ಪಂಜಾಬ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಆರ್‌ಸಿಬಿ; ಈ ಸಲ ಕಪ್ ನಮ್ಮದೇ ಎಂದ ಫ್ಯಾನ್ಸ್

Published : May 29, 2025, 10:05 PM ISTUpdated : May 29, 2025, 10:11 PM IST
MI vs RCB IPL 2025

ಸಾರಾಂಶ

ಎರಡು ವಿಕೆಟ್ ನಷ್ಟಕ್ಕೆ ಆರ್‌ಸಿಬಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಇನ್ನು ಬೌಲಿಂಗ್‌ನಲ್ಲಿ ಯಶ್ ದಯಾಳ್ 2, ಭುವನೇಶ್ವರ್ ಕುಮಾರ್ 1, ಸುಯಶ್ ಶರ್ಮಾ ಮತ್ತು ಜೋಶ್ ಹ್ಯಾಜಲ್​ವುಡ್ ತಲಾ 3 ವಿಕೆಟ್ ಪಡೆಯುವ ಮೂಲಕ ಪಂಜಾಬ್ ತಂಡವನ್ನು ಧೂಳಿಪಟ ಮಾಡಿದರು.

ಮೊಹಾಲಿ: ಪಂಜಾಬ್ ತಂಡದ ನೀಡಿದ 102 ರನ್‌ಗಳ ಸುಲಭದ ಗುರಿಯನ್ನು 2 ವಿಕೆಟ್ ನಷ್ಟಕ್ಕೆ ಆರ್‌ಸಿಬಿ ತಲುಪಿತು. ಆರಂಭಿಕರಾಗಿ ಮೈದಾನ ಪ್ರವೇಶಿಸಿದ ವಿರಾಟ್ ಕೊಹ್ಲಿ ಕೇವಲ 12 ರನ್‌ ಗಳಿಸಿ ಕೈಲ್ ಜೇಮಿಸನ್ ವಿಕೆಟ್ ಒಪ್ಪಿಸಿದರು. ಫಿಲಿಪ್ ಸಾಲ್ಟ್ ಮತ್ತು ಮಯಾಂಕ್ ಅಗರ್ವಾಲ್ ಜೊತೆಯಾಗಿ ಗೆಲುವಿನ ಸಮೀಪಕ್ಕೆ ತಲುಪಿದ್ದರು. ಈ ವೇಳೆ ಮುಶೀರ್  ಖಾನ್ ಬೌಲಿಂಗ್‌ಗೆ ಮಯಾಂಕ್ ಅಗರ್ವಾಲ್ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬಂದ ಕ್ಯಾಪ್ಟನ್ ರಜತ್ ಪಾಟಿದಾರ್, ಸಾಲ್ಟ್‌ಗೆ ಜೊತೆಯಾದರು ಎರಡು ವಿಕೆಟ್ ನಷ್ಟಕ್ಕೆ  ಆರ್‌ಸಿಬಿ  ಪಂದ್ಯವನ್ನು ತನ್ನದಾಗಿಸಿಕೊಂಡಿತು. ಇನ್ನು ಬೌಲಿಂಗ್‌ನಲ್ಲಿ ಯಶ್ ದಯಾಳ್ 2, ಭುವನೇಶ್ವರ್ ಕುಮಾರ್ 1, ಸುಯಶ್ ಶರ್ಮಾ ಮತ್ತು ಜೋಶ್ ಹ್ಯಾಜಲ್​ವುಡ್ ತಲಾ 3 ವಿಕೆಟ್ ಪಡೆಯುವ ಮೂಲಕ ಪಂಜಾಬ್ ತಂಡವನ್ನು ಧೂಳಿಪಟ ಮಾಡಿದರು. ಈ ಬಾರಿಯ ಫೈನಲ್ ಪಂದ್ಯ ಜೂನ್ 3ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯ ಬಾರಿಗೆ 2016 ರಲ್ಲಿ ಐಪಿಎಲ್ ಫೈನಲ್ ಆಡಿತ್ತು. ಅದಾದ ನಂತರ, ಬೆಂಗಳೂರು ತಂಡವು ಹಲವಾರು ಬಾರಿ ಪ್ಲೇಆಫ್ ತಲುಪಿತು, ಆದರೆ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ಗೆಲುವಿನ ಅಡಿಪಾಯ ಹಾಕಿದವರು ಸುಯಶ್ ಶರ್ಮಾ ಮತ್ತು ಜೋಶ್ ಹ್ಯಾಜಲ್‌ವುಡ್, ಅವರು ತಲಾ 3 ವಿಕೆಟ್‌ಗಳನ್ನು ಪಡೆದರು. ಉಳಿದ ಕೆಲಸವನ್ನು ಫಿಲ್ ಸಾಲ್ಟ್ ಪೂರ್ಣಗೊಳಿಸಿದರು, ಅವರು 27 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರ ಸ್ಕೋರ್

ವಿರಾಟ್ ಕೊಹ್ಲಿ: 12, ಮಯಾಂಕ್ ಅಗರ್ವಾಲ್: 19 ಫಿಲಿಪ್ ಸಾಲ್ಟ್: 56, ರಜತ್ ಪಾಟೀದಾರ್:  15

ಪಂಜಾಜ್ ಕಿಂಗ್ಸ್ ಆಟಗಾರರ ಸ್ಕೋರ್

ಪ್ರಿಯಾಂಶ್ ಆರ್ಯ: 7, ಪ್ರಭ್‌ಸಿಮ್ರನ್ ಸಿಂಗ್: 18, ಜೋಶ್ ಇಂಗ್ಲಿಸ್: 4, ಶ್ರೇಯಸ್ ಅಯ್ಯರ್: 4, ನೆಹಾಲ್ ವಧೇರಾ: 8, ಶಶಾಂಕ್ ಸಿಂಗ್: 3, ಮುಶೀರ್ ಖಾನ್: 0, ಮಾರ್ಕಸ್ ಸ್ಟೋಯಿನಿಸ್: 26 ರನ್

 

 

ಐಪಿಎಲ್ 2025 ಕ್ವಾಲಿಫೈಯರ್ 1: ಪಂಜಾಬ್ ಪ್ಲೇಯಿಂಗ್ XI

ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯಿನಿಸ್, ಅಸ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ಕೈಲ್ ಜೇಮಿಸನ್.

ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಸಬ್: ವಿಜಯಕುಮಾರ್ ವೈಶಾಕ್, ಪ್ರವೀಣ್ ದುಬೆ, ಸೂರ್ಯಕುಮಾರ್ ಶೆಟ್ಟಿ, ಮುಶೀರ್ ಖಾನ್, ಸೇವಿಯರ್ ಬಾರ್ಟ್ಲೆಟ್.

ಐಪಿಎಲ್ 2025 ಕ್ವಾಲಿಫೈಯರ್ 1: ಬೆಂಗಳೂರು ಪ್ಲೇಯಿಂಗ್ XI

ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಪ್ಯಾಕ್ಟ್ ಸಬ್: ಮಯಾಂಕ್ ಅಗರ್ವಾಲ್, ರಸಿಕ್ ಸಲಾಮ್, ಮನೋಜ್ ಪಾಂಡೆ, ಟಿಮ್ ಸೀಫರ್ಟ್, ಸುಬ್ನಿಲ್ ಸಿಂಗ್.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

WPL 2026: ಹೊಸದಾಗಿ ಕ್ಯೂಟ್ ಫೋಟ್ ಶೇರ್ ಮಾಡಿದ RCB ಬ್ಯೂಟಿ ಲಾರೆನ್ ಬೆಲ್!
ಬಾಂಗ್ಲಾದೇಶ ಮಾತ್ರವಲ್ಲ ಪಾಕಿಸ್ತಾನವೂ ಟಿ20 ವಿಶ್ವಕಪ್‌ನಿಂದ ಔಟ್! ಸಿದ್ದತೆ ನಿಲ್ಲಿಸಿದ ಪಾಕ್!