ಮುನಿಸು ಮರೆತು ಒಂದಾದ ಕೊಹ್ಲಿ-ಗಂಭೀರ್ ಜೋಡಿ..! ವಿಡಿಯೋ ವೈರಲ್

By Naveen Kodase  |  First Published Mar 30, 2024, 9:43 AM IST

ಕಳೆದ ವರ್ಷ ಮೈದಾನದಲ್ಲಿ ಕಚ್ಚಾಡಿಕೊಂಡಿದ್ದ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌, ಶುಕ್ರವಾರ ಪಂದ್ಯದ ಮೊದಲ ಇನ್ನಿಂಗ್ಸ್‌ನ ಮೊದಲ ಸ್ಟ್ರಾಟರ್ಜಿಕ್ ಟೈಮ್‌ ಔಟ್ ವೇಳೆ ದೋಸ್ತಿ ಪ್ರದರ್ಶಿಸಿದರು. ತಮ್ಮ ಆಟಗಾರರಿಗೆ ಸಲಹೆ ನೀಡುವ ಸಲುವಾಗಿ ಮೈದಾನಕ್ಕಿಳಿದಿದ್ದ ಕೆಕೆಆರ್‌ನ ಮೆಂಟರ್‌ ಗಂಭೀರ್‌, ಕೊಹ್ಲಿಯ ಬಳಿ ಬಂದು ಅವರನ್ನು ತಬ್ಬಿಕೊಂಡು ಅಭಿನಂದಿಸಿದರು.


ಬೆಂಗಳೂರು(ಮಾ.30): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ರೋಚಕ ಗೆಲುವು ಸಾಧಿಸಿತು. ಇನ್ನು ಇದೇ ಪಂದ್ಯದ ವೇಳೆಯಲ್ಲಿ ಒಂದು ಅಪರೂಪದ ಸನ್ನಿವೇಷಕ್ಕೂ ಸಾಕ್ಷಿಯಾಯಿತು.

ಕಳೆದ ವರ್ಷ ಮೈದಾನದಲ್ಲಿ ಕಚ್ಚಾಡಿಕೊಂಡಿದ್ದ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌, ಶುಕ್ರವಾರ ಪಂದ್ಯದ ಮೊದಲ ಇನ್ನಿಂಗ್ಸ್‌ನ ಮೊದಲ ಸ್ಟ್ರಾಟರ್ಜಿಕ್ ಟೈಮ್‌ ಔಟ್ ವೇಳೆ ದೋಸ್ತಿ ಪ್ರದರ್ಶಿಸಿದರು. ತಮ್ಮ ಆಟಗಾರರಿಗೆ ಸಲಹೆ ನೀಡುವ ಸಲುವಾಗಿ ಮೈದಾನಕ್ಕಿಳಿದಿದ್ದ ಕೆಕೆಆರ್‌ನ ಮೆಂಟರ್‌ ಗಂಭೀರ್‌, ಕೊಹ್ಲಿಯ ಬಳಿ ಬಂದು ಅವರನ್ನು ತಬ್ಬಿಕೊಂಡು ಅಭಿನಂದಿಸಿದರು. ಇವರಿಬ್ಬರ ಮಾತುಕತೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Virat Kohli and Gautam Gambhir ended the fight and hugged each other after the match. 🤗😍🥰 pic.twitter.com/auhHHK0Yrz

— 🇸‌🇴‌🇳‌🇦‌ 👨🏽‍⚕️⚕️ (@makbul_sona)

Latest Videos

undefined

ಕೆಕೆಆರ್ ಬ್ಯಾಟಿಂಗ್ ಆರ್ಭಟಕ್ಕೆ ಆರ್‌ಸಿಬಿ ಸೈಲೆಂಟ್..! ಚಿನ್ನಸ್ವಾಮಿಯಲ್ಲಿ ಕೋಲ್ಕತಾಗೆ ಮತ್ತೊಂದು ಜಯ

ಕಳೆದೊಂದು ದಶಕದಿಂದಲೂ ವಿರಾಟ್ ಕೊಹ್ಲಿ ವಿರುದ್ದ ಗೌತಮ್ ಗಂಭೀರ್ ಕಿಡಿಕಾರುತ್ತಲೇ ಬಂದಿದ್ದರು. ಹಲವು ಬಾರಿ ಆರ್‌ಸಿಬಿ ನಾಯಕರಾಗಿದ್ದ ವಿರಾಟ್ ಕೊಹ್ಲಿಯನ್ನು ಅವಕಾಶ ಸಿಕ್ಕಾಗಲೆಲ್ಲಾ ಕೆಣಕುತ್ತಲೇ ಬಂದಿದ್ದರು. ಅದರಲ್ಲೂ ಕಳೆದ ವರ್ಷ ಗೌತಮ್ ಗಂಭೀರ್ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದಾಗ, ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಮಾತಿನ ಚಕಮಕಿಗೆ ಗೌತಿ ತುಪ್ಪ ಸುರಿದಿದ್ದರು. 

The Great Rivlry The End 💔 between
Virat kohli and Gautam Gambhir!

Now Today both Handshake& hugged each Other!
Lafda , drama ,romanch ❌ pic.twitter.com/igRm9YRBL0

— Bharat Shakuntala Maurya (@Bharat_Maurya66)

ಇನ್ನು ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಭರ್ಜರಿ ಗೆಲುವು ಸಾಧಿಸಿತು. 2015ರಿಂದಲೂ ತವರು ಅಂಗಳದಲ್ಲಿ ಕೆಕೆಆರ್‌ ವಿರುದ್ಧ ಗೆಲ್ಲದ ಆರ್‌ಸಿಬಿ ಈ ಬಾರಿ 7 ವಿಕೆಟ್‌ಗಳಿಂದ ಪರಾಭವಗೊಂಡಿತು. ಕೆಕೆಆರ್‌ 2 ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಆರ್‌ಸಿಬಿ 3ರಲ್ಲಿ 2 ಸೋಲಿನೊಂದಿಗೆ 6ನೇ ಸ್ಥಾನದಲ್ಲೇ ಉಳಿದಿದೆ.

08ನೇ ಜಯ

ಕೆಕೆಆರ್‌ಗೆ ಇದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ವಿರುದ್ಧ 12 ಪಂದ್ಯಗಳಲ್ಲಿ 8ನೇ ಜಯ. 2010, 2011, 2013, 2015ರಲ್ಲಿ ಆರ್‌ಸಿಬಿ ಗೆದ್ದಿದ್ದರೆ, 2008, 20012, 2016, 2017, 2018, 2019, 2023 ಮತ್ತು 2024ರಲ್ಲಿ ಕೆಕೆಆರ್‌ ಜಯಗಳಿಸಿದೆ.
 

click me!