ಅಂದು ಬೇಡವಾಗಿದ್ದ ಆಟಗಾರನೇ ಈಗ ಪಂಜಾಬ್ ಕಿಂಗ್ಸ್ ಪಾಲಿನ ಹೀರೋ..! ಆ ಶಶಾಂಕ್ ಬದಲು ಈ ಶಶಾಂಕ್ ಖರೀದಿಸಿದ ಪಂಜಾಬ್

By Suvarna News  |  First Published Apr 6, 2024, 4:41 PM IST

ಪ್ರತಿ ಐಪಿಎಲ್ ಪಂದ್ಯದಲ್ಲೂ ಯುವ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಆದ್ರೀಗ ಒಂದು ಹೊಸ ಪ್ರತಿಭೆ ಹೊರಬಂದಿದೆ. ಆದ್ರೆ ಈತನನ್ನ ಯುವ ಪ್ರತಿಭೆ ಅನ್ನಲು ಸಾಧ್ಯವಿಲ್ಲ. ಯಾಕಂದ್ರೆ ಈಗ ಆತನ ವಯಸ್ಸು 32 ವರ್ಷ. ಆತನೇ ಮೊನ್ನೆ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್‌ ಕಿಂಗ್ಸ್ ತಂಡವನ್ನು ಗೆಲ್ಲಿಸಿದ ಹೀರೋ ಶಶಾಂಕ್‌ ಸಿಂಗ್‌.


ಬೆಂಗಳೂರು(ಏ.06): ಪಂಜಾಬ್ ಕಿಂಗ್ಸ್ ತಂಡ ಶಶಾಂಕ್ ಸಿಂಗ್ ಹೆಸರನ್ನ ಕನ್ಫ್ಯೂಸ್ ಮಾಡಿಕೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಮಿನಿ ಹರಾಜಿನ ಸಮಯದಲ್ಲಿ ಅದು ಭಾರಿ ಸುದ್ದಿಯಾಗಿತ್ತು. ಆದ್ರೆ ಅಂದು ಬೇಸರವಾಗಿದ್ದ ಪಂಜಾಬ್, ಇಂದು ನಿರಾಳವಾಗಿದೆ. ಯಾಕಂದ್ರೆ ಅತನೊಬ್ಬನೇ ನಿಂತುಕೊಂಡು ಪಂದ್ಯ ಗೆಲ್ಲಿಸಿಕೊಟ್ಟಿದ್ದಾನೆ. ಆ ಅನಾಮಿಕ ಇಲ್ಲಿದ್ದಾನೆ ನೋಡಿ.

ಅಂದು ಕನ್ಫ್ಯೂಷನ್ ಮಾಡಿಕೊಂಡಿದ್ದ ಪಂಜಾಬ್ ಕಿಂಗ್ಸ್

Latest Videos

undefined

ಪ್ರತಿ ಐಪಿಎಲ್ ಪಂದ್ಯದಲ್ಲೂ ಯುವ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಆದ್ರೀಗ ಒಂದು ಹೊಸ ಪ್ರತಿಭೆ ಹೊರಬಂದಿದೆ. ಆದ್ರೆ ಈತನನ್ನ ಯುವ ಪ್ರತಿಭೆ ಅನ್ನಲು ಸಾಧ್ಯವಿಲ್ಲ. ಯಾಕಂದ್ರೆ ಈಗ ಆತನ ವಯಸ್ಸು 32 ವರ್ಷ. ಆತನೇ ಮೊನ್ನೆ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್‌ ಕಿಂಗ್ಸ್ ತಂಡವನ್ನು ಗೆಲ್ಲಿಸಿದ ಹೀರೋ ಶಶಾಂಕ್‌ ಸಿಂಗ್‌.

ಟೈಟಾನ್ಸ್ ಎದುರು 29 ಬಾಲ್‌ನಲ್ಲಿ 61 ರನ್

ಮೊನ್ನೆ ಅಹಮದಾಬಾದ್ನಲ್ಲಿ ಗುಜರಾತ್‌ ಟೈಟನ್ಸ್ ನೀಡಿದ್ದ 200 ರನ್‌ ಟಾರ್ಗೆಟ್ ಬೆನ್ನಟ್ಟಿದ್ದ ಪಂಜಾಬ್‌ ಕಿಂಗ್ಸ್ ಒಂದು ಹಂತದಲ್ಲಿ, 111 ರನ್‌ಗೆ 5 ವಿಕೆಟ್ ಕಳೆದುಕೊಂಡು  ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸಿಗಿಳಿದ ಶಶಾಂಕ್ ಸಿಂಗ್, ಕೇವಲ 29 ಬಾಲ್‌ನಲ್ಲಿ 6 ಬೌಂಡ್ರಿ, 4 ಸಿಕ್ಸರ್ ಸಹಿತ ಅಜೇಯ 61 ರನ್ ಬಾರಿಸಿದ್ರು. ಅಷ್ಟು ಮಾತ್ರವಲ್ಲ. ಪಂಜಾಬ್‌ ಗೆಲುವಿಗೆ ಕೊನೆಯಲ್ಲಿ 27 ಎಸೆತಗಳಲ್ಲಿ 50 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಶಶಾಂಕ್‌ ಸಿಂಗ್ ಹಾಗೂ ಅಷುತೋಷ್‌ ಶರ್ಮಾ 43 ರನ್‌ಗಳ ನಿರ್ಣಾಯಕ ಜೊತೆಯಾಟವನ್ನಾಡಿದ್ರು. ಕೊನೆಗೆ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ ಶಶಾಂಕ್‌, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Breaking: ಮುಂಬೈ ಇಂಡಿಯನ್ಸ್ ಬಿಡಲು ರೋಹಿತ್-ಬುಮ್ರಾ ರೆಡಿ..! ಸೂರ್ಯನ ಪಾಡು?

ಗುಜರಾತ್‌ ಟಟಾನ್ಸ್ ವಿರುದ್ಧ ಪಂಜಾಬ್‌ ಕಿಂಗ್ಸ್ ತಂಡವನ್ನು ಗೆಲ್ಲಿಸಿದ ಶಶಾಂಕ್‌ ಸಿಂಗ್‌ ಯಾರು ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. 32ರ ಪ್ರಾಯದ ಶಶಾಂಕ್‌, ಛತ್ತೀಸಗಢ ತಂಡದ ಪರ ದೇಶಿ ಕ್ರಿಕೆಟ್‌ ಆಡುತ್ತಿದ್ದಾರೆ. ಈ ಹಿಂದೆ ಅವರು ಡೆಲ್ಲಿ ಕ್ಯಾಪಿಟಲ್ಸ್‌, ರಾಜಸ್ಥಾನ್‌ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡಿದ್ದರು. ಆದರೆ, ಈ ತಂಡಗಳ ಪರ ಆಡಲು ಅವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. 2022ರಲ್ಲಿಯೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಅವರು, ಇಲ್ಲಿಯವರೆಗೂ ಆಡಿದ 14 ಐಪಿಎಲ್‌ ಪಂದ್ಯಗಳಿಂದ 160 ರನ್‌ ಗಳಿಸಿದ್ದಾರೆ. ಗುಜರಾತ್‌ ಟೈಟನ್ಸ್ ಎದುರು ಗುರುವಾರ ಸಿಡಿಸಿದ 61 ರನ್‌ ಅವರ ವೈಯಕ್ತಿಕ ಗರಿಷ್ಠ ಮೊತ್ತ.

ಆ ಶಶಾಂಕ್ ಬದಲು ಈ ಶಶಾಂಕ್ ಖರೀದಿಸಿದ ಪಂಜಾಬ್

2024ರ ಐಪಿಎಲ್ ಆಟಗಾರರ ಮಿನಿ ಹರಾಜು ನಡೆಯುತ್ತಿದ್ದಾಗ ಪಂಜಾಬ್ ಕಿಂಗ್ಸ್, ಶಶಾಂಕ್ ಎಂಬ ಹೆಸರಿನ ಇನ್ನೊಬ್ಬ ಆಟಗಾರನ ಬಗ್ಗೆ ಗೊಂದಲಕ್ಕೊಳಗಾಗಿತ್ತು. ಪಂಜಾಬ್ ಕಿಂಗ್ಸ್ ತಂಡ, 19 ವರ್ಷದ ಶಶಾಂಕ್ ಅವರನ್ನು ಖರೀದಿಸಲು ಬಯಸಿತ್ತು. ಆದರೆ ಹರಾಜಿನಲ್ಲಿ ಗೊಂದಲಕ್ಕೆ ಒಳಗಾಗಿ 32ರ ಪ್ರಾಯದ ಶಶಾಂಕ್ ಸಿಂಗ್‌ ಅವರನ್ನು ಬಿಡ್ ಮಾಡಿತ್ತು. ಇದಾದ ಬಳಿಕ ಪಂಜಾಬ್‌ ಫ್ರಾಂಚೈಸಿಯು ಶಶಾಂಕ್ ಅವರನ್ನು ಉಳಿಸಿಕೊಳ್ಳಲು ಹಿಂದೇಟು ಹಾಕಿತ್ತು. ಆದರೆ ಮಿನಿ ಹರಾಜು ಮುಗಿದ ಬಳಿಕ ಪಂಜಾಬ್‌ ಕಿಂಗ್ಸ್ ಶಶಾಂಕ್ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿತ್ತು.

IPL 2024 ಈ ಸಲ ಕಪ್ ಗೆಲ್ಲೋದು ಕೆಕೆಆರ್ ಅಂತೆ..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇದೀಗ ಪಂಜಾಬ್‌ ಕಿಂಗ್ಸ್ ಆಡಲು ಸಿಕ್ಕ ಅವಕಾಶವನ್ನು ಶಶಾಂಕ್‌ ಸಿಂಗ್ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. ಪಂಜಾಬ್ ತಂಡದ ಮ್ಯಾನೇಜ್‌ಮೆಂಟ್, ಮಿನಿ ಹರಾಜಿನಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಇದೀಗ ತೃಪ್ತಿ ಭಾವನೆಯನ್ನು ವ್ಯಕ್ತಪಡಿಸಿದೆ. ಗುಜರಾತ್ ವಿರುದ್ಧದ ರೋಚಕ ಪಂದ್ಯವನ್ನು ಗೆಲ್ಲಿಸುವ ಮೂಲಕ ಶಶಾಂಕ್, ತನ್ನ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. 

ಗುಜರಾತ್ ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ ಶಶಾಂಕ್ ಸಿಂಗ್, ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರ ಬೌಲಿಂಗ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ ಬಾರಿಸುವ ಮೂಲಕ ಬೆವರಿಳಿಸಿದ್ದರು. ಇದೇ ಸ್ಪಿನ್ನರ್‌ಗಳಿಗೆ ಪಂಜಾಬ್‌ನ ಹಿರಿಯ ಆಟಗಾರರು ವೈಫಲ್ಯ ಅನುಭವಿಸಿದ್ದರು. ಆದರೆ, ಶಶಾಂಕ್, ಮುಲಾಜಿಲ್ಲದೆ ಈ ಸ್ಟಾರ್‌ ಸ್ಪಿನ್ನರ್‌ಗಳ ಎದುರು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಒಟ್ನಲ್ಲಿ ಶಶಾಂಕ್ ಹೆಸ್ರು ಕನ್ಫೂಷನ್ ಮಾಡಿಕೊಂಡು ಬೇಸರದಲ್ಲಿದ್ದ ಪಂಜಾಬ್ ಕಿಂಗ್ಸ್ಗೆ ಈ ಗೆಲುವು ಶಶಾಂಕ್ ಮೇಲಿನ ಬೇಸರವನ್ನ ತೆಗೆಸಿದೆ. ಬೆಸ್ಟ್ ಆಫ್ ಲಕ್ ಶಶಾಂಕ್.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!