IPL 2024: ಡೆಲ್ಲಿ ಎದುರು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ

By Naveen KodaseFirst Published Apr 27, 2024, 3:12 PM IST
Highlights

ಡೆಲ್ಲಿ ಹಾಗೂ ಮುಂಬೈ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಡೆಲ್ಲಿ ತಂಡದಲ್ಲಿ ಎರಡು ಹಾಗೂ ಮುಂಬೈ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮುಂಬೈ ತಂಡದಲ್ಲಿ ಗೆರಾಲ್ಡ್ ಕೋಟ್ಜೀ ಬದಲಿಗೆ ಲೂಕ್ ವುಡ್ ತಂಡ ಕೂಡಿಕೊಂಡಿದ್ದಾರೆ.

ನವದೆಹಲಿ(ಏ.27): 17ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 43ನೇ ಪಂದ್ಯದಲ್ಲಿಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಡೆಲ್ಲಿ ಹಾಗೂ ಮುಂಬೈ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಡೆಲ್ಲಿ ತಂಡದಲ್ಲಿ ಎರಡು ಹಾಗೂ ಮುಂಬೈ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮುಂಬೈ ತಂಡದಲ್ಲಿ ಗೆರಾಲ್ಡ್ ಕೋಟ್ಜೀ ಬದಲಿಗೆ ಲೂಕ್ ವುಡ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ ಬದಲಿಗೆ ಕುಶಾಲ್ ಕುಶಾಗ್ರ, ಏನ್ರಿಚ್ ನೋಕಿಯ ಬದಲಿಗೆ ಲಿಜ್ಜಾರ್ಡ್ ವಿಲಿಯಮ್ಸ್ ತಂಡ ಕೂಡಿಕೊಂಡಿದ್ದಾರೆ.

𝗕𝗮𝘁𝘁𝗹𝗲 𝗼𝗳 𝗕𝗹𝘂𝗲𝘀 👊

Let's get this rolling in New Delhi 📍😉

Follow the Match ▶️ https://t.co/BnZTzctcaH | pic.twitter.com/Onl6YvzZb0

— IndianPremierLeague (@IPL)

ಅಂತೂ ಇಂತೂ ಆರ್ಸಿಬಿ ಗೆಲ್ಲಿಸಿದ ಸ್ವಪ್ಲಿಲ್ ಸಿಂಗ್ ಯಾರು?

5 ಬಾರಿ ಚಾಂಪಿಯನ್‌ ಮುಂಬೈ ಈ ಬಾರಿ 8 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದು 6ರಲ್ಲಿ ಪರಾಭವಗೊಂಡಿದೆ. ಮತ್ತೊಂದು ಸೋಲು ತಂಡವನ್ನು ನಾಕೌಟ್‌ನಿಂದ ಬಹುತೇಕ ಹೊರಬೀಳಲಿದೆ

ಮತ್ತೊಂದೆಡೆ ಡೆಲ್ಲಿ 9ರಲ್ಲಿ 4 ಪಂದ್ಯ ಗೆದ್ದಿದ್ದು, 5ರಲ್ಲಿ ಸೋಲನುಭವಿಸಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈಗೆ ಶರಣಾಗಿದ್ದ ತಂಡ ಈ ಬಾರಿ ಸೇಡಿನ ಕಾತರದಲ್ಲಿದೆ. ರಿಷಭ್‌ ಪಂತ್‌ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದು, ಬೌಲರ್‌ಗಳು ಮೊನಚು ದಾಳಿ ಸಂಘಟಿಸಬೇಕಿದೆ.

ಉಭಯ ತಂಡಗಳ ಆಟಗಾರರ ಪಟ್ಟಿ

ಮುಂಬೈ: ಇಶಾನ್‌ ಕಿಶನ್, ರೋಹಿತ್‌ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ(ನಾಯಕ), ಟಿಮ್ ಡೇವಿಡ್, ನೇಹಲ್‌ ವದೇರಾ, ಮೊಹಮ್ಮದ್ ನಬಿ, ಲೂಕ್ ವುಡ್, ಪೀಯೂಸ್ ಚಾವ್ಲಾ, ಜಸ್ಪ್ರೀತ್ ಬುಮ್ರಾ.

ಡೆಲ್ಲಿ: ಕುಮಾರ್ ಕುಶಾಗ್ರಾ ಫ್ರೇಸರ್‌, ಅಭಿಷೇಕ್‌ ಪೊರೆಲ್, ಶಾಯ್ ಹೋಪ್‌, ರಿಷಭ್‌ ಪಂತ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಲಿಜ್ಜಾರ್ಡ್ ವಿಲಿಯಮ್ಸ್, ಖಲೀಲ್‌ ಅಹಮದ್, ಮುಕೇಶ್‌ ಕುಮಾರ್.

ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
 

click me!