ಚೆನ್ನೈ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ 18ನೇ ಆವೃತ್ತಿ ಟೂರ್ನಿಯಲ್ಲಿ ಶುಭಾರಂಭಕ್ಕಾಗಿ ಕಾಯುತ್ತಿದೆ. ಉಭಯ ತಂಡಗಳು ಭಾನುವಾರದ 2ನೇ ಪಂದ್ಯದಲ್ಲಿ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮುಖಾ ಮುಖಿಯಾಗಲಿವೆ. ಚೆನ್ನೈ ತಂಡದಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜಾ, ನೂರ್ ಅಹ್ಮದ್, ಕರ್ನಾಟಕದ ಶ್ರೇಯಸ್ ಗೋಪಾಲ್ ಸೇರಿ ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಚೆನ್ನೈ ಸ್ಪಿನ್ನರ್‌ಗಳನ್ನು ಎದುರಿಸುವುದು ಸವಾಲಾಗಬಹುದು. ಋತುರಾಜ್ ಗಾಯಕ್ವಾಡ್ ಚೆನ್ನೈ ತಂಡದ ನಾಯಕತ್ವ ವಹಿಸುತ್ತಿದ್ದರೂ, ಹಿರಿಯ ಆಟಗಾರ ಎಂ.ಎಸ್.ಧೋನಿ ಮೇಲೆ ಎಲ್ಲರ ಕಣ್ಣಿದೆ. ಡೆವೋನ್ ಕಾನ್‌ವೇ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಶಿವಂ ದುಬೆ, ಸ್ಯಾಮ್ ಕತ್ರನ್, ದೀಪಕ್ ಹೂಡಾ ಸೇರಿ ಪ್ರಮುಖರು ತಂಡದಲ್ಲಿದ್ದಾರೆ.
ಮತ್ತೊಂದೆಡೆ ಮುಂಬೈ ಕಾಯಂ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಪ್ರಮುಖ ವೇಗಿ ಬೂಮ್ರಾರ ಅನುಪಸ್ಥಿತಿಯಲ್ಲಿ ಆಡಲಿದೆ. ತಂಡದಲ್ಲಿ ನಾಯಕ ಸೂರ್ಯಕುಮಾರ್, ರೋಹಿತ್ ಶರ್ಮಾ, ಯಾನ್ ರಿಕೆಲ್ಟನ್, ಬೆವೊನ್ ಜೇಕಬ್, ತಿಲಕ್ ವರ್ಮಾ, ಎಲ್ ಜ್ಯಾಕ್ಸ್, ಕರ್ನಾಟಕದ ಕೆ.ಎಲ್.ಶ್ರೀಜಿತ್ ಸೇರಿ ಪ್ರಮುಖ ಬ್ಯಾಟರ್‌ಗಳಿದ್ದಾರೆ. ಚೆನ್ನೈ ತಂಡದ ಸ್ಪಿನ್ ತಂತ್ರಕ್ಕೆ ಠಕ್ಕರ್‌ಕೊಡಬಲ್ಲ ಮುಜೀಬ್, ಮಿಚಿಲ್ ಸ್ಯಾಂಟ್ನರ್, ಕರ್ಣ್ ಶರ್ಮಾ ತಂಡಕ್ಕೆ ಒದಗಿಸಲಿದ್ದಾರೆ.
ಇದನ್ನೂ ಓದಿ:IPL 2025ರ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ, ಪ್ಲೇಯಿಂಗ್ 11ನಲ್ಲಿ ಯಾರಿದ್ದಾರೆ?
ಮುಖಾಮುಖಿ
ಚೆನ್ನೈ: 17 ಗೆಲುವು
ಮುಂಬೈ: 20 ಗೆಲುವು
ಸಮಯ: ರಾತ್ರಿ 7:00
ಸಂಭವನೀಯ ಆಟಗಾರರು:
ಚೆನ್ನೈ: ಋತುರಾಜ್ (ನಾಯಕ), ಕಾನ್ ವೇ, ತ್ರಿಪಾಠಿ, ದುಬೆ, ಕಕ್ರನ್, ವಿಜಯ್, ಜಡೇಜಾ, ಧೋನಿ, ಅಶ್ವಿನ್, ನೂರ್, ಖಲೀಲ್ / ಗುರ್‌ಜಪ್‌ನೀತ್, ಪತಿರನ.
ಮುಂಬೈ: ರೋಹಿತ್, ರಿಕೆಲ್ಸನ್, ತಿಲಕ್, ಸೂರ್ಯಕುಮಾರ್ (ನಾಯಕ), ಜ್ಯಾಕ್ಸ್, ನಮನ್ ಧೀರ್, ರಾಬಿನ್, ಮುಜೀಬ್ / ಸ್ಯಾಂಟ್ಸರ್, ಕರ್ಣ್, ದೀಪಕ್, ಬೌಲ್ಡ್, ಅರ್ಜುನ್.
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್: ಚೆನ್ನೈನ ಪಿಚ್ ಸ್ಪಿನ್ ಸ್ನೇಹಿ. ಇಲ್ಲಿ ಬ್ಯಾಟರ್‌ಗಳು ರನ್ ಗಳಿಸಲು ಸಾಕಷ್ಟು ಶ್ರಮವಹಿಸಬೇಕಾಗುತ್ತೆ. ಪಂದ್ಯ ಸಾಗಿದಂತೆ ಪಿಚ್ ನಿಧಾನವಾಗಿ ವರ್ತಿಸಲಿದೆ.
ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ ಅಭಿಮಾನಿ,ನೋಯಿಸದಂತೆ ಸೂಚನೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.