ಎಡಗೈ ವೇಗಿ ಅರ್ಶದೀಪ್ ಸಿಂಗ್ 18 ಕೋಟಿ ರುಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ
ಜೆಡ್ಡಾ: ಬಹುನಿರೀಕ್ಷಿತ 2025ರ ಐಪಿಎಲ್ ಮೆಗಾ ಹರಾಜಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಮೊದಲ ಆಟಗಾರನಾಗಿ ಹರಾಜಿಗೆ ಬಂದ ಎಡಗೈ ವೇಗಿ ಅರ್ಶದೀಪ್ ಸಿಂಗ್ 18 ಕೋಟಿ ರುಪಾಯಿಗೆ ಪಂಜಾಬ್ ಕಿಂಗ್ಸ್ ತೆಕ್ಕೆಗೆ ಜಾರಿದ್ದಾರೆ. ಮರ್ಕ್ಯೂ ಆಟಗಾರನಾಗಿ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಎಡಗೈ ವೇಗಿ ಆರ್ಶದೀಪ್ ಸಿಂಗ್ ಅವರನ್ನುಆರ್‌ಟಿಎಂ ಕಾರ್ಡ್ ಬಳಸಿ 18 ಕೋಟಿ ರುಪಾಯಿಗೆ ರೀಟೈನ್ ಮಾಡಿಕೊಂಡಿದೆ.
2025ರ ಐಪಿಎಲ್ ಮೆಗಾ ಹರಾಜಿಗೆ ಸೌದಿ ಅರೇಬಿಯಾದ ಜೆಡ್ಡಾ ಆತಿಥ್ಯ ವಹಿಸಿದೆ. ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದ ಅರ್ಶದೀಪ್ ಸಿಂಗ್ ಅವರನ್ನ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಖರೀದಿಸಿದ್ದ ಅರ್ಶದೀಪ್ ಸಿಂಗ್ ಅವರನ್ನು ಖರೀದಿಸಲು ಕೊನೆಯಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು. 11 ಕೋಟಿವರೆಗೂ ಆರ್‌ಸಿಬಿ ಬಿಡ್ ಮಾಡಿತು. ಆದರೆ ಮತ್ತೆ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಪೈಪೋಟಿ ಏರ್ಪಟ್ಟಿತು.
ಇನ್ನು ರಾಜಸ್ಥಾನ ರಾಯಲ್ಸ್ ತಂಡವು 13 ಕೋಟಿ ರುಪಾಯಿಗೆ ಬಿಡ್ ಮಾಡಿತು. ಆದರೆ ಕೊನೆಯ ಕ್ಷಣದಲ್ಲಿ ಕಳೆದ ಆವೃತ್ತಿಯ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 14.25 ಕೋಟಿ ರುಪಾಯಿಗೆ ಬಿಡ್ ಮಾಡಿತು. ಆದರೆ ಪಟ್ಟುಬಿಡದೇ ಬಿಡ್ ಮಾಡಿದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 15.50 ಕೋಟಿ ರುಪಾಯಿಗೆ ಬಿಡ್ ಮಾಡಿತು. ಕೊನೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವು 15.75 ಕೋಟಿಗೆ ಬಿಡ್ ಮಾಡಿತು. ಆದರೆ ಪಂಜಾಬ್ ಕಿಂಗ್ಸ್ ತಂಡವು 15.75 ಕೋಟಿ ರುಪಾಯಿಗೆ ಆರ್‌ಟಿಎಂ ಬಳಸಿತು. ಆದರೆ ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 18 ಕೋಟಿ ರುಪಾಯಿಗೆ ಅಂತಿಮ ಬಿಡ್ ಮಾಡಿತು. ಆದರೆ ಪಂಜಾಬ್ ಕಿಂಗ್ಸ್ ಮತ್ತೆ ಆರ್‌ಟಿಎಂ ಬಳಸಿ 18 ಕೋಟಿ ರುಪಾಯಿಗೆ ತನ್ನಲ್ಲೇ ಉಳಿಸಿಕೊಂಡಿತು.
ಐಪಿಎಲ್‌ನಲ್ಲಿ 65 ಪಂದ್ಯಗಳನ್ನಾಡಿರುವ ಅರ್ಶದೀಪ್ ವಿಕೆಟ್ ಕಬಳಿಸಿದ್ದಾರೆ. 22 ರನ್‌ಗಳಿಗೆ 5 ವಿಕೆಟ್ ಕಬಳಿಸಿದ್ದು, ಅರ್ಶದೀಪ್ ಸಿಂಗ್ ವೈಯುಕ್ತಿಕ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ.