ಭಾನುವಾರದ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸಿ ಕೊಹ್ಲಿ ಡ್ರೆಸ್ಸಿಂಗ್ ರೂಂಗೆ ತೆರಳುವಾಗ ಅವರನ್ನು ಭೇಟಿಯಾದ ರಿಂಕು, ‘ನೀವು ಕೊಟ್ಟ ಬ್ಯಾಟ್ ಮುರಿದು ಹೋಯ್ತು’ ಎಂದರು. ಅದಕ್ಕೆ ಕೊಹ್ಲಿ, ‘ನನ್ನ ಬ್ಯಾಟ್ ಮುರಿದು ಹೋಯ್ತಾ, ಹೇಗೆ?’ ಎಂದು ಪ್ರಶ್ನಿಸಿದರು.
ಕೋಲ್ಕತಾ: ರನ್ ಮಷಿನ್ ವಿರಾಟ್ ಕೊಹ್ಲಿಯಿಂದ ಬ್ಯಾಟ್ ಉಡುಗೊರೆಯಾಗಿ ಪಡೆಯಬೇಕು ಎನ್ನುವುದು ಪ್ರತಿ ಯುವ ಆಟಗಾರನ ಕನಸಾಗಿರುತ್ತದೆ. ಕೆಕೆಆರ್ ತಂಡದ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್, ವಿರಾಟ್‌ರ ಬಳಿ ಹೊಸ ಬ್ಯಾಟ್ ಕೇಳಿದ ಪ್ರಸಂಗ, ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಿತು. ಆ ವಿಡಿಯೋವನ್ನು ಕೆಕೆಆರ್ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ಭಾನುವಾರದ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸಿ ಕೊಹ್ಲಿ ಡ್ರೆಸ್ಸಿಂಗ್ ರೂಂಗೆ ತೆರಳುವಾಗ ಅವರನ್ನು ಭೇಟಿಯಾದ ರಿಂಕು, ‘ನೀವು ಕೊಟ್ಟ ಬ್ಯಾಟ್ ಮುರಿದು ಹೋಯ್ತು’ ಎಂದರು. ಅದಕ್ಕೆ ಕೊಹ್ಲಿ, ‘ನನ್ನ ಬ್ಯಾಟ್ ಮುರಿದು ಹೋಯ್ತಾ, ಹೇಗೆ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಿಂಕು, ‘ಸ್ಪಿನ್ನರ್ ವಿರುದ್ಧ ಆಡುವಾಗ ಮುರಿಯಿತು, ಬ್ಯಾಟ್‌ನ ಮಧ್ಯಭಾಗ ಸೀಳು ಬಿಟ್ಟಿದೆ. ಬೇಕಿದ್ದರೆ ತೋರಿಸುತ್ತೇನೆ’ ಎಂದು ಕೊಹ್ಲಿಯ ಎರಡು ಬ್ಯಾಟ್ ಕೈಗೆತ್ತಿಕೊಂಡರು.
IPL 2024 ಗುಜರಾತ್ ಟೈಟಾನ್ಸ್ ಅಬ್ಬರಕ್ಕೆ ಪಂಜಾಬ್ ಕಿಂಗ್ಸ್ ಶರಣು
ಆಗ ಕೊಹ್ಲಿ, ‘ಆ ಬ್ಯಾಟ್ ಚೆನ್ನಾಗಿಲ್ಲ’ ಎಂದರು. ಅದಕ್ಕೆ ರಿಂಕು, ‘ನನಗೆ ಕೊಡುತ್ತೀರಾ’ ಎಂದು ಕೇಳಿದ್ದಕ್ಕೆ ಕೊಹ್ಲಿ, ‘ಹಿಂದಿನ ಪಂದ್ಯದಲ್ಲಷ್ಟೇ ಒಂದು ಬ್ಯಾಟ್ ಕೊಟ್ಟಿದ್ದೇನೆ. ಈಗ ಇನ್ನೊಂದು ಬ್ಯಾಟ್ ಬೇಕಾ?, ಹೀಗೆ ಬ್ಯಾಟ್ ಕೊಡುತ್ತಿದ್ದರೆ ನಾನು ಕಷ್ಟಕ್ಕೆ ಸಿಲುಕುತ್ತೇನೆ’ ಎಂದರು.
ಆಗ ರಿಂಕು, ‘ನಿಮ್ಮ ಮೇಲಾಣೆ ಮತ್ತೆ ಬ್ಯಾಟ್ ಮುರಿದು ಹೋಗದಂತೆ ನೋಡಿಕೊಳ್ಳುತ್ತೇನೆ’ ಎಂದರು. ಕೊಹ್ಲಿ ನಗುತ್ತಲೇ ಡ್ರೆಸ್ಸಿಂಗ್ ರೂಂಗೆ ತೆರಳಿದರು.
ಕೆಕೆಆರ್ ಎದುರು 1 ರನ್ ರೋಚಕ ಸೋಲು ಕಂಡ ಆರ್‌ಸಿಬಿ..! ಪ್ಲೇ ಆಫ್ ಕನಸು ಬಹುತೇಕ ಭಗ್ನ
ಪಂದ್ಯ ಮುಗಿದ ಮೇಲೂ ಕೊಹ್ಲಿ ಬೆನ್ನುಬಿದ್ದ ರಿಂಕು:
ಇದು ಪಂದ್ಯದ ಮುಂಚಿನ ಘಟನೆಯಾದರೆ, ಇನ್ನು ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯ ಮುಕ್ತಾಯದ ಬಳಿಕವೂ ವಿರಾಟ್ ಕೊಹ್ಲಿಯಿಂದ ಬ್ಯಾಟ್ ಪಡೆಯಲು ರಿಂಕು ಸಿಂಗ್ ಬೆನ್ನು ಬಿದ್ದರು. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
