ರಾಜಸ್ಥಾನ ವಿರುದ್ಧ ಪಂತ್ ದಾಖಲೆ, ಈ ಸಾಧನೆ ಮಾಡಿದ ಮೊದಲ ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟಿಗ!

By Suvarna News  |  First Published Mar 28, 2024, 8:23 PM IST

ರಾಜಸ್ಥಾನ ರಾಯಲ್ಸ್ ವಿರುದ್ದ ಪಂದ್ಯದಲ್ಲಿ ರಿಷಬ್ ಪಂತ್ ಹೊಸ ದಾಖಲೆ ಬರೆದಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ.
 


ಜೈಪುರ(ಮಾ.28) ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಯಶಸ್ಸು ಪಡೆದುಕೊಂಡಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪ್ರಮುಖ ವಿಕೆಟ್ ಕಬಳಿಸಿದೆ. ಇದರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.  ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯ ಆಡಿದ ಮೊದಲ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪಂತ್ ಈ ಸಾಧನೆ ಮಾಡಿದ್ದಾರೆ.

ಡೆಲ್ಲಿ ಫ್ರಾಂಚೈಸಿ ಪರ ಗರಿಷ್ಠ ಪಂದ್ಯ ಆಡಿದ ಹೆಗ್ಗಳಿಕೆಗೆ ಅಮಿತ್ ಮಿಶ್ರಾ ಪಾತ್ರರಾಗಿದ್ದಾರೆ. ಐಪಿಎಲ್ ಟೂರ್ನಿ ಹಾಗೂ ಚಾಂಪಿಯನ್ಸ್ ಲೀಗ್ ಸೇರಿದಂತೆ ಅಮಿತ್ ಮಿಶ್ರಾ 103 ಪಂದ್ಯಗಳನ್ನಾಡಿದ್ದಾರೆ. ಆದರೆ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು 100 ಬಾರಿ ಪ್ರತಿನಿಧಿಸಿದ ಹೆಗ್ಗಳಿಗೆ ರಿಷಬ್ ಪಂತ್ ಪಾಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ಮಾತ್ರ ಅಮಿತ್ ಮಿಶ್ರಾ, ಡೆಲ್ಲಿ ಕ್ಯಾಪಿಟಲ್ಸ್ ಪರ 99 ಪಂದ್ಯಗಳನ್ನಾಡಿದ್ದಾರೆ.

Latest Videos

undefined

ಮೈದಾನದಲ್ಲೇ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದಿದ್ದ ಅಭಿಮಾನಿಗೆ ಹಿಗ್ಗಾಮುಗ್ಗ ಥಳಿತ..! ವಿಡಿಯೋ ವೈರಲ್

ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಗರಿಷ್ಠ ಪಂದ್ಯ ಆಡಿದ ಕ್ರಿಕೆಟಿಗರು
ರಿಷಬ್ ಪಂತ್ : 100
ಅಮಿತ್ ಮಿಶ್ರಾ : 99
ಶ್ರೇಯಸ್ ಅಯ್ಯರ್ : 87
ಡೇವಿಡ್ ವಾರ್ನರ್ :83
ವಿರೇಂದ್ರ ಸೆಹ್ವಾಗ್ :79

2016ರಿಂದ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಬ್ ಪಂತ್ 99 ಪಂದ್ಯಗಳಿಂದ 2856 ರನ್ ಸಿಡಿಸಿದ್ದಾರೆ. ಒಂದು ಸೆಂಚುರಿ ಸಾಧನೆಯನ್ನು ಮಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 5ನೇ ಅತ್ಯುತ್ತಮ ವಿಕೆಟ್ ಕೀಪರ್ ಅನ್ನೋ ಹೆಗ್ಗಳಿಕೆಗೂ ಪಂತ್ ಪಾತ್ರರಾಗಿದ್ದಾರೆ. 62 ಕ್ಯಾಚ್, 19 ಸ್ಟಂಪಿಂಗ್ ಮೂಲಕ ಒಟ್ಟು 81 ಮಂದಿ ಬಲಿಪಡೆದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಡೇವಿಡ್ ವಾರ್ನರ್, ಮಿಚೆಲ್ ಮಾರ್ಸ್, ರಿಕಿ ಭುಯಿ, ರಿಷಬ್ ಪಂತ್(ನಾಯಕ), ತ್ರಿಸ್ಟನ್ ಸ್ಟಬ್ಸ್, ಅಕ್ಸರ್ ಪಟೇಲ್, ಸುಮಿತ್ ಕುಮಾರ್, ಕುಲ್ದೀಪ್ ಯಾದವ್, ಅನ್ರಿಚ್ ನೊರ್ಜೆ, ಖಲೀಲ್ ಅಹಮ್ಮದ್, ಮುಕೇಶ್ ಕುಮಾರ್

ಕೇವಲ 0.6 ಸೆಕೆಂಡ್‌ನಲ್ಲಿ ಅದ್ಭುತ ಕ್ಯಾಚ್ ಹಿಡಿದ ಧೋನಿ..! ವಿಡಿಯೋ ವೈರಲ್
 
ರಾಜಸ್ಥಾನ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ರಿಯಾನ್ ಪರಾಗ್, ಶಿಮ್ರೊನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೋಲ್ಟ್, ಯುಜುವೇಂದ್ರ ಚಹಾಲ್, ಸಂದೀಪ್ ಶರ್ಮಾ, ಅವೇಶ್ ಖಾನ್
 

click me!