
ಮುಂಬೈ: ಸತತ 2 ಗೆಲುವಿನೊಂದಿಗೆ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದರೂ ಬಳಿಕ ತನ್ನದೇ ತವರಿನಲ್ಲಿ ಎದುರಾದ ಸೋಲು ಆರ್‌ಸಿಬಿಯನ್ನು ಕುಗ್ಗಿಸಿದೆ. ಆದರೆ ತಂಡ ಕಮ್‌ಬ್ಯಾಕ್‌ಗೆ ಹೆಸರುವಾಸಿ. ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ನ ಎದುರಿಸಲಿರುವ ಆರ್ ಸಿಬಿ, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ. ಕೋಲ್ಕತಾ ಹಾಗೂ ಚೆನ್ನೈ ವಿರುದ್ಧ ಗೆದ್ದಿದ್ದ ಆರ್‌ಸಿಬಿ ಕಳೆದ ವಾರ ಬೆಂಗಳೂರಿನಲ್ಲಿ ಗುಜರಾತ್ ವಿರುದ್ಧ ಪರಾಭವಗೊಂಡಿತ್ತು. ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲು ಕಾಯುತ್ತಿರುವ ತಂಡಕ್ಕೆ ಮುಂಬೈಯನ್ನೂ ಹೊಸಕಿ ಹಾಕುವ ನಿರೀಕ್ಷೆಯಲ್ಲಿದೆ.
ಕೆಕೆಆರ್ ವಿರುದ್ಧ 59 ರನ್ ಗಳಿಸಿದ್ದ ಕೊಹ್ಲಿ ನಂತರದ 2 ಪಂದ್ಯಗಳಲ್ಲಿ ಮಿಂಚಿಲ್ಲ. ಆದರೆ ತಂಡದಲ್ಲಿ ಸ್ಫೋಟಕ ಆಟಗಾರರಿಗೆ ಕೊರತೆಯೇನೂ ಇಲ್ಲ, ಫಿಲ್ ಸಾಲ್ಫ್ ದೇವದತ್ ಪಡಿಕ್ಕಲ್ ಜೊತೆ ನಾಯಕ ರಜತ್ ಪಾಟೀದಾರ್ ಅಬ್ಬರಿಸಲು ಕಾಯುತ್ತಿದ್ದಾರೆ. ಟಮ್ ಡೇವಿಡ್, ಲಿವಿಂಗ್ ಸ್ಟೋನ್ ಅಬ್ಬರಿಸಿದರೆ ಮುಂಬೈಗೆ ತಂಡದ ಬೌಲಿಂಗ್ ವಿಭಾಗ ಕೂಡಾ ಬಲಿಷ್ಠವಾಗಿದ್ದು, ಭುವನೇಶ್ವರ್ ಕುಮಾರ್. ಹೇಜಲ್‌ವುಡ್ ತಂಡದ ಆಧಾರಸ್ತಂಭ, ಕೃನಾಲ್, ಸುಯಶ್ ಶರ್ಮಾ ಸ್ಪಿನ್ ಮೋಡಿ ಮೂಲಕ ಮುಂಬೈನ ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.
ಕಳಪೆ ಆಟ
ಮತ್ತೊಂದೆಡೆ ಮುಂಬೈ ಈ ಬಾರಿ ನಿರೀಕ್ಷಿತ ಆಟವಾಢೋಈಲ್ಲ. ಮೊದಲ 4 ಪಂದ್ಯಗಳಲ್ಲಿ ತಂಡದ ಕೇವಲ 2 ಬ್ಯಾಟರ್‌ಗಳು ಮಾತ್ರ ವೈಯಕ್ತಿಕ ಅರ್ಧಶತಕ ಬಾರಿಸಿದ್ದಾರೆ. ಸೂರ್ಯಕುಮಾರ್ ಯಾದವ್, ರಿಕೆಲ್ಟನ್ ಹೊರತುಪಡಿಸಿ ಇತರರಿಂದ 50+ ಸ್ಟೋರ್ ದಾಖಲಾಗಿಲ್ಲ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ, ಲಖನೌ ವಿರುದ್ಧ ವಿಫಲರಾಗಿದ್ದ ತಿಲಕ್ ವರ್ಮಾ, ನಮನ್ ಧೀರ್ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ. ವೇಗಿ ಜಸ್‌ಪ್ರೀತ್ ಬೂಮ್ರಾ ಪುನರಾಗಮನದಿಂದ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.
ಇದನ್ನೂ ಓದಿ: ಅದೊಂದೇ ವರ್ಷದಲ್ಲಿ 2 ಸಲ ಹಾರ್ಟ್ ಬ್ರೇಕ್ ಆಗಿದೆ: ಆ ವಿಷಯದ ಬಗ್ಗೆ ಮೊದಲ ಸಲ ಮನಬಿಚ್ಚಿ ಮಾತಾಡಿದ ಕೊಹ್ಲಿ!
ವಾಂಖೆಡೆಯಲ್ಲಿ 2015ರ ಬಳಿಕ ಗೆದ್ದಿಲ್ಲ ಆರ್‌ಸಿಬಿ!
ಆರ್‌ಬಿ ತಂಡ ಮುಂಬೈನ ವಾಖೆಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ ಕಳೆದ 10 ವರ್ಷಗಳಲ್ಲಿ ಒಂದೂ ಪಂದ್ಯ ಗೆದ್ದಿಲ್ಲ. ಇಲ್ಲಿ 2015ರಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 39 ರನ್ ಜಯಗಳಿಸಿತ್ತು. ಆ ಬಳಿಕ ತಂಡಕ್ಕೆ ಗೆಲುವು ಸಿಕ್ಕಿಲ್ಲ. ಒಟ್ಟಾರೆಯಾಗಿ, ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುವ ಆರ್‌ಸಿಬಿ 11 ಪಂದ್ಯಗಳನ್ನಾಡಿದೆ. 3ರಲ್ಲಿ ಮಾತ್ರ ಗೆದ್ದಿದ್ದು. ಪಂದ್ಯಗಳಲ್ಲಿ ಸೋಲನುಭವಿಸಿದೆ. ಇದುವರೆಗೂ ಎರಡು ತಂಡಗಳು 33 ಬಾರಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 14 ಮತ್ತು ಮುಂಬೈ ಇಂಡಿಯನ್ಸ್ 19ರಲ್ಲಿ ಗೆಲುವು ದಾಖಲಿಸಿದೆ.
ಪಂದ್ಯಕ್ಕೆ ಗೈರಾಗಿದ್ದ ಜೂಮ್ರಾ ಕಮ್‌ಬ್ಯಾಕ್
ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ವೇಳೆ ಗಾಯಗೊಂಡಿದ್ದ ಬೂಮ್ರಾ, ಈ ಬಾರಿ ಐಪಿಎಲ್ ಆರಂಭಿಕ 4 ಪಂದ್ಯಗಳಿಗೆ ಗೈರಾಗಿದ್ದರು.
ಭಾನುವಾರ ಅವರು ಮುಂಬೈ ತಂಡವನ್ನು ಕೂಡಿಕೊಂಡಿದ್ದಾರೆ. ಇದರ ಫೋಟೋ, ವಿಡಿಯೋಗಳನ್ನು ಫ್ರಾಂಚೈಸಿ ಹಂಚಿಕೊಂಡಿದೆ. ಅಲ್ಲದೆ, ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಬೂಮ್ರಾ ಲಭ್ಯವಿರುವುದಾಗಿ ಮುಂಬೈ ಕೋಡ್ ಮಹೇಲ ಜಯವರ್ಧನೆ ಸ್ಪಷ್ಟಪಡಿಸಿದ್ದಾರೆ. 'ಬೂಮ್ರಾ ಭಾನುವಾರ ಅಭ್ಯಾಸ ನಡೆಸಿದ್ದಾರೆ. ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಅವರು ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಲಭ್ಯವಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸಿಎಸ್‌ಕೆ ಕಳಪೆ ಆಟ, ಟೀಕೆ ಬೆನ್ನಲ್ಲೇ ಐಪಿಎಲ್ ನಿವೃತ್ತಿ ಸುದ್ದಿ ಕುರಿತು ಮೌನ ಮುರಿದ ಧೋನಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.