ಐಪಿಎಲ್ 2024 ಟೂರ್ನಿಯಲ್ಲಿ ಮೊದಲ ಶತಕ ದಾಖಲಾಗಿದೆ. ಈ ಸಾಧನೆಗೆ ಆರ್‌ಸಿಬಿ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಅಬ್ಬರಿಸಿದ ಕೊಹ್ಲಿ ಶತಕ ಸಿಡಿಸಿದ್ದರೆ. ಇದು ಕೊಹ್ಲಿಯ 8ನೇ ಐಪಿಎಲ್ ಶತಕವಾಗಿದೆ. ಈ ಶತಕದೊಂದಿಗೆ ಕೊಹ್ಲಿ ಕೆಲ ದಾಖಲೆ ಬರೆದಿದ್ದಾರೆ.
ಜೈಪುರ(ಏ.06) ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 19ನೇ ಪಂದ್ಯದಲ್ಲಿ ಮೊದಲ ಶತಕ ದಾಖಲಾಗಿದೆ. ವಿಶೇಷ ಅಂದರೆ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ 67 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಕೊಹ್ಲಿ ಸೆಂಚುರಿಯಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು. ಈ ಸೆಂಚುರಿ ಮೂಲಕ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದಿದ್ದಾರೆ. ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ 8 ಶತಕ ಸಾಧನೆ ಮಾಡಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲಸಿಸ್ ಸ್ಫೋಟಕ ಆರಂಭ ನೀಡಿದರು. ಡುಪ್ಲೆಸಿಸ್ ವಿಕೆಟ್ ಪತನದ ಬಳಿಕವೂ ಕೊಹ್ಲಿ ಅಬ್ಬರ ಮುಂದುವರಿಯಿತು. ಜೈಪುರ ಮೈದಾನದಲ್ಲಿ ಕೊಹ್ಲಿ ಪ್ರತಿ ಬೌಂಡರಿ ಸಿಕ್ಸರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಳೆದ ಪಂದ್ಯಗಳಲ್ಲಿನ ಸೋಲು ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಆದರೆ ರಾಜಸ್ಥಾನ ವಿರುದ್ದ ಕೊಹ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸಿಡಿಸಿದ ಸೆಂಚುರಿ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಳಿಸಿದೆ.
IPL 2024 ಕೊಹ್ಲಿ ಸೆಂಚುರಿ ಆಟಕ್ಕೆ ಸೃಷ್ಟಿಯಾಯ್ತು ದಾಖಲೆ, ರಾಜಸ್ಥಾನಕ್ಕೆ 184 ರನ್ ಟಾರ್ಗೆಟ್!
ಕೊಹ್ಲಿ 98 ರನ್ ಗಡಿ ತಲುಪುತ್ತಿದ್ದಂತೆ ಕುಳಿತಿದ್ದ ಅಭಿಮಾನಿಗಳು ಎದ್ದು ನಿಂತಿದ್ದರು. ಇದೇ ವೇಳೆ ಕ್ಯಾಮರೂನ್ ಗ್ರೀನ್ ರನೌಟ್ ಆತಂಕವೂ ಎದುರಾಗಿತ್ತು. ಆದರೆ ಮತ್ತೆರೆಡು ಸಿಂಗಲ್ಸ್ ಮೂಲಕ ಕೊಹ್ಲಿ ಸೆಂಚುರಿ ಪೂರೈಸಿದರು. ಈ ಆವೃತ್ತಿಯ ಮೊದಲ ಶತಕ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಾಧನೆ
ವಿರಾಟ್ ಕೊಹ್ಲಿ: 8
ಕ್ರಿಸ್ ಗೇಲ್: 6
ಜೋಸ್ ಬಟ್ಲರ್: 5
ಕೆಎಲ್ ರಾಹುಲ್ : 4
ಡೇವಿಡ್ ವಾರ್ನರ್ : 4
ಶೇನ್ ವ್ಯಾಟ್ಸನ್ : 4
72 ಎಸೆತ ಎದುರಿಸಿದ ವಿರಾಟ್ ಕೊಹ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಜೇಯ 113 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 183 ರನ್ ಸಿಡಿಸಿತು. ಆದರೆ ಕೊಹ್ಲಿ ಸೆಂಚುರಿ ಸಿಡಿಸಲು ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಎಸೆತ ತೆಗೆದುಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಎಸೆತದಲ್ಲಿ ಸೆಂಚುರಿ ಸಿಡಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡೆ ಮೊದಲಿಗರಾಗಿದ್ದಾರೆ. ಇಬ್ಬರ 67 ಎಸೆತದಲ್ಲಿ ಸೆಂಚುರಿ ಸಾಧನೆ ಮಾಡಿದ್ದಾರೆ.
ಧೋನಿ, ಕೊಹ್ಲಿ ಹೇರ್‌ಕಟ್ ಗೆ ಇಷ್ಟು ರೇಟಾ? ಆಲಿಮ್ ಹಕೀಂ ಹೇಳ್ತಾರೆ ಕೇಳಿ
ಗರಿಷ್ಠ ಎಸೆತದಲ್ಲಿ ಐಪಿಎಲ್ ಸೆಂಚುರಿ
ಮನೀಶ್ ಪಾಂಡೆ(67) ಎಸೆತ
ವಿರಾಟ್ ಕೊಹ್ಲಿ(67) ಎಸೆತ
ಸಚಿನ್ ತೆಂಡೂಲ್ಕರ್(66) ಎಸೆತ
ಡೇವಿಡ್ ವಾರ್ನರ್(66) ಎಸೆತ
ಜೋಸ್ ಬಟ್ಲರ್(66) ಎಸೆತ