ಡಬಲ್ ಅಂಕಿ ದಾಟಲು ಪರದಾಡಿದ ಪಂಜಾಬ್ ಆಟಗಾರರು; ಆರ್‌ಸಿಬಿಗೆ 102 ರನ್‌ಗಳ ಗುರಿ

Published : May 29, 2025, 08:53 PM ISTUpdated : May 29, 2025, 09:23 PM IST
pbks vs rcb 2025

ಸಾರಾಂಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ಮೊಹಾಲಿಯ ಮಹಾರಾಜ ಯಾದವಿಂದ್ರ ಸಿಂಗ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಬೆಂಗಳೂರು ನಾಯಕ ರಜತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ

ಮೊಹಾಲಿ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ಪವರ್ ಪ್ಲೇನಲ್ಲಿ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿತು. ಪ್ರಮುಖ ಆಟಗಾರರ ವಿಕೆಟ್ ಪಡೆಯುವ ಮೂಲಕ ಪಂದ್ಯದ ಆರಂಭದಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಭರವಸೆಯನ್ನು ಮೂಡಿಸಿತು. ಬೆಂಗಳೂರು ಬೌಲರ್‌ಗಳ ದಾಳಿಗೆ ತತ್ತರಿಸಿದ ಪಂಜಾಬ್ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 101 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 102 ರನ್‌ಗಳ ಗುರಿಯನ್ನು ನೀಡಿದೆ.

ಪ್ರಿಯಾಂಶ್ ಆರ್ಯ 7, ಪ್ರಭ್‌ಸಿಮ್ರನ್ ಸಿಂಗ್ 18, ಜೋಶ್ ಇಂಗ್ಲಿಸ್ 4, ಶ್ರೇಯಸ್ ಅಯ್ಯರ್ 4, ನೆಹಾಲ್ ವಧೇರಾ 8, ಶಶಾಂಕ್ ಸಿಂಗ್ 3, ಮುಶೀರ್ ಖಾನ್ 0, ಮಾರ್ಕಸ್ ಸ್ಟೋಯಿನಿಸ್ 26 ರನ್, ಹರ್ಪ್ರೀತ್ ಬ್ರಾರ್ 4 ಮತ್ತು ಅಸ್ಮತುಲ್ಲಾ ಒಮರ್ಜಾಯ್ 18 ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಬೆಂಗಳೂರು ತಂಡದ ಪರವಾಗಿ ಯಶ್ ದಯಾಳ್ 2, ಭುವನೇಶ್ವರ್ ಕುಮಾರ್ 1, ರೊಮಾರಿಯೊ ಶೆಫರ್ಡ್ 1, ಸುಯಶ್ ಶರ್ಮಾ 3, ಜೋಶ್ ಹ್ಯಾಜಲ್​ವುಡ್ 3 ವಿಕೆಟ್ ಪಡೆಯುವ ಮೂಲಕ ಪಂಜಾಬ್ ತಂಡವನ್ನು ಧೂಳಿಪಟ ಮಾಡಿದರು.

ಐಪಿಎಲ್ 2025 ಕ್ವಾಲಿಫೈಯರ್ 1: ಪಂಜಾಬ್ ಪ್ಲೇಯಿಂಗ್ XI

ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯಿನಿಸ್, ಅಸ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ಕೈಲ್ ಜೇಮಿಸನ್.

ಪಂಜಾಬ್ ಕಿಂಗ್ಸ್ ಇಂಪ್ಯಾಕ್ಟ್ ಸಬ್: ವಿಜಯಕುಮಾರ್ ವೈಶಾಕ್, ಪ್ರವೀಣ್ ದುಬೆ, ಸೂರ್ಯಕುಮಾರ್ ಶೆಟ್ಟಿ, ಮುಶೀರ್ ಖಾನ್, ಸೇವಿಯರ್ ಬಾರ್ಟ್ಲೆಟ್.

ಐಪಿಎಲ್ 2025 ಕ್ವಾಲಿಫೈಯರ್ 1: ಬೆಂಗಳೂರು ಪ್ಲೇಯಿಂಗ್ XI

ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಡಿತಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಪ್ಯಾಕ್ಟ್ ಸಬ್: ಮಯಾಂಕ್ ಅಗರ್ವಾಲ್, ರಸಿಕ್ ಸಲಾಮ್, ಮನೋಜ್ ಪಾಂಡೆ, ಟಿಮ್ ಸೀಫರ್ಟ್, ಸುಬ್ನಿಲ್ ಸಿಂಗ್.

ಐಪಿಎಲ್‌ನಲ್ಲಿ ಪಂಜಾಬ್ ಮತ್ತು ಬೆಂಗಳೂರು 35 ಬಾರಿ ಮುಖಾಮುಖಿಯಾಗಿದ್ದು, ಪಂಜಾಬ್ 18 ಬಾರಿ ಮತ್ತು ಬೆಂಗಳೂರು 17 ಬಾರಿ ಗೆದ್ದಿವೆ. ಇತ್ತೀಚಿನ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಬೆಂಗಳೂರು ಗೆದ್ದಿದೆ. ಬೆಂಗಳೂರು ಪಂಜಾಬ್ ವಿರುದ್ಧ ಗರಿಷ್ಠ 241 ರನ್ ಗಳಿಸಿದರೆ, ಪಂಜಾಬ್ ಬೆಂಗಳೂರು ವಿರುದ್ಧ ಗರಿಷ್ಠ 232 ರನ್ ಗಳಿಸಿದೆ. ಪಂಜಾಬ್ ವಿರುದ್ಧ ಬೆಂಗಳೂರು ಕನಿಷ್ಠ 84 ರನ್ ಮತ್ತು ಬೆಂಗಳೂರು ವಿರುದ್ಧ ಪಂಜಾಬ್ ಕನಿಷ್ಠ 88 ರನ್ ಗಳಿಸಿದೆ.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?
ಕೆಎಸ್‌ಸಿಎ ಚುನಾವಣೆ: ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!