4 ಓವರ್ ಬೌಲಿಂಗ್ ಮಾಡಿ 40 ರನ್ ಹೊಡೆಸಿಕೊಳ್ಳೋಕೆ ವಿದೇಶಿ ಬೌಲರ್ ಆದ್ರೇನು.. ದೇಶಿ ಬೌಲರ್ ಆದ್ರೇನು.. ಅಲ್ವಾ..? ಮೊದಲ 6 ಪಂದ್ಯಗಳಲ್ಲಿ ಅಲ್ಜರಿ ಜೋಸೆಫ್ ಮತ್ತು ರೀಸ್ ತೋಪ್ಲಿ ಅವರನ್ನ ಆಡಿಸಲಾಯ್ತು. ಇಬ್ಬರು ಹೆಚ್ಚುಕಮ್ಮಿ 10ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಇವತ್ತು ವಿದೇಶಿ ಬೌಲರ್ಗಳನ್ನ ಕೈಬಿಟ್ಟು ಭಾರತೀಯ ಬೌಲರ್ಗಳನ್ನ ಆಡಿಸಬೇಕು.
ಬೆಂಗಳೂರು(ಏ.15): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ತವರಿನಲ್ಲಿ ಪಂದ್ಯ ಗೆಲ್ಲಬೇಕಾ..? ಸೋಲಿನ ಸುಳಿಯಿಂದ ಹೊರಬರಬೇಕಾ..? ಹಾಗಾದ್ರೆ ಏನು ಮಾಡಬೇಕು. ಅಯ್ಯೋ ಗೆದ್ರೆ ಸಾಕು. ಎಲ್ಲವೂ ಸರಿಯಾಗುತ್ತೆ ಅಂತ ಅಂದುಕೊಳ್ಳಬೇಡಿ. ಗೆಲ್ಲೋದಕ್ಕೆ ಏನು ಮಾಡಬೇಕು ಗೊತ್ತಾ..? ಸತತ 4 ಪಂದ್ಯ ಸೋತಿರುವ ಆರ್‌ಸಿಬಿಗೆ ಗೆಲುವಿನ ಟಿಪ್ಸ್ ಅನ್ನ ನಾವ್ ಕೊಡ್ತೀವಿ ನೋಡಿ. ನಾವ್ ಹೇಳಿದ ಹಾಗೆ ಮಾಡಿದ್ರೆ ಇಂದು ಪಂದ್ಯ ನಮ್ಮದೇ.
4 ಓವರ್‌ಗೆ 40 ಹೊಡೆಸಿಕೊಳ್ಳೋಕೆ ಅವರಾದ್ರೇನು, ಇವರಾದ್ರೇನು?
RCB ತಂಡದ ಈಗಿನ ಸ್ಥಿತಿ ಯಾವ ತಂಡಕ್ಕೂ ಬೇಡ ಕಂಡ್ರಿ. ಲೀಗ್ನಲ್ಲಿ ಇನ್ನೂ ಅರ್ಧದಷ್ಟು ಪಂದ್ಯಗಳನ್ನಾಡಿಲ್ಲ. ಆಗ್ಲೇ ಲೀಗ್ನಿಂದಲೇ ಹೊರಬೀಳೋ ಭೀತಿ ಎದುರಾಗಿದೆ. ಇಂತಹ ಪರಿಸ್ಥಿತಿಗೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನಾಡಿದ್ದು ಕಾರಣನೋ..? ಒಂದು ಪಂದ್ಯ ಸೋತ್ಮೇಲೆ ಇನ್ನೊಂದು ಪಂದ್ಯದ ವೇಳೆಗೆ ಸ್ಟ್ರಾರ್ಟಜಿ ರೆಡಿ ಮಾಡದೆ ಇರುವುದು ಕಾರಣನೋ..? ಆಟಗಾರರ ವೈಫಲ್ಯ ಕಾರಣನೋ..? ಪ್ಲೇಯಿಂಗ್-11 ಆಯ್ಕೆಯಲ್ಲಿ ಮಾಡಿದ ಮಿಸ್ಟೇಕ್ ಕಾರಣನೋ..? ಗೊತ್ತಿಲ್ಲ. ಆದ್ರೂ ಸೋಲುಗಳಿಗೆ ಎಲ್ಲರೂ ಬೌಲರ್ಗಳನ್ನ ದೂಷಿಸುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ಆರ್ಸಿಬಿ ಸೋಲಿಗೆ ಕೇವಲ ಬೌಲರ್ಸ್ ಮಾತ್ರ ಕಾರಣವಲ್ಲ ಅಲ್ವಾ..?
ಭಾರತೀಯ ಬೌಲರ್ಸ್ ಆಡಿಸಿ, ಬ್ಯಾಟಿಂಗ್ ಸ್ಟ್ರಾಂಗ್ ಮಾಡಿಕೊಳ್ಳಿ..!
4 ಓವರ್ ಬೌಲಿಂಗ್ ಮಾಡಿ 40 ರನ್ ಹೊಡೆಸಿಕೊಳ್ಳೋಕೆ ವಿದೇಶಿ ಬೌಲರ್ ಆದ್ರೇನು.. ದೇಶಿ ಬೌಲರ್ ಆದ್ರೇನು.. ಅಲ್ವಾ..? ಮೊದಲ 6 ಪಂದ್ಯಗಳಲ್ಲಿ ಅಲ್ಜರಿ ಜೋಸೆಫ್ ಮತ್ತು ರೀಸ್ ತೋಪ್ಲಿ ಅವರನ್ನ ಆಡಿಸಲಾಯ್ತು. ಇಬ್ಬರು ಹೆಚ್ಚುಕಮ್ಮಿ 10ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಇವತ್ತು ವಿದೇಶಿ ಬೌಲರ್ಗಳನ್ನ ಕೈಬಿಟ್ಟು ಭಾರತೀಯ ಬೌಲರ್ಗಳನ್ನ ಆಡಿಸಬೇಕು.
ಶುರುವಾಯ್ತು RCBಯ ಪ್ಲೇ ಆಫ್ ಲೆಕ್ಕಾಚಾರ..? ನಾಕೌಟ್ ಹಂತಕ್ಕೆ ಪ್ರವೇಶ ಹೇಗೆ ಸಾಧ್ಯ..?
4 ಓವರ್ನಲ್ಲಿ 40 ರನ್ ನೀಡಲು ಯಾರಾದ್ರೇನು ಅಲ್ವಾ..? ಮೊಹಮ್ಮದ್ ಸಿರಾಜ್, ಅಕಾಶ್ ದೀಪ್, ವೈಶಾಕ್ ವಿಜಯ್ ಕುಮಾರ್, ಯಶ್ ದಯಾಳ್ ಟೀಮ್ನಲ್ಲಿದ್ದಾರೆ. ಈ ನಾಲ್ವರು ಫಾಸ್ಟ್ ಬೌಲರ್ಗಳ ಪೈಕಿ ಮೂವರನ್ನ ಆಡಿಸಿ, ಲೆಗ್ ಸ್ಪಿನ್ನರ್ ಕರಣ್ ಶರ್ಮಾಗೆ ಚಾನ್ಸ್ ಕೊಡಬೇಕು. ಆಗ ನಾಲ್ವರು ಭಾರತೀಯ ಬೌಲರ್ಗಳನ್ನೇ ಆಡಿಸಿದಂತಾಗುತ್ತೆ.
ನಾಲ್ವರಲ್ಲಿ ಮೂವರು ವಿದೇಶಿ ಆಲ್ರೌಂಡರ್ಗಳಿಗೆ ಚಾನ್ಸ್ ಕೊಡಿ
ನಾಲ್ವರು ವಿದೇಶಿ ಆಲ್ರೌಂಡರ್ಸ್ ಆರ್ಸಿಬಿ ಟೀಮ್ನಲ್ಲಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೋನ್ ಗ್ರೀನ್, ವಿಲ್ ಜಾಕ್ಸ್ ಮತ್ತು ಟಾಮ್ ಕರನ್ ಆಲ್ರೌಂಡರ್ಸ್. ನಾಯಕ ಫಾಫ್ ಡುಪ್ಲೆಸಿಸ್ ಜೊತೆ ಈ ನಾಲ್ವರಲ್ಲಿ ಮೂವರು ಆಲ್ರೌಂಡರ್ಗಳನ್ನ ಆಡಿಸಬೇಕು. ಅದು ಒಂದೆರಡು ಪಂದ್ಯದಲ್ಲಿ ಮಾತ್ರವಲ್ಲ.. ಸತತವಾಗಿ ಚಾನ್ಸ್ ಕೊಡಬೇಕು. ಆಗ ಮಾತ್ರ ಅವರಿಂದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನಿರೀಕ್ಷಿಸಲು ಸಾಧ್ಯ. ಟಾಮ್ ಕರನ್ ಬಿಟ್ಟು ಉಳಿದವರಿಗೆಲ್ಲಾ ಆಡಲು ಚಾನ್ಸ್ ಸಿಕ್ಕಿದೆ. ಅವರು ವಿಫಲರಾಗಿದ್ದಾರೆ ಕೂಡ. ಆದ್ರೂ ಅವರನ್ನ ಪ್ಲೇಯಿಂಗ್-11ನಿಂದ ಡ್ರಾಪ್ ಮಾಡಬಾರದು. ಯಾಕಂದರೆ ಈ ನಾಲ್ವರು ಆಲ್ರೌಂಡರ್ಸ್ ಆಯಾ ದೇಶದ ಸ್ಟಾರ್ ಪ್ಲೇಯರ್ಸ್ ಕೂಡ ಹೌದು.
RCB ಪಾಲಿಗೆ ತಂಡದ ಬೌಲರ್‌ಗಳೇ ವಿಲನ್..! ಹೀಗಾದ್ರೆ ಕಪ್ ಗೆಲ್ಲೋದು ಹೇಗೆ?
RCB ಟೀಮ್ನಲ್ಲಿ ಭಾರತೀಯ ಆಲ್ರೌಂಡರ್ಸ್ ಇಲ್ಲ. ವಿಧಿಯಿಲ್ಲದೆ ವಿದೇಶಿ ಆಲ್ರೌಂಡರ್ಗಳನ್ನೇ ಆಡಿಸಬೇಕು. ಹಾಗಾಗಿ ಬೌಲಿಂಗ್ ವಿಭಾಗದಲ್ಲಿ ಭಾರತೀಯ ಆಟಗಾರರಿಗೆ ಚಾನ್ಸ್ ಕೊಟ್ಟು, ಆಲ್ರೌಂಡರ್ ವಿಭಾಗಕ್ಕೆ ಫಾರಿನ್ ಆಲ್ ರೌಂಡರ್ಸ್ಗೆ ಚಾನ್ಸ್ ಕೊಡಬೇಕು. ಬ್ಯಾಟಿಂಗ್ ಜೊತೆ ಬೌಲಿಂಗ್ ಸಹ ಸ್ಟ್ರಾಂಗ್ ಆಗಲಿದೆ. ಆಗ ಮಾತ್ರ RCB ಗೆಲುವಿನ ಹಳಿಗೆ ಮರಳಲು ಸಾಧ್ಯ. ಇದನ್ನ ಬಿಟ್ಟು ಬೇರೆ ಏನಾದ್ರೂ ಪ್ರಯೋಗ ಮಾಡಿದ್ರೆ RCB ಮತ್ತೊಂದು ಸೋಲು ಅನುಭವಿಸಲು ಸಿದ್ದವಾಗಿರಬೇಕಾಗುತ್ತದೆ.
ಜೋಸೆಫ್-ಟಾಪ್ಲೆ ಕೈ ಕೊಟ್ರು ಅಂತ ಫರ್ಗೂಸನ್ ಆಡಿಸ್ಬೇಡಿ
ನ್ಯೂಜಿಲೆಂಡ್ ಫಾಸ್ಟ್ ಬೌಲರ್ ಲಾಕಿ ಫರ್ಗೂಸನ್ RCB ಟೀಮ್ನಲ್ಲಿದ್ದಾರೆ. ಟಾಪ್ಲೆ ಮತ್ತು ಅಲ್ಜರಿ ವಿಫಲರಾದ್ರು. 7ನೇ ಪಂದ್ಯದಲ್ಲಿ ಫರ್ಗೂಸನ್ಗೆ ಚಾನ್ಸ್ ಕೊಡೋಣ ಅಂತ ಹೋದ್ರೆ ಮತ್ತದೇ ಕಥೆ ಆಗಿ ಬಿಡುತ್ತೆ. ಫರ್ಗೂಸನ್ ಉತ್ತಮ ಬೌಲರೇ. ಆದ್ರೆ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ನಲ್ಲಿ ಅವರ ಬೌಲಿಂಗ್ ಸಹ ವರ್ಕ್ ಔಟ್ ಆಗಲ್ಲ. ಅವರು 4 ಓವರ್ಗೆ 40 ರನ್ ಹೊಡೆಸಿಕೊಳ್ತಾರೆ. 4 ಓವರ್ಗೆ 40 ರನ್ ನೀಡೋದಕ್ಕೆ ಫಾರಿನ್ ಬೌಲರ್ ಅದ್ರೇನು, ದೇಶಿ ಬೌಲರ್ ಆದ್ರೇನು ಅಲ್ವಾ.? ಹಾಗಾಗಿ ಭಾರತೀಯ ಬೌಲರ್ಸ್ಗೆ ಚಾನ್ಸ್ ಕೊಡಿ. ವಿದೇಶಿ ಆಲ್ರೌಂಡರ್ಸ್ ಆಡಿಸಿ. ಪಂದ್ಯ ಗೆಲ್ಲಿ. ಇದೇ ನಮ್ಮ ಪ್ಲಾನ್. ಇದು ವರ್ಕ್ ಔಟ್ ಅದೇ ಆಗುತ್ತೆ. ಆಲ್ ದ ಬೆಸ್ಟ್ RCB ಬಾಯ್ಸ್. ಇಂದಾದ್ರೂ ಗೆದ್ದು ಬನ್ನಿ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್