
ಬೆಂಗಳೂರು(ಮಾ.29) ಐಪಿಎಲ್ ಟೂರ್ನಿಯಲ್ಲಿ ಹಲವು ರೋಚಕ ಸನ್ನಿವೇಶಗಳಿವೆ. ಈ ಪೈಕಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ವೈರತ್ವ ಭಾರಿ ಸಂಚಲನ ಸೃಷ್ಟಿಸಿದೆ. ಐಪಿಎಲ್ ಟೂರ್ನಿಯ ಇವರಿಬ್ಬರ ಮುಖಾಮುಖಿಯಲ್ಲಿ ಕಿತ್ತಾಟ, ಸ್ಲೆಡ್ಜಿಂಗ್ ನಡೆದಿದ್ದೇ ಹೆಚ್ಚು. ಹಳೇ ಘಟನೆಗಳ ನೆನೆಪಿಸಿಕೊಂಡು ಅಭಿಮಾನಿಗಳು ಇಂದಿನ ಪಂದ್ಯಕ್ಕೆ ಸಜ್ಜಾಗಿದ್ದರು. ಪಂದ್ಯ ಆರಂಭಕ್ಕೂ ಮೊದಲು ಕೊಹ್ಲಿ ಹಾಗೂ ಗಂಭೀರ್ ನಡುವಿನ ಕಿತ್ತಾಗಳೇ ಸದ್ದು ಮಾಡಿತ್ತು. ಆದರೆ ಇನ್ನಿಂಗ್ಸ್ ನಡುವೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಆಲಿಂಗಿಸಿಕೊಂಡು ನಗು ನಗುತ್ತಾ ಮಾತನಾಡಿದ್ದಾರೆ. ಈ ನಡೆ ಅಭಿಮಾನಿಗಳನ್ನು ಕೊಂದಲಕ್ಕೆ ಸಿಲುಕಿಸಿದೆ.
ಕೆಕೆಆರ್ ವಿರುದ್ದ ಭರ್ಜರಿ ಗೆಲವು ದಾಖಲಿಸಿ ಗಂಭೀರ್‌ಗೆ ತಿರುಗೇಟು ನೀಡಲು ಅಭಿಮಾನಿಗಳು ಸಜ್ಜಾಗಿದ್ದರು. ಇತ್ತ ಕೆಕೆಆರ್ ಅಭಿಮಾನಿಗಳು, ತವರಿನಲ್ಲೇ ಆರ್‌ಸಿಬಿ ಸೋಲಿಸಲು ಸಜ್ಜಾಗಿದ್ದರು. ಇದರ ನಡುವೆ ಕೊಹ್ಲಿ ಹಾಗೂ ಗಂಭೀರ್ ಈ ಪಂದ್ಯದಲ್ಲೂ ಸ್ಲೆಡ್ಜಿಂಗ್ ಮಾಡಿಕೊಳ್ಳಲಿದ್ದಾರೆ, ಮತ್ತೊಂದು ರೋಚಕ ಪಂದ್ಯ ಇದಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಸಿದ್ದರು. ಆದರೆ ಅಭಿಮಾನಿಗಳ ಲೆಕ್ಕಾಚಾರ ಉಲ್ಟಾ ಆಗಿದೆ. ಟೈಮ್ ಔಟ್ ನಡುವೆ ಕೊಹ್ಲಿ ಹಾಗೂ ಗಂಭೀರ್ ಆಲಿಂಗಿಸಿ ಮಾತನಾಡಿದ್ದಾರೆ.
IPL 2024 ಸಿಕ್ಸರ್ ಮೂಲಕ ಕ್ರಿಸ್ ಗೇಲ್ ದಾಖಲೆ ಪುಡಿಗಟ್ಟಿದ ವಿರಾಟ್ ಕೊಹ್ಲಿ!
ಈ ನಡೆಯಿಂದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಮತ್ತೊಂದು ರೋಚಕ ಹೋರಾಟ, ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟಕ್ಕೆ ವೇದಿಕೆ ಸಜ್ಜಾಗಿತ್ತು.ಕೊಹ್ಲಿ ಗಂಭೀರ್ ಹಗ್ ಮಾಡಿ ಮಾತನಾಡಿರುವ ಕಾರಣ ನಮ್ಮ ಸ್ಲೆಡ್ಜಿಂಗ್ ವೇದಿಕೆ ಕುಸಿದು ಬಿದ್ದಿದೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ನಾವೆಲ್ಲಾ ಮತ್ತೊಂದು ಹೋರಾಟಕ್ಕೆ ರೆಡಿಯಾಗಿದ್ದೇವು. ಆದರೆ ಕೊಹ್ಲಿ ಹಾಗೂ ಗಂಭೀರ್ ಈ ಹೋರಾಟಕ್ಕೆ ತಣ್ಣೀರೆರೆದಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ನಾವು ಈ ಗೂಗ್ಲಿಯನ್ನು ಊಹಿಸಿರಲಿಲ್ಲ. ಯುದ್ಧದ ನಿರೀಕ್ಷೆಯಲ್ಲಿದ್ದೇವು ಎಂದು ಕೆಲ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕೊಹ್ಲಿ ಹಾಗೂ ಗಂಭೀರ್ ಮೈದಾನದಲ್ಲಿ ಕಿತ್ತಾಡಿಕೊಂಡು ಬಾರಿ ಸುದ್ದಿಯಾಗಿದ್ದರು. ಇದಾದ ಬಳಿಕ ಹಲವು ಬಾರಿ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡ ಮೆಂಟರ್ ಆಗಿದ್ದ ವೇಳೆಯೂ ಗಂಭೀರ್, ಆರ್‌ಸಿಬಿ ಅಭಿಮಾನಿಗಳ ವಿರುದ್ಧ ಹರಿಹಾಯ್ದಿದ್ದರು. ಇದು ಬೆಂಗಳೂರು ಅಭಿಮಾನಿಗಳನ್ನು ಕೆರಳಿಸಿತ್ತು. ಈ ರೀತಿಯ ಹಲವು ಕಿತ್ತಾಟಗಳಿಂದಲೇ ಕೊಹ್ಲಿ ಹಾಗೂ ಗಂಭೀರ್ ರೈವಲ್ರಿ ಹೆಚ್ಚಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿ ಕೊಹ್ಲಿ-ಗಂಭೀರ್ ನಡೆ ಬಿಸಿ ವಾತಾವರಣವನ್ನು ತಿಳಿಗೊಳಿಸಿದೆ.
ಚಿನ್ನಸ್ವಾಮಿಯಲ್ಲಿ ಘರ್ಜಿಸಿದ ಕಿಂಗ್ ಕೊಹ್ಲಿ; ಕೆಕೆಆರ್ಗೆ ಸವಾಲಿನ ಗುರಿ ನೀಡಿದ ಆರ್‌ಸಿಬಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.