ್ಯಾಟ್ಸನ್, ಜೈಸ್ವಾಲ್, ನಿತೀಶ್ ರಾಣಾ, ಧ್ರುವ್ ಜುರೆಲ್, DRAAIT ಸನ್ ರೈಸರ್ಸ್ ಹೆಡ್, ಕ್ಲಾಸೆನ್ ಅಭ್ಯಾಸ. ಹೆಜ್ಜೆಯರ್, ಐಪಿಎಲ್‌ನ ಅತಿ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಸೇರಿ ಹಲವು ಪ್ರತಿಭಾವಂತ ಬ್ಯಾಟರ್‌ಗಳು ತಂಡದಲ್ಲಿದ್ದಾರೆ. ಸನ್ ರೈಸರ್ಸ್ ತಡೆಯೊಡ್ಡಬಲ್ಲ ಸ್ಫೋಟಕ ಆಟಕ್ಕೆ ಸಾಮರ್ಥ್ಯವಿರುವ ಜೋಫಾ ಆರ್ಚರ್, ಹಸರಂಗ, ಫಜಲ್ ಹಕ್ ಫಾರೂಕಿ, ಮಹೀಶ ತೀಕ್ಷಣ, ವೇಗಿ ಸಂದೀಪ್ ಶರ್ಮಾ ಸೇರಿ ಪ್ರಮುಖರು ತಂಡದಲ್ಲಿದ್ದಾರೆ.
ಮುಖಾಮುಖಿ 20
ಸನ್ ರೈಸರ್ಸ್ ಹೈದ್ರಾಬಾದ್ : 11 ಗೆಲವು
ರಾಜಸ್ಥಾನ ರಾಯಲ್ಸ್: 09
ಸನ್ ರೈಸರ್ಸ್ ಹೈದ್ರಾಬಾದ್: ಹೆಡ್, ಅಭಿಷೇಕ್, ಇಶಾನ್, ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್, ನಿತೀಶ್, ಕಮಿನ್ಸ್ (ನಾಯಕ), ಹರ್ಷಲ್ /ಉನಾಟ್, ರಾಹುಲ್ ಚಹರ್, ಶಮಿ, ಝಂಪಾ.
ಇದನ್ನೂ ಓದಿ: IPL 2025: ಒಂದೇ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5 ಬ್ಯಾಟ್ಸ್‌ಮನ್‌ಗಳು
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸ್ಯಾಟ್ಸನ್, ನಿತೀಶ್, ರಿಯಾನ್ (ನಾಯಕ), ಧ್ರುವ್‌ಜುರೆಲ್, ಹೆಟ್ಟೇಯರ್, ಹಸರಂಗ, ಶುಭಂ/ಆಕಾಶ್, ಆರ್ಚರ್, ತೀಕ್ಷಣ/ಫಾರೂಖಿ, ಸಂದೀಪ್, ತುಷಾರ್.
ಪಂದ್ಯ: ಮಧ್ಯಾಹ್ನ 3.30ಕ್ಕೆ
ಪ್ರಸಾರ:ಸ್ಟಾರ್ ಸ್ಪೋರ್ಟ್, ಜಿಯೋ ಹಾಟ್ ಸ್ಟಾರ್
ಪಿಚ್ ರಿಪೋರ್ಟ್ ಹೈದ್ರಾಬಾದ್ ಪಿಚ್‌ನಲ್ಲಿ ಬ್ಯಾಟಿಂಗ್ ಸ್ನೇಹಿ. ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರು ವಾಸಿ. ಇಲ್ಲಿನ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 190ರಿಂದ 200.
ಇದನ್ನೂ ಓದಿ: ಭರ್ಜರಿ ಗೆಲುವಿನೊಂದಿಗೆ ಐಪಿಎಲ್ 2025 ಆರಂಭಿಸಿದ ಆರ್‌ಸಿಬಿ, ಈ ಸಲಾ ನಮ್ದೇ ಆಟ, ನಮ್ಗೆ ಕಿರೀಟ