ರಾಜಸ್ಥಾನ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದು, ಸಂಘಟಿತ ಹೋರಾಟ ತಂಡದ ಪ್ಲಸ್ ಪಾಯಿಂಟ್. ಮುಂಬೈ ವಿರುದ್ಧವೂ ತವರಿನ ಪಿಚ್‌ನ ಲಾಭವೆತ್ತಿ ಗೆಲುವು ಸಾಧಿಸಲು ಸಂಜು ಸ್ಯಾಮ್ಸನ್ ಪಡೆ ಕಾಯುತ್ತಿದೆ. ಅತ್ತ ಮುಂಬೈ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ತನ್ನ ನೈಜ ಚಾಂಪಿಯನ್ ಆಟವನ್ನು ಇನ್ನಷ್ಟೇ ಪ್ರದರ್ಶಿಸಬೇಕಿದೆ.
ಜೈಪುರ(ಏ.22): ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡ ಪ್ಲೇ-ಆಫ್ ಹೊಸ್ತಿಲು ತಲುಪುವ ನಿರೀಕ್ಷೆಯಲ್ಲಿದ್ದು, ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ. ಆದರೆ ಮುಂಬೈ ಮೊದಲ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದೆ.
ರಾಜಸ್ಥಾನ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದು, ಸಂಘಟಿತ ಹೋರಾಟ ತಂಡದ ಪ್ಲಸ್ ಪಾಯಿಂಟ್. ಮುಂಬೈ ವಿರುದ್ಧವೂ ತವರಿನ ಪಿಚ್‌ನ ಲಾಭವೆತ್ತಿ ಗೆಲುವು ಸಾಧಿಸಲು ಸಂಜು ಸ್ಯಾಮ್ಸನ್ ಪಡೆ ಕಾಯುತ್ತಿದೆ. ಅತ್ತ ಮುಂಬೈ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ತನ್ನ ನೈಜ ಚಾಂಪಿಯನ್ ಆಟವನ್ನು ಇನ್ನಷ್ಟೇ ಪ್ರದರ್ಶಿಸಬೇಕಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ 7 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, ಪ್ಲೇ-ಆಫ್ ರೇಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
'ನಿಮ್ಮ ಮೇಲಾಣೆ, ಪ್ಲೀಸ್ ನಾನ್ಯಾವತ್ತು....': ವಿರಾಟ್ ಕೊಹ್ಲಿ ಬಳಿ ಅಮೂಲ್ಯ ಗಿಫ್ಟ್‌ಗೆ ಅಂಗಲಾಚಿದ ರಿಂಕು ಸಿಂಗ್
ಮುಂಬೈ ಇಂಡಿಯನ್ಸ್ ತಂಡವು ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಟಿಮ್ ಡೇವಿಡ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಬಲಾಢ್ಯ ರಾಜಸ್ಥಾನ ರಾಯಲ್ಸ್ ತಂಡವನ್ನು ಕಟ್ಟಿಹಾಕಬೇಕಿದ್ದರೇ, ಜಸ್ಪ್ರೀತ್ ಬುಮ್ರಾ, ಗೆರಾಲ್ಡ್ ಕೋಟ್ಜೀ, ಶ್ರೇಯಸ್ ಗೋಪಾಲ್ ಅವರು ಮಾರಕ ದಾಳಿ ನಡೆಸಬೇಕಿದೆ.
ಇನ್ನೊಂದೆಡೆ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ರಾಜಸ್ಥಾನ ರಾಯಲ್ಸ್‌ಗೆ ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಆಸರೆಯಾಗಲು ಎದುರು ನೋಡುತ್ತಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಯುಜುವೇಂದ್ರ ಚಹಲ್, ಟ್ರೆಂಟ್ ಬೌಲ್ಟ್, ರವಿಚಂದ್ರನ್ ಅಶ್ವಿನ್ ಮಿಂಚಿನ ದಾಳಿ ನಡೆಸಲು ಸಜ್ಜಾಗಿದ್ದಾರೆ.
IPL 2024 ಗುಜರಾತ್ ಟೈಟಾನ್ಸ್ ಅಬ್ಬರಕ್ಕೆ ಪಂಜಾಬ್ ಕಿಂಗ್ಸ್ ಶರಣು
ಒಟ್ಟು ಮುಖಾಮುಖಿ: 28
ಮುಂಬೈ: 15
ರಾಜಸ್ಥಾನ: 13
ಸಂಭವನೀಯ ಆಟಗಾರರ ಪಟ್ಟಿ
ಮುಂಬೈ: ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್, ಮೊಹಮ್ಮದ್ ನಬಿ, ಗೆರಾಲ್ಡ್ ಕೋಟ್ಜೀ, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ,
ರಾಜಸ್ಥಾನ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ರಿಯಾನ್ ಪರಾಗ್, ಧೃವ್ ಜುರೆಲ್, ಶಿಮ್ರೊನ್ ಹೆಟ್ಮೇಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಕುಲ್ದೀಪ್ ಸೆನ್, ಯುಜುವೇಂದ್ರ ಚಹಲ್.
ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ