IPL 2024 ರಾಜಸ್ಥಾನದ ರಾಯಲ್‌ ಆಟಕ್ಕೆ ತಲೆಬಾಗಿದ ಡೆಲ್ಲಿ ಕ್ಯಾಪಿಟಲ್ಸ್‌!

Published : Mar 29, 2024, 09:08 AM IST
IPL 2024 ರಾಜಸ್ಥಾನದ ರಾಯಲ್‌ ಆಟಕ್ಕೆ ತಲೆಬಾಗಿದ ಡೆಲ್ಲಿ ಕ್ಯಾಪಿಟಲ್ಸ್‌!

ಸಾರಾಂಶ

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ, ರಿಯಾನ್‌ ಪರಾಗ್‌ ಸ್ಫೋಟಕ ಆಟದಿಂದಾಗಿ 20 ಓವರಲ್ಲಿ 5 ವಿಕೆಟ್‌ಗೆ 185 ರನ್‌ ಕಲೆಹಾಕಿತು. ಬೃಹತ್‌ ಮೊತ್ತ ಬೆನ್ನತ್ತಿದ ಸ್ಟಬ್ಸ್‌ ಹೋರಾಟದ ಹೊರತಾಗಿಯೂ 5 ವಿಕೆಟ್‌ಗೆ 173 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಜೈಪುರ: ದೇಸಿ ಟೂರ್ನಿಗಳ ಬಳಿಕ ತಮ್ಮ ಸ್ಫೋಟಕ ಆಟವನ್ನು ಐಪಿಎಲ್‌ನಲ್ಲೂ ಮುಂದುವರಿಸಿದ ಯುವ ಬ್ಯಾಟರ್‌ ರಿಯಾನ್‌ ಪರಾಗ್‌ 17ನೇ ಆವೃತ್ತಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಗೆಲುವು ತಂದುಕೊಟ್ಟಿದ್ದಾರೆ. ನಿಧಾನ ಆರಂಭದ ಹೊರತಾಗಿಯೂ ಪೇರಿಸಿದ ಬೃಹತ್‌ ಮೊತ್ತ, ಬೌಲರ್‌ಗಳ ಸಂಘಟಿತ ದಾಳಿಯಿಂದಾಗಿ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಜಸ್ಥಾನಕ್ಕೆ 12 ರನ್‌ ಗೆಲುವು ಲಭಿಸಿತು. ರಾಜಸ್ಥಾನಕ್ಕೆ ಇದು ಸತತ 2ನೇ ಗೆಲುವಾದರೆ, ಡೆಲ್ಲಿಗಿದು ಸತತ 2ನೇ ಸೋಲು.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ, ರಿಯಾನ್‌ ಪರಾಗ್‌ ಸ್ಫೋಟಕ ಆಟದಿಂದಾಗಿ 20 ಓವರಲ್ಲಿ 5 ವಿಕೆಟ್‌ಗೆ 185 ರನ್‌ ಕಲೆಹಾಕಿತು. ಬೃಹತ್‌ ಮೊತ್ತ ಬೆನ್ನತ್ತಿದ ಸ್ಟಬ್ಸ್‌ ಹೋರಾಟದ ಹೊರತಾಗಿಯೂ 5 ವಿಕೆಟ್‌ಗೆ 173 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ರಾಜಸ್ಥಾನ ವಿರುದ್ಧ ಪಂತ್ ದಾಖಲೆ, ಈ ಸಾಧನೆ ಮಾಡಿದ ಮೊದಲ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗ!

ಡೆಲ್ಲಿ ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟರೂ 4ನೇ ಓವರ್‌ನಲ್ಲಿ ಮಿಚೆಲ್‌ ಮಾರ್ಷ್‌(23), ರಿಕ್ಕಿ ಭುಯಿ(00) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಪವರ್‌-ಪ್ಲೇ ಮುಕ್ತಾಯಕ್ಕೆ ತಂಡದ ಸ್ಕೋರ್‌ 59. ಆದರೆ 34 ಎಸೆತಗಳಲ್ಲಿ 49 ರನ್‌ ಸಿಡಿಸಿದ ಡೇವಿಡ್‌ ವಾರ್ನರ್‌ರನ್ನು ಆವೇಶ್‌ ಪೆವಿಲಿಯನ್‌ಗೆ ಅಟ್ಟಿದರೆ, ರಿಷಭ್‌ ಪಂತ್‌ರನ್ನು(28) ಚಹಲ್‌ ಔಟ್‌ ಮಾಡಿದರು. 16 ಓವರಲ್ಲಿ 5 ವಿಕೆಟ್‌ಗೆ 126 ರನ್‌ ಗಳಿಸಿದ್ದ ತಂಡಕ್ಕೆ ಕೊನೆ 24 ಎಸೆತದಲ್ಲಿ 60 ರನ್‌ ಬೇಕಿತ್ತು. ಈ ವೇಳೆ ಟ್ರಿಸ್ಟನ್‌ ಸ್ಟಬ್ಸ್‌(23 ಎಸೆತಗಳಲ್ಲಿ ಔಟಾಗದೆ 44) ಹೋರಾಟ ಪ್ರದರ್ಶಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

ರಿಯಾನ್‌ ಶೋ: ರಾಜಸ್ಥಾನ ಕಳಪೆ ಆರಂಭ ಪಡೆದಿತ್ತು. ತಾರಾ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌(05), ಜೋಸ್‌ ಬಟ್ಲರ್‌(11), ಸ್ಯಾಮ್ಸನ್‌(15) ತಂಡದ ಮೊತ್ತ 36 ಆಗುವಷ್ಟರಲ್ಲೇ ಪೆವಿಲಿಯನ್‌ ಸೇರಿದ್ದರು. ಬಡ್ತಿ ಪಡೆದು ಬಂದ ಅಶ್ವಿನ್‌ 29 ರನ್‌ ಗಳಿಸಿದರು. 10 ಓವರಲ್ಲಿ ತಂಡ ಕೇವಲ 57 ರನ್‌ ಗಳಿಸಿತ್ತು. ಆದರೆ ರಿಯಾನ್‌ ಪರಾಗ್‌ರ ಆಟ ತಂಡ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿ ಬಿಟ್ಟಿತು. ಮೊದಲ 26 ಎಸೆತಗಳಲ್ಲಿ 26 ರನ್‌ ಗಳಿಸಿದ್ದ ರಿಯಾನ್, ಬಳಿಕ ಸ್ಫೋಟಕ ಆಟವಾಡಿ 45 ಎಸೆತಗಳಲ್ಲಿ ಒಟ್ಟು 84 ರನ್‌ ಸಿಡಿಸಿದರು. ಧ್ರುವ್‌ ಜುರೆಲ್‌ 20, ಹೇಟ್ಮೇಯರ್‌ 14 ರನ್ ಕೊಡುಗೆ ನೀಡಿದರು.

IPL 2024: ಹೋರಾಟದ ಆಟವಾಡಿ ಸನ್‌ರೈಸರ್ಸ್‌ಗೆ ಶರಣಾದ ಮುಂಬೈ ಇಂಡಿಯನ್ಸ್‌

ಸ್ಕೋರ್‌: ರಾಜಸ್ಥಾನ 20 ಓವರಲ್ಲಿ 185/5 (ಪರಾಗ್‌ 84, ಅಶ್ವಿನ್‌ 29, ಅಕ್ಷರ್‌ 1-21), ಡೆಲ್ಲಿ

20 ಓವರಲ್ಲಿ 173/5 (ವಾರ್ನರ್‌ 49, ಸ್ಟಬ್ಸ್‌ 44, ಚಹಲ್‌ 2-19) ಪಂದ್ಯಶ್ರೇಷ್ಠ: ರಿಯಾನ್‌ ಪರಾಗ್‌

ಐಪಿಎಲ್‌ನಲ್ಲಿ 100 ಪಂದ್ಯ ಆಡಿದ ಅತಿಕಿರಿಯ ಪರಾಗ್‌

ರಾಜಸ್ಥಾನ ಬ್ಯಾಟರ್‌ ರಿಯಾನ್‌ ಪರಾಗ್‌ ಐಪಿಎಲ್‌ನಲ್ಲಿ 100 ಪಂದ್ಯಗಳನ್ನಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಪರಾಗ್‌ಗೆ ಈಗ 22 ವರ್ಷ 139 ದಿನ. ಈ ಮೊದಲು ಸಂಜು ಸ್ಯಾಮ್ಸನ್‌ ತಮಗೆ 22 ವರ್ಷ 157 ದಿನಗಳಾಗಿದ್ದಾಗ ಐಪಿಎಲ್‌ನಲ್ಲಿ 100 ಪಂದ್ಯಗಳ ಮೈಲುಗಲ್ಲು ಸಾಧಿಸಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026 Mini Auction: ಖರೀದಿಸಿದ ಎಂಟು ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಟಾಪ್ 6 ಆಟಗಾರರಿವರು!