ಇದು ನಿನ್ನ ತವರು ಮನೆನಾ? ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಈ ಮಾತು ಹೇಳಿದ್ಯಾರಿಗೆ?

Published : Apr 27, 2025, 10:35 PM IST
ಇದು ನಿನ್ನ ತವರು ಮನೆನಾ? ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಈ ಮಾತು ಹೇಳಿದ್ಯಾರಿಗೆ?

ಸಾರಾಂಶ

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಮುಂಬೈ: ಇಂದು ನಡೆದ ಪಂದ್ಯದಲ್ಲಿ ಲಖೌನ್ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ 5ನೇ ಗೆಲುವನ್ನು ತನ್ನದಾಗಿಸಿಕೊಳ್ಳುವ ಮೂಲಕ ಪ್ಲೇಆಫ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ. ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಇಂದಿನ ಗೆಲುವಿನ ಮೂಲಕ 12 ಪಾಯಿಂಟ್ಸ್ ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದ್ದು, ಆರ್‌ಸಿಬಿ ಸ್ಥಾನ ಕುಸಿತವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಮತ್ತು ಸೀನಿಯರ್ ಆಟಗಾರರಾಗಿರುವ ರೋಹಿತ್ ಶರ್ಮಾ ಎಲ್ಲರ ಕಾಲೆಳೆಯುತ್ತಿರತ್ತಾರೆ. ಇದೀಗ ಲಖೌನ್ ತಂಡದ ಆಟಗಾರ ಶಾರ್ದೂಲ್ ಠಾಕೂರ್ ಅವರನ್ನು ಮೈದಾನದಲ್ಲಿಯೇ ರೋಸ್ಟ್ ಮಾಡಿದ್ದಾರೆ. ಈ ತಮಾಷೆಯ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಮುಂಬೈ ಇಂಡಿಯನ್ಸ್ ತಂಡ ಈ ವಿಡಿಯೋವನ್ನು ಇಂದು ಸಂಜೆ 6.45ಕ್ಕೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದೆ. ಈವರೆಗೆ ವಿಡಿಯೋಗೆ 52 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು 4 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಈ ವಿಡಿಯೋ ನೋಡಿದ ನೆಟ್ಟಿಗರು, ನೀವು ಯಾರಿಂದಲಾದ್ರೂ ತಪ್ಪಿಸಿಕೊಳ್ಳಬಹುದು. ಆದ್ರೆ ರೊಹಿತ್ ಶರ್ಮಾ ಅವರಿಂದ ಸಾಧ್ಯವೇ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ. 

ಇಂದಿನ ಮುಂಬೈ ಮತ್ತು ಲಖೌನ್ ತಂಡದ ನಡುವಿನ ಪಂದ್ಯ ವಾಖೇಡ ಸ್ಟೇಡಿಯಂನಲ್ಲಿ ನಡೆದಿತ್ತು. ಇಂದು ಬೆಳಗ್ಗೆ ಉಭಯ ತಂಡಗಳೆರಡು ಇಲ್ಲಿಯೇ ಅಭ್ಯಾಸ ನಡೆಸಿದ್ದರು. ಈ ವೇಳೆ ರೋಹಿತ್ ಶರ್ಮಾ ಮತ್ತು ಶಾರ್ದೂಲ್ ಠಾಕೂರ್ ನಡುವೆ ತಮಾಷೆಯ ಘಟನೆ ನಡೆದಿದೆ. ವಿಡಿಯೋದಲ್ಲಿ ಜಹೀರ್ ಖಾನ್ ಜೊತೆಯಲ್ಲಿ ರೋಹಿತ್ ಶರ್ಮಾ ಕುಳಿತಿರುತ್ತಾರೆ. ಅಲ್ಲಿಗೆ ಶಾರ್ದೂಲ್ ಬರುತ್ತಿದ್ದಂತೆ,  "ಏನು ನೀನು, ಇಷ್ಟು ತಡವಾಗಿ ಬರುತ್ತಿದ್ದೀಯ, ಇದು ನಿನ್ನ ತವರು ತಂಡನಾ? ಎಂದು ಪ್ರಶ್ನೆ ಮಾಡುತ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಐಪಿಎಲ್ ಸೀಸನ್ 18ರ ಹರಾಜು ಪ್ರಕ್ರಿಯೆಯಲ್ಲಿ ಯಾವ ತಂಡವು ಶಾರ್ದೂಲ್ ಠಾಕೂರ್ ಅವರನ್ನು ಖರೀದಿ ಮಾಡಿರಲಿಲ್ಲ. ಪಂದ್ಯಗಳು ಆರಂಭವಾಗುವ ಮೊದಲೇ ಲಖೌನ್ ತಂಡದ ಆಟಗಾರರು ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದರು. ಈ ಸಮಯದಲ್ಲಿ ಗಾಯಾಳು ಆಟಗಾರನ ಬದಲಾಗಿ ಶಾರ್ದೂಲ್ ಅವರನ್ನು ಲಖೌನ್ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಕೋಲ್ಕತಾದ ಮಾನ ಕಾಪಾಡಿದ ಮಳೆರಾಯ, ನಾಲ್ಕನೇ ಸ್ಥಾನಕ್ಕೇರಿದ ಪಂಜಾಬ್ ಕಿಂಗ್ಸ್!

ಮುಂಬೈ ವರ್ಸಸ್ ಲಖೌನ್
ಈ ಹಿಂದೆ ಎರಡು ಬಾರಿ ಮುಂಬೈ ಇಂಡಿಯನ್ಸ್ ಮತ್ತು ಲಖೌನ್ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಎರಡು ಬಾರಿ ಗೆಲುವು  ಲಖೌನ್ ಸೂಪರ್ ಜೈಂಟ್ಸ್ ತಂಡದ ಪಾಲಾಗಿತ್ತು. ಇಂದಿನ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಲಖೌನ್ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಮುಂಬೈ ಇಂಡಿಯನ್ಸ್ ಗೆಲುವಿನ ಲಯಕ್ಕೆ ಮರಳಿದೆ. ಟಾಸ್ ಗೆದ್ದ ತಂಡ ಲಖೌನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲಿ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ 20 ಓವರ್‌  ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಪೇರಿಸಿತು. ಮುಂಬೈ ನೀಡಿದ ಬೃಹತ್ ಮೊತ್ತ ಬೆನ್ನತ್ತಿದ ಲಖೌನ್ ಕೇವಲ 161 ರನ್ ಸೇರಿಸಲು ಶಕ್ತವಾಗಿ  ಸೋಲನ್ನು ಒಪ್ಪಿಕೊಂಡಿತ್ತು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಮುಂಬೈ ಇಂಡಿಯನ್ಸ್ 54 ಅಂತರಗಳಿಂದ ಪಂದ್ಯವನ್ನು ತನ್ನದಾಗಿಸಿಕೊಂಡಿದೆ.

ಮುಂಬೈ ಇಂಡಿಯನ್ಸ್ ತಂಡದ ವಿಲ್ ಜಾಕ್ಸ್ ಪಂದ್ಯ ಶ್ರೇಷ್ಠರಾದರು. ವಿಲ್ ಜಾಕ್ಸ್ 29 ರನ್ ಗಳಿಸಿ 2 ವಿಕೆಟ್ ಪಡೆದುಕೊಂಡು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ vs ವಿರಾಟ್ ಕೊಹ್ಲಿ: ಐಪಿಎಲ್‌ನ ನಿಜವಾದ ಕಿಂಗ್ ಯಾರು?

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!