ಸೂಪರ್ ಸಂಡೆಯಲ್ಲಿಂದು 2 ಹೈವೋಲ್ಟೇಜ್ ಮ್ಯಾಚ್; ಪಂಜಾಬ್‌ಗೆ ಪ್ಲೇ ಆಫ್ ಕನಸು, ಡೆಲ್ಲಿಗೆ ಡು ಆರ್ ಡೈ ಕದನ!

Published : May 18, 2025, 09:12 AM IST
ಸೂಪರ್ ಸಂಡೆಯಲ್ಲಿಂದು 2 ಹೈವೋಲ್ಟೇಜ್ ಮ್ಯಾಚ್; ಪಂಜಾಬ್‌ಗೆ ಪ್ಲೇ ಆಫ್ ಕನಸು, ಡೆಲ್ಲಿಗೆ ಡು ಆರ್ ಡೈ ಕದನ!

ಸಾರಾಂಶ

ಭಾರತ-ಪಾಕ್ ಯುದ್ಧಭೀತಿಯಿಂದ ಮೊಟಕುಗೊಂಡ ಪಂದ್ಯದ ಬಳಿಕ ಪಂಜಾಬ್ ಕಿಂಗ್ಸ್, ಪ್ಲೇ-ಆಫ್ ಸ್ಥಾನಕ್ಕಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದೆ. ಸ್ಟೋಯಿಸ್, ಇಂಗ್ಲಿಸ್ ಅನುಪಸ್ಥಿತಿಯಲ್ಲಿ ಮಿಚ್ ಓವನ್ ಪಾದಾರ್ಪಣೆ ಮಾಡಬಹುದು. ರಾಜಸ್ಥಾನ ತವರಿನ ಕೊನೆಯ ಪಂದ್ಯದಲ್ಲಿ ಸಂಜು ನಾಯಕತ್ವ ವಹಿಸಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಪ್ಲೇ-ಆಫ್ ಹೋರಾಟದಲ್ಲಿ ನಿರ್ಣಾಯಕ ಪಂದ್ಯ ಎದುರಿಸಲಿದೆ.

ಜೈಪುರ: ಭಾರತ-ಪಾಕಿಸ್ತಾನ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ದಿಢೀರ್ ಪಂದ್ಯ ರದ್ದುಗೊಂಡಾಗ ಆತಂಕದಿಂದ ಕ್ರೀಡಾಂಗಣ ತೊರೆದಿದ್ದ ಪಂಜಾಬ್ ಕಿಂಗ್ಸ್, ಭಾನುವಾರ ಒಂದು ವಾರದ ಬಳಿಕ ಮೈದಾನಕ್ಕಿಳಿಯಲಿದೆ. ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿರುವ ಪಂಜಾಬ್, ಪ್ಲೇ-ಆಫ್ ಸ್ಥಾನದ ಮೇಲೆ ಕಣ್ಣಿಟ್ಟಿದೆ.

11 ಪಂದ್ಯಗಳಿಂದ 15 ಅಂಕ ಹೊಂದಿರುವ ಪಂಜಾಬ್, 2 ಗೆಲುವು ಸಾಧಿಸಿದರೆ ನಿಸ್ಸಂದೇಹವಾಗಿ ಪ್ಲೇ-ಆಫ್‌ಗೇರಲಿದೆ. ಒಂದು ಗೆಲುವು ಸಾಧಿಸಿದರೂ ನಾಕೌಟ್ ಹಂತಕ್ಕೆ ಪ್ರವೇಶಿಸುವ ಅವಕಾಶ ಸಿಗಬಹುದು. ಆದರೆ ಇತರ ಪಂದ್ಯಗಳ ಫಲಿತಾಂಶ ತನ್ನ ಪರವಾಗಿ ದಾಖಲಾಗಬೇಕಿದೆ. ಪಂಜಾಬ್‌ಗೆ ಈ ಪಂದ್ಯದಲ್ಲಿ ಇಬ್ಬರು ಪ್ರಮುಖ ವಿದೇಶಿ ಆಟಗಾರರ ಅನುಪಸ್ಥಿತಿ ಕಾಡಲಿದೆ. ಮಾರ್ಕಸ್ ಸ್ಟೋಯಿಸ್ ಹಾಗೂ ಜೋಶ್ ಇಂಗ್ಲಿಸ್ ಭಾರತಕ್ಕೆ ವಾಪಸ್ ಬರುವುದಾಗಿ ಹೇಳಿದ್ದಾರಾದರೂ, ಈ ಪಂದ್ಯಕ್ಕೆ ಅವರು ಆಯ್ಕೆಗೆ ಲಭ್ಯರಿಲ್ಲ. ಹೀಗಾಗಿ, ಬಿಗ್‌ ಬ್ಯಾಶ್‌ನಲ್ಲಿ ಅಬ್ಬರಿಸಿದ್ದ ಮಿಚ್‌ ಓವನ್‌ ಪಾದಾರ್ಪಣೆ ಮಾಡಬಹುದು. ನ್ಯಾಂಡ್ರೆ ಬರ್ಗರ್ ಸಹ ಆಡುವ ನಿರೀಕ್ಷೆ ಇದೆ. 

ಮತ್ತೊಂದೆಡೆ ರಾಜಸ್ಥಾನ ಆಡಿರುವ 12 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ತಂಡಕ್ಕೆ ಇದು ತವರಿನಲ್ಲಿ ಈ ವರ್ಷ ಕೊನೆಯ ಪಂದ್ಯ. ಸಂಜು ಸ್ಯಾಮನ್ ಗಾಯದಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ಮರಳಿದ್ದಾರೆ. ಅವರೇ ತಂಡ ಮುನ್ನಡೆಸಲಿದ್ದಾರೆ. ರಾಜಸ್ಥಾನ ಬಾಕಿ ಇರುವ ಪಂದ್ಯಗಳಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯುವುದನ್ನು ತಪ್ಪಿಸಿಕೊಳ್ಳಲು ಎದುರು ನೋಡುತ್ತಿದೆ.

ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸ್ಟಾರ್

ಡೆಲ್ಲಿ ಕ್ಯಾಪಿಟಲ್ಸ್‌ಗಿಂದು ಡು ಆರ್ ಡೈ ಪಂದ್ಯ

ನವದೆಹಲಿ: ಒಂದು ವಾರ ಬಿಡುವಿನಿಂದ ಯಾವುದಾದರೂ ತಂಡಕ್ಕೆ ಅತಿಹೆಚ್ಚು ನಷ್ಟವಾಗಿದ್ದರೆ ಅಥವಾ ಆಗುವುದಿದ್ದರೆ ಅದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ. ಭಾನುವಾರ ಗುಜರಾತ್ ಟೈಟಾನ್ಸ್‌ನ ಸವಾಲು ಎದುರಾಗಲಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ, ಗುಜರಾತ್ ಅಧಿಕೃತವಾಗಿ ಪ್ಲೇ-ಆಫ್‌ಗೆ ಪ್ರವೇಶಿಸಲಿದೆ.

ತಂಡ ಕಳೆದ 5 ಪಂದ್ಯದಲ್ಲಿ ಕೇವಲ 1ರಲ್ಲಿ ಗೆದ್ದಿದ್ದು, ತನ್ನ ಪ್ಲೇ-ಆಫ್ ಹಾದಿಯನ್ನು ಕಠಿಣಗೊಳಿಸಿಕೊಂಡಿದೆ. 11 ಪಂದ್ಯಗಳಿಂದ 13 ಅಂಕ ಗಳಿಸಿರುವ ಡೆಲ್ಲಿ, ಪ್ಲೇ-ಆಫ್‌ನಲ್ಲಿ ಸ್ಥಾನ ಪಡೆಯಲು ಬಾಕಿ ಇರುವ ಮೂರೂ ಪಂದ್ಯಗಳಲ್ಲಿ ಗೆಲ್ಲಬೇಕು. ಆದರೆ, ತಂಡ ಕೆಲ ಸಮಸ್ಯೆಗಳನ್ನು ಹೊಂದಿದ್ದು, ಸೂಕ್ತ ಪರಿಹಾರ ಸಿಗದಿದ್ದರೆ ರೇಸ್‌ನಿಂದ ಹೊರಬೀಳುವುದು ಖಚಿತ.

ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿ ಆಸ್ಟ್ರೇಲಿಯಾಗೆ ವಾಪಸಾದ ತಾರಾ ವೇಗಿ ಸ್ಟಾರ್ಕ್ ಭಾರತಕ್ಕೆ ವಾಪಸಾಗಿಲ್ಲ. ಇನ್ನು ಸ್ಟಬ್ ಪ್ಲೇ-ಆಫ್‌ಗೆ ಲಭ್ಯರಿಲ್ಲ. ಇನ್ನು, ಸ್ಟಾರ್ಕ್ ಬದಲು ತಂಡಕ್ಕೆ ಆಯ್ಕೆಯಾಗಿರುವ ಬಾಂಗ್ಲಾದ ಮುಸ್ತಾಫಿಜುರ್ ರಹಮಾನ್, ಭಾನುವಾದ ಪಂದ್ಯಕ್ಕೆ ಲಭ್ಯರಿರುವುದು ಅನುಮಾನ. ಹೀಗಾಗಿ, ಡೆಲ್ಲಿ ಕೇವಲ 3 ವಿದೇಶಿ ಆಟಗಾರರೊಂದಿಗೆ ಆಡಿದರೆ ಅಚ್ಚರಿಯಿಲ್ಲ.

ಮತ್ತೊಂದೆಡೆ ಗುಜರಾತ್ ಟೈಟಾನ್ಸ್‌ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದೆ. ತಂಡದ ಅಗ್ರ-3 ಬ್ಯಾಟರ್ ಗಳಾದ ಶುಭಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ತಲಾ 500 ರನ್ ಗಳಿಸಿದ್ದಾರೆ. ತಂಡ ಆಡಿರುವ 11 ಪಂದ್ಯಗಳಲ್ಲಿ ಗಳಿಸಿರುವ ಒಟ್ಟು ರನ್‌ಗಳಲ್ಲಿ ಈ ಮೂವರೇ ಶೇ.70ಕ್ಕಿಂತ ಹೆಚ್ಚು ಕೊಡುಗೆ ನೀಡಿದ್ದಾರೆ. ಈ ಮೂವರ ಮೇಲೆಯೇ ತಂಡ ಹೆಚ್ಚು ಅವಲಂಬಿತಗೊಳ್ಳಲಿದೆ. ಈ ಪಂದ್ಯದಲ್ಲಿ ವೇಗಿ ರಬಾಡ ಕೂಡ ಆಡುವ ನಿರೀಕ್ಷೆ ಇದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!