Breaking: ಮುಂಬೈ ಇಂಡಿಯನ್ಸ್ ಬಿಡಲು ರೋಹಿತ್-ಬುಮ್ರಾ ರೆಡಿ..! ಸೂರ್ಯನ ಪಾಡು?

By Suvarna News  |  First Published Apr 6, 2024, 3:56 PM IST

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ಗೆ ಬರೋಬ್ಬರಿ ಐದು ಐಪಿಎಲ್ ಕಪ್ ಗೆಲ್ಲಿಸಿಕೊಟ್ಟ ನಾಯಕ. ಐಪಿಎಲ್ ಟ್ರೋಫಿ ಬರ ಎದುರಿಸುತ್ತಿದ್ದ ತಂಡಕ್ಕೆ ಕಪ್ ರುಚಿ ತೋರಿಸಿದ್ದೇ ರೋಹಿತ್. ಮುಂಬೈ ಗೆದ್ದಿರುವ ಐದಕ್ಕೆ ಐದು ಟ್ರೋಫಿಯೂ ರೋಹಿತ್ ನಾಯಕತ್ವದಲ್ಲೇ ಗೆದ್ದಿದೆ. ಇಂತಹ ಅದ್ಭುತ ನಾಯಕ ರೋಹಿತ್‌ಗೆ ಹೇಳದೆ ಕೇಳದೆ ನಾಯಕತ್ವದಿಂದ ತೆಗೆದುಹಾಕಿದ್ರೆ ಯಾರು ತಾನೆ ಸುಮ್ಮನಿರುತ್ತಾರೆ ಹೇಳಿ.


ಬೆಂಗಳೂರು(ಏ.06): ಮುಂದಿನ ವರ್ಷ ಐಪಿಎಲ್ ಮೆಗಾ ಆಕ್ಷನ್ ನಡೆಯೋದು ನಿಮಗೆಲ್ಲಾ ಗೊತ್ತೇ ಇದೆ. ವಿಷ್ಯ ಅದಲ್ಲ. ಒಂದೇ ತಂಡ ಮೂವರು ಸ್ಟಾರ್ ಪ್ಲೇಯರ್ಸ್, ಈ ಆಕ್ಷನ್‌ಗೆ ಹೋಗಲು ಪ್ಲಾನ್ ಮಾಡಿದ್ದಾರೆ. ಈ ಮೂವರು ಟೀಂ  ಇಂಡಿಯಾ ಪ್ಲೇಯರ್ಸ್ ಅನ್ನೋದು ವಿಶೇಷ. ಯಾರು ಆ ತ್ರಿಮೂರ್ತಿಗಳು ಅನ್ನೋದನ್ನ ನೋಡಿಕೊಂಡು ಬರೋಣ ಬನ್ನಿ.

ಸೂರ್ಯನ ಸ್ಥಿತಿ ಅದೋಗತಿ..!

Tap to resize

Latest Videos

ಹಾರ್ದಿಕ್ ಪಾಂಡ್ಯ ಅವರನ್ನ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಮಾಡಿದ್ಮೇಲೆ ತಂಡದಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ. ಮುಂಬೈ ಟೀಮ್ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಕಳೆದ ಮೂರು ಪಂದ್ಯದಲ್ಲಿ ಜಗಜ್ಜಾಹೀರವಾಗಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿದಬೇಕಿದ್ದ ಮುಂಬೈ ಇಂಡಿಯನ್ಸ್, ಹ್ಯಾಟ್ರಿಕ್ ಸೋಲು ಅನುಭವಿಸಿ ತಲೆ ತಗ್ಗಿಸಿ ನಿಂತಿದೆ. ಐದು ಬಾರಿ ಚಾಂಪಿಯನ್ ಮುಂಬೈ ತಂಡ ಇದೇನಾ ಅನ್ನೋ ಪ್ರಶ್ನೆ ಕೇಳುವಂತಾಗಿದೆ.

IPL 2024 ಈ ಸಲ ಕಪ್ ಗೆಲ್ಲೋದು ಕೆಕೆಆರ್ ಅಂತೆ..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಮುಂಬೈನಿಂದ ಬೆಂಗಳೂರು ಕಡೆ ಮುಖ ಮಾಡಿದ್ದಾರೆ ರೋಹಿತ್

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ಗೆ ಬರೋಬ್ಬರಿ ಐದು ಐಪಿಎಲ್ ಕಪ್ ಗೆಲ್ಲಿಸಿಕೊಟ್ಟ ನಾಯಕ. ಐಪಿಎಲ್ ಟ್ರೋಫಿ ಬರ ಎದುರಿಸುತ್ತಿದ್ದ ತಂಡಕ್ಕೆ ಕಪ್ ರುಚಿ ತೋರಿಸಿದ್ದೇ ರೋಹಿತ್. ಮುಂಬೈ ಗೆದ್ದಿರುವ ಐದಕ್ಕೆ ಐದು ಟ್ರೋಫಿಯೂ ರೋಹಿತ್ ನಾಯಕತ್ವದಲ್ಲೇ ಗೆದ್ದಿದೆ. ಇಂತಹ ಅದ್ಭುತ ನಾಯಕ ರೋಹಿತ್‌ಗೆ ಹೇಳದೆ ಕೇಳದೆ ನಾಯಕತ್ವದಿಂದ ತೆಗೆದುಹಾಕಿದ್ರೆ ಯಾರು ತಾನೆ ಸುಮ್ಮನಿರುತ್ತಾರೆ ಹೇಳಿ. ಸೈಲೆಂಟಾಗಿಯೇ ಪ್ಲಾನ್ ಮಾಡ್ತಾರೆ. ಈಗ ರೋಹಿತ್ ಮಾಡಿರೋದು ಅದನ್ನೇ.

ಕ್ಯಾಪ್ಟನ್ಸಿ ಹೋಗಿರುವ ಬಗ್ಗೆ ರೋಹಿತ್ ಎಲ್ಲೂ ಮಾತನಾಡಿಲ್ಲ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡುತ್ತಿದ್ದಾರೆ. ಆದ್ರೆ ಫೀಲ್ಡ್‌ನಲ್ಲಿ ಮನಸ್ಸು ಕೇಳಬೇಕಲ್ವಾ..? ಫೀಲ್ಡಿಂಗ್ ಸೆಟ್ ಮಾಡೋ ವಿಷ್ಯದಲ್ಲಿ, ಬೌಲಿಂಗ್ ಚೇಂಜ್ ಮಾಡೋ ವಿಷ್ಯದಲ್ಲಿ ಪಾಂಡ್ಯ ಜೊತೆ ಸಣ್ಣ ಪುಟ್ಟ ತಿಕ್ಕಾಟಗಳು ಆಗಿವೆ. ಪಾಂಡ್ಯ ಕಳಪೆ ಕ್ಯಾಪ್ಟನ್ಸಿ ನೋಡಿ ಬೇಸತ್ತಿರುವ ರೋಹಿತ್, ಫ್ರಾಂಚೈಸಿ ಮೇಲೂ ಮುನಿಸಿಕೊಂಡಿದ್ದಾರೆ. ಈಗ ಅವರ ಕಣ್ಣು ಮುಂದಿನ ಮೆಗಾ ಆಕ್ಷನ್ ಮೇಲೆ ಬಿದ್ದಿದೆ. ಈ ಸಲ ಮುಂಬೈ ಪರ ಆಡಿ ನೆಕ್ಟ್ಸ್ ಬಿಡ್‌ಗೆ ಹೋಗೋ ಪ್ಲಾನ್ನಲ್ಲಿದ್ದಾರೆ. ಅದರಲ್ಲೂ ಆರ್ಸಿಬಿ ಸೇರಿಕೊಳ್ಳುವ ಪ್ಲಾನ್ ಮಾಡಿದ್ದಾರೆ ಅಂತ ಭಾರಿ ಸುದ್ದಿಯಾಗಿದೆ.

ಸತತ ಸೋಲಿನಿಂದ ಕಂಗೆಟ್ಟ ಮುಂಬೈ ಇಂಡಿಯನ್ಸ್, ಸೋಮನಾಥ ಶಿವನ ದೇಗುಲದಲ್ಲಿ ಹಾರ್ದಿಕ್ ಪಾಂಡ್ಯ ಪೂಜೆ..!

ರೋಹಿತ್ ಜೊತೆ ಮೆಗಾ ಆಕ್ಷನ್‌ಗೆ ಬುಮ್ರಾ

ಪಾಂಡ್ಯ ಅವರನ್ನ ಮುಂಬೈ ಕ್ಯಾಪ್ಟನ್ ಮಾಡಿದ್ದು ವೇಗಿ ಜಸ್ಪ್ರೀತ್ ಬುಮ್ರಾಗೂ ಇಷ್ಟವಿಲ್ಲ. ಟೀಂ ಇಂಡಿಯಾ ಪರವೇ ಮೊದಲ ಓವರ್ ಬೌಲಿಂಗ್ ಮಾಡೋ ಬುಮ್ರಾಗೆ, ಐಪಿಎಲ್ನಲ್ಲಿ 4-5ನೇ ಓವರ್ ಬೌಲಿಂಗ್ ಕೊಡ್ತಿದ್ದಾರೆ ಪಾಂಡ್ಯ. ಇದಕ್ಕಿಂತ ಅವಮಾನ ಬೇಕಾ. ಇನ್ನು ಬುಮ್ರಾ ಬೌಲಿಂಗ್‌ಗೆ ಸರಿಯಾಗಿ ಫೀಲ್ಡ್ ಸಹ ಸೆಟ್ ಮಾಡ್ತಿಲ್ಲ. ಈ ಎಲ್ಲದರಿಂದ ಬೇಸತ್ತಿರುವ ಬುಮ್ರಾ ಸಹ, ಮುಂದಿನ ಸೀಸನ್ನಲ್ಲಿ ಮೆಗಾ ಹರಾಜಿಗೆ ಹೋಗಲು ಪ್ಲಾನ್ ಮಾಡಿದ್ದಾರೆ. ಬುಮ್ರಾ ಏನಾದ್ರೂ ಬಿಡ್‌ಗೆ ಬಂದ್ರೆ 20 ಕೋಟಿಗೆ ಸೇಲ್ ಆಗಲಿದ್ದಾರೆ. 

ಅತಂತ್ರ ಸ್ಥಿತಿಯಲ್ಲಿ ಸೂರ್ಯಕುಮಾರ್

ಸದ್ಯ ಗಾಯಾಳುವಾಗಿ ಮೂರು ಪಂದ್ಯಗಳಿಂದ ಹೊರಗುಳಿದಿರುವ ಸೂರ್ಯಕುಮಾರ್ ಯಾದವ್‌ಗೂ ಸಹ ಪಾಂಡ್ಯ ಮುಂಬೈ ಕ್ಯಾಪ್ಟನ್ ಆಗಿರೋದು ಇಷ್ಟವಿಲ್ಲ. ಪಾಂಡ್ಯ ಕ್ಯಾಪ್ಟನ್ ಎಂದು ಮುಂಬೈ ಘೋಷಿಸಿದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹಾರ್ಟ್ ಬ್ರೇಕ್ ಪೋಸ್ಟ್ ಹಾಕಿ ತಮ್ಮ ಅಸಮಧಾನವನ್ನ ಹೊಸ ಹಾಕಿದ್ರು. ಈಗ ಈ ಸೀಸನ್ ಅನ್ನ ಮುಂಬೈ ಪರ ಆಡಿ, ಮುಂದಿನ ಸೀಸನ್ಗೆ  ಮೆಗಾ ಆಕ್ಷನ್‌ಗೆ ಹೋಗಲು ಸಿದ್ದತೆ ನಡೆಸಿದ್ದಾರೆ. ಆದ್ರೆ ಅವರಿಗೆ ಗಾಯ ಕಾಟ ಕಾಡುತ್ತಿದೆ. ಹಾಗಾಗಿ ಅವರು ಯಾವ ನಿರ್ಧಾರವನ್ನ ಅಂತಿಮವಾಗಿ ತೆಗೆದುಕೊಂಡಿಲ್ಲ ಆದ್ರೂ ರೋಹಿತ್-ಬುಮ್ರಾ ಜೊತೆ ಸೂರ್ಯ ಸಹ ಮುಂಬೈ ಇಂಡಿಯನ್ಸ್‌ನಿಂದ ಹೊರಬೀಳುವುದು ಪಕ್ಕಾ ಆಗಿದೆ. ಆಗ ಮುಂಬೈ ಖಾಲಿ ಮನೆಯಾಗಲಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!