IPL 2024 ರಾಜಸ್ಥಾನ ರಾಯಲ್ಸ್‌ಗೆ ಸತತ 4ನೇ ಸೋಲು

By Kannadaprabha News  |  First Published May 16, 2024, 9:11 AM IST

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರಾಜಸ್ಥಾನ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. ತಂಡ 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು ಕಲೆಹಾಕಿದ್ದು 144 ರನ್‌. ಜೈಸ್ವಾಲ್ 4, ಕೊಹ್ಲೆರ್‌ ಕ್ಯಾಡ್‌ಮೊರ್‌ 18, ಸಂಜು ಸ್ಯಾಮ್ಸನ್‌ 18ಕ್ಕೆ ನಿರ್ಗಮಿಸಿದರು. ಈ ಹಂತದಲ್ಲಿ ತಂಡಕ್ಕೆ ನೆರವಾಗಿದ್ದು ರಿಯಾನ್‌ ಪರಾಗ್‌. ಅವರು 34 ಎಸೆತಗಳಲ್ಲಿ 48 ರನ್‌ ಸಿಡಿಸಿದ್ದರಿಂದ ತಂಡ 150ರ ಸನಿಹಕ್ಕೆ ತಲುಪಿತು.


ಗುವಾಹಟಿ: ರಾಜಸ್ಥಾನ ರಾಯಲ್ಸ್‌ ಪ್ಲೇ-ಆಫ್‌ ಸನಿಹದಲ್ಲಿ ಮತ್ತೆ ಎಡವಿದೆ. ಈಗಾಗಲೇ ಪ್ಲೇ-ಆಫ್‌ ಪ್ರವೇಶವನ್ನು ಅಧಿಕೃತಗೊಳಿಸಿರುವ ತಂಡ ಬುಧವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ  5 ವಿಕೆಟ್‌ಗಳಿಂದ ಪರಾಭವಗೊಂಡಿತು. ತಂಡಕ್ಕಿದು ಸತತ 4ನೇ ಸೋಲು. ನಾಕೌಟ್‌ ರೇಸ್‌ನಿಂದ ಹೊರಗುಳಿದಿರುವ ಪಂಜಾಬ್‌ ಟೂರ್ನಿಯಲ್ಲಿ 5ನೇ ಜಯ ದಾಖಲಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರಾಜಸ್ಥಾನ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. ತಂಡ 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು ಕಲೆಹಾಕಿದ್ದು 144 ರನ್‌. ಜೈಸ್ವಾಲ್ 4, ಕೊಹ್ಲೆರ್‌ ಕ್ಯಾಡ್‌ಮೊರ್‌ 18, ಸಂಜು ಸ್ಯಾಮ್ಸನ್‌ 18ಕ್ಕೆ ನಿರ್ಗಮಿಸಿದರು. ಈ ಹಂತದಲ್ಲಿ ತಂಡಕ್ಕೆ ನೆರವಾಗಿದ್ದು ರಿಯಾನ್‌ ಪರಾಗ್‌. ಅವರು 34 ಎಸೆತಗಳಲ್ಲಿ 48 ರನ್‌ ಸಿಡಿಸಿದ್ದರಿಂದ ತಂಡ 150ರ ಸನಿಹಕ್ಕೆ ತಲುಪಿತು. ಅಶ್ವಿನ್‌ 28 ರನ್‌ ಕೊಡುಗೆ ನೀಡಿದರು. ಕರ್ರನ್‌, ಹರ್ಷಲ್‌, ರಾಹುಲ್‌ ಚಹರ್‌ ತಲಾ 2 ವಿಕೆಟ್‌ ಕಿತ್ತರು.

Tap to resize

Latest Videos

IPL 2024 ಲಖನೌಗಿಲ್ಲ ಪ್ಲೇ-ಆಫ್ ಲಕ್; ಡೆಲ್ಲಿಗೆ ಭರ್ಜರಿ ಜಯ

ರಾಜಸ್ಥಾನ ನೀಡಿದ ಗುರಿ ಪಂಜಾಬ್‌ಗೆ ಸುಲಭ ತುತ್ತಾಯಿತು. ತಂಡ 18.5 ಓವರಲ್ಲೇ ಬೆನ್ನತ್ತಿ ಗೆದ್ದಿತು. ಆರಂಭಿಕರಾದ ಪ್ರಭ್‌ಸಿಮ್ರನ್‌(04), ಬೇರ್‌ಸ್ಟೋಬ್‌(14), ಬಳಿಕ ಬಂದ ರೋಸೌ(22) ಶಶಾಂಕ್‌ ಸಿಂಗ್‌(00) ಬೇಗನೇ ಔಟಾದರು. 48ಕ್ಕೆ 4 ವಿಕೆಟ್‌ ಕಳೆದುಕೊಂಡ ತಂಡವನ್ನು ನಾಯಕ ಸ್ಯಾಮ್‌ ಕರ್ರನ್‌(41 ಎಸೆತಗಳಲ್ಲಿ ಔಟಾಗದೆ 63) ಗೆಲುವಿನ ದಡ ಸೇರಿಸಿದರು. ಆವೇಶ್‌, ಚಹಲ್ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: 
ರಾಜಸ್ಥಾನ 20 ಓವರಲ್ಲಿ 144/9 (ರಿಯಾನ್‌ 48, ಅಶ್ವಿನ್‌ 28, ಕರ್ರನ್‌ 2-24) 
ಪಂಜಾಬ್‌ 18.5 ಓವರಲ್ಲಿ 145/5 (ಕರ್ರನ್‌ 63*, ಆವೇಶ್‌ 2-28, ಚಹಲ್‌ 2-31)

01ನೇ ಬ್ಯಾಟರ್‌: ರಿಯಾನ್‌ ಪರಾಗ್‌ ಈ ಬಾರಿ ಐಪಿಎಲ್‌ನಲ್ಲಿ 500+ ರನ್‌ ಕಲೆಹಾಕಿದ ಮೊದಲ ಅನ್‌ಕ್ಯಾಪ್ಡ್‌ ಆಟಗಾರ.

click me!