ಐಪಿಎಲ್ 2025 ಟೂರ್ನಿ ಕುರಿತು ಹಲವರು ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಆ್ಯಡಮ್ ಗಿಲ್‌ಕ್ರಿಸ್ಟ್ ಈ ಬಾರಿಯ ಐಪಿಎಲ್ ಅಂತ್ಯದ ವೇಳೆ ಆರ್‌ಸಿಬಿ ಯಾವ ಸ್ಥಾನದಲ್ಲಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ಕಾರಣನ್ನೂ ಕೊಟ್ಟಿದ್ದಾರೆ.
ಬೆಂಗಳೂರು(ಮಾ.21) ಐಪಿಎಲ್ 2025 ಟೂರ್ನಿ ಆರಂಭಗೊಳ್ಳುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. ಹೊಸ ನಾಯಕತ್ವ, ಹೊಸ ತಂಡ, ಹೊಸ ಜೋಶ್‌ನೊಂದಿಗೆ ಆರ್‌ಸಿಬಿ ಕಣಕ್ಕಿಳಿಯುತ್ತಿದೆ. ಆರ್‌ಸಿಬಿ ಅಭಿಮಾನಿಗಳು ಇದೀಗ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಆ್ಯಡಮ್ ಗಿಲ್‌ಕ್ರಿಸ್ಟ್ ಆರ್‌ಸಿಬಿ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಗಿಲ್‌ಗ್ರಿಸ್ಟ್ ಹೇಳಿದ ಭವಿಷ್ಯ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಅಷ್ಟಕ್ಕೂ ಗಿಲ್‌ಕ್ರಿಸ್ಟ್ ಹೇಳಿದ್ದೇನು?
ಇಂಗ್ಲೆಂಡ್ ಮಾಡಿ ನಾಯಕ ಮೈಕಲ್ ವಾನ್ ಜೊತೆ ನಡೆಸಿದ ಪಾಡ್‌ಕಾಸ್ಟ್‌ನಲ್ಲಿ ಗಿಲ್ ಕ್ರಿಸ್ಟ್ ಈ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿ ಕುರಿತ ಪ್ರಶ್ನೆಗೆ ಉತ್ತರಿಸಿದ ಗಿಲ್‌ಕ್ರಿಸ್ಟ್ 2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಕೊನೆಯ ಸ್ಥಾನ ಪಡೆದುಕೊಳ್ಳಲಿದೆ ಎಂದಿದ್ದಾರೆ. ಆರ್‌ಸಿಬಿ ತಂಡದ ಆಟಾಗರರು, ಬ್ಯಾಲೆನ್ಸ್ ನೋಡಿದರೆ ಹಾಗೇ ಅನಿಸುತ್ತೆ ಎಂದಿದ್ದಾರೆ. ತಮಾಷೆಯಾಗಿ ಮಾತನಾಡಿದ ಗಿಲ್‌ಕ್ರಿಸ್ಟ್ ಆರ್‌ಸಿಬಿ ತಂಡದಲ್ಲಿ ಇಂಗ್ಲೀಷ್‌ಮನ್ಸ್ ಹೆಚ್ಚಿದ್ದಾರೆ. ಹೀಗಾಗಿ ಗೆಲ್ಲವುದು ಕಷ್ಟ ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ.
ನಾನು ಸಸ್ಯಹಾರಿ ಆದ್ರೆ ವೇಗನ್ ಅಲ್ಲವೆಂದಿದ್ದೇಕೆ ವಿರಾಟ್ ಕೊಹ್ಲಿ?
ದಯವಿಟ್ಟು ನನ್ನನ್ನು ಕ್ಷಮಿಸಿ, ಇದು ವಿರಾಟ್ ಕೊಹ್ಲಿ ವಿರುದ್ಧ ಅಲ್ಲ, ಅಥವಾ ಆರ್‌ಸಿಬಿ ವಿರುದ್ಧ ಹೇಳಿಕೆಯನ್ನು ನೀಡುತ್ತಿಲ್ಲ. ಆರ್‌ಸಿಬಿಯ ಪ್ರೀತಿಯ ಅಭಿಮಾನಿಗಳಿಗೆ ನೋವಾಗಬೇಕೆಂದು ಈ ಹೇಳಿಕೆ ನೀಡುತ್ತಿಲ್ಲ. ಅಭಿಮಾನಿಗಳು ಆರ್‌ಸಿಬಿಯೆ ಆಯ್ಕೆ ಸಮಿತಿ, ಹರಾಜಿನಲ್ಲಿ ಆಯ್ಕೆ ಮಾಡಿದವರನ್ನು ಪ್ರಶ್ನೆ ಕೇಳಬೇಕು. ಆನ್ ಪೇಪರ್ ತಂಡವನ್ನು ಬ್ಯಾಲೆನ್ಸ್ ಮಾಡಿದರೆ ಸಾಲದು ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ.
ಆರ್‌ಸಿಬಿ ಇಂಗ್ಲೀಷ್ ಆಟಗಾರರಿಗೆ ಅತೀ ಹೆಚ್ಚಿನ ಹಣ ಸುರಿದು ಹರಾಜಿನಲ್ಲಿ ಖರೀದಿಸಿದೆ. ಆರ್‌ಸಿಬಿಯಲ್ಲಿ ಮೂವರು ಇಂಗ್ಲೀಷ್ ಆಟಗಾರರಿದ್ದಾರೆ. ಈ ಮೂವರು ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇದು ತಂಡದ ಬ್ಯಾಲೆನ್ಸ್ ತಪ್ಪಿಸುತ್ತಿದೆ. ಆರ್‌ಸಬಿ ಫಿಲ್ ಸಾಲ್ಟ್‌ಗೆ 11.5 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಲಿಯಾಮ್ ಲಿವಿಂಗ್‌ಸ್ಟೋನ್ 8.75 ಕೋಟಿ ರೂಪಾಯಿ, ಜಾಕೋಬ್ ಬೆಥೆಲ್ 2.6 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
ಆರ್‌ಸಿಬಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಡಬೇಕು. ತಂಡದ ಓವ್ರಾಲ್ ಪರ್ಫಾಮೆನ್ಸ್ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಒಂದಿಬ್ಬರು ಆಟಗಾರರು ಅಬ್ಬರಿಸಿದರೂ ತಂಡಕ್ಕೆ ಗೆಲುವು ಸಿಗುವುದಿಲ್ಲ ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ. ಗಿಲ್‌ಕ್ರಿಸ್ಟ್ ಭವಿಷ್ಯ ಆರ್‌ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆರ್‌ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದಿದ್ದಾರೆ.
IPL 2025 ಆರ್‌ಸಿಬಿ-ಕೆಕೆಆರ್ ನಡುವಿನ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯೋದೇ ಡೌಟ್!