Latest Videos

'ಈ ಮಹಿಳಾ ಕ್ರಿಕೆಟರ್‌ನ ಮದುವೆಯಾಗ್ತೀನಿ ಅಂತಾ ಸುದ್ದಿಯಾಗಿತ್ತು..' ರೂಮರ್‌ಗಳ ಬಗ್ಗೆ ಮಾತನಾಡಿದ ಧವನ್‌!

By Santosh NaikFirst Published May 24, 2024, 2:50 PM IST
Highlights

ತಮ್ಮ ಕುರಿತಾಗಿ ಈವರೆಗೂ ಬಂದಿರುವ ಫನ್ನಿಯೆಸ್ಟ್‌ ರೂಮರ್‌ಗಳ ಬಗ್ಗೆ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಮಾತನಾಡಿದ್ದಾರೆ. 
 


ನವದೆಹಲಿ (ಮೇ.24): ಟೀಮ್‌ ಇಂಡಿಯಾ ಬ್ಯಾಟರ್‌ ಶಿಖರ್‌ ಧವನ್‌ ತಮ್ಮ ಕುರಿತಾಗಿ ಕೇಳಿರುವ ಈವರೆಗಿನ ಅತ್ಯಂತ ಫನ್ನಿಯೆಸ್ಟ್‌ ರೂಮರ್‌ಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿದವರೇ ಅಭಿಮಾನಿಗಳು ಕೂಡ ಅಚ್ಚರಿಪಟ್ಟಿದ್ದಾರೆ. ಒಂದು ಹಂತದಲ್ಲಿ ಯಾವ ರೀತಿಯ ರೂಮರ್‌ಗಳು ಹಬ್ಬಿತ್ತೆಂದರೆ, ಮಿಥಾಲಿ ರಾಜ್‌ ಹಾಗೂ ನಾನು ಮದುವೆಯಾಗುತ್ತಿರುವುದಾಗಿ ಸುದ್ದಿ ಹಬ್ಬಿದ್ದರು ಎಂದು ಎಡಗೈ ಬ್ಯಾಟ್ಸ್‌ಮನ್‌ ಹೇಳಿದ್ದಾರೆ. ಮಿಥಾಲಿ ಅವರು ಮಹಿಳಾ ಕ್ರಿಕೆಟ್‌ನ ದಿಗ್ಗಜ ತಾರೆ. ಪ್ರಸ್ತುತ ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ 2022 ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ಕೊನೆಯ ಬಾರಿಗೆ ಟೀಮ್‌ ಇಂಡಿಯಾ ಪರವಾಗಿ ಅಡಿದ್ದರು. ಪ್ರಸ್ತುತ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಟಿ20ಯಲ್ಲಿ ಗುಜರಾತ್‌ ಜೈಂಟ್ಸ್‌ ತಂಡದ ಮೆಂಟರ್‌ ಆಗಿ ಮಥಾಲಿ ರಾಜ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನೊಂದೆಡೆ ಶಿಖರ್‌ ಧವನ್‌ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಪರವಾಗಿ ಆಟವಾಡಿದ್ದರು. ಜಿಯೋ ಸಿನಿಮಾದ ಹೊಸ ಶೋ 'ಧವನ್‌ ಕರೇಂಗೆ..' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಕುರಿತಾಗಿ ಈವರೆಗೂ ಬಂದಿರುವ ಅತ್ಯಂತ ಫನ್ನಿಯೆಸ್ಟ್‌ ರೂಮರ್‌ಗಳನ್ನು ತಿಳಿಸಿದರು. 'ಒಂದು ಹಂತದಲ್ಲಿ ನಾನು ಮಿಥಾಲಿ ರಾಜ್‌ ಅವರನ್ನು ಮದುವೆಯಾಗುತ್ತಿದ್ದೇನೆ ಎನ್ನುವ ರೂಮರ್‌ ಕೇಳಿದ್ದೆ..' ಎಂದು ಧವನ್‌ ಹೇಳಿದ್ದಾರೆ.



ವೃತ್ತಿಪರ ಕ್ರಿಕೆಟ್‌ಗೆ ಅದ್ಭುತವಾಗಿ ಪುನರಾಗಮನ ಮಾಡಿದ್ದಕ್ಕಾಗಿ ಶಿಖರ್‌ ಧವನ್‌, ರಿಷಬ್‌ ಪಂತ್‌ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಡಿಸೆಂಬರ್ 2022 ರಲ್ಲಿ, ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಸಂಭವಿಸಿದ ಅಪಘಾತದಲ್ಲಿ ಪಂತ್‌ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಹಾಲಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರಾಗುವ ಮುನ್ನ ಅವರು 15 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವುಳಿದಿದ್ದರು. ಅದರೊಂದಿಗೆ ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲೂ ಅವರು ಸ್ಥಾನ ಪಡೆದುಕೊಂಡಿದ್ದಾರೆ.

ನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಈ ಮೂವರು ಕ್ಯಾಪ್ಟನ್ಸ್..!

"ಅಪಘಾತದ ನಂತರ ಅವರ ಪುನಃಶ್ಚೇತನ ಮತ್ತು ಗಾಯಗಳನ್ನು ಅವರು ನಿಭಾಯಿಸಿದ ರೀತಿಯನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ಅವರು ತೋರಿಸಿದ ಸಕಾರಾತ್ಮಕತೆ ಮತ್ತು ಶಕ್ತಿಯು ಅದ್ಭುತವಾಗಿದೆ ಮತ್ತು ಅವರು ಹಿಂತಿರುಗಿ ಐಪಿಎಲ್‌ನಲ್ಲಿ ಆಡಿದ ಮತ್ತು ಭಾರತ ತಂಡಕ್ಕೆ ಬಂದ ರೀತಿ ನಂಬಲಾಗದದು ಮತ್ತು ಅದ್ಭುತ ಮತ್ತು ನಾನು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ" ಎಂದು ಧವನ್ ಹೇಳಿದ್ದಾರೆ. ಧವನ್‌ಗೆ ಕುರಿತಾಗಿ ಹೇಳುವುದಾದರೆ, ಅವರು ಕೇವಲ 5 ಪಂದ್ಯಗಳನ್ನು ಆಡಿದರು, ಅಲ್ಲಿ ಅವರು 30.40 ರ ಸರಾಸರಿಯಲ್ಲಿ 152 ರನ್ ಗಳಿಸಿದರು.

' ಚಿಕು' ವಿರಾಟ್‌ ಕೊಹ್ಲಿಗೆ ಈ ಅಡ್ಡ ಹೆಸರು ಬಂದಿದ್ದೇಕೆ?

 

click me!