ರೋಹಿತ್ ಶರ್ಮಾ ಕೈಬಿಟ್ಟು ಹಾರ್ದಿಕ್‌ಗೆ ಮುಂಬೈ ನಾಯಕತ್ವ ಪಟ್ಟ ಕಟ್ಟಿದ್ದೇಕೆ? ಗುಟ್ಟು ಬಿಚ್ಚಿಟ್ಟ ಜಯವರ್ಧನೆ

By Kannadaprabha News  |  First Published Dec 21, 2023, 2:36 PM IST

ಮುಂಬೈ ಇಂಡಿಯನ್ಸ್‌ನ ನಾಯಕತ್ವ ಬದಲಾವಣೆ ಭಾರತ ತಂಡದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಲ್ಲದೆ ಹಾರ್ದಿಕ್‌ಗೆ ಭಾರತ ಟಿ20 ನಾಯಕತ್ವ ನೀಡುವ ಯಾವುದೇ ಯೋಚನೆ ಸದ್ಯ ಬಿಸಿಸಿಐ ಮುಂದೆ ಇಲ್ಲ ಎಂದು ತಿಳಿದುಬಂದಿದೆ. ಗಮನಾರ್ಹ ಸಂಗತಿ ಏನೆಂದರೆ ರೋಹಿತ್‌ 2022ರ ನವೆಂಬರ್‌ ಬಳಿಕ ಒಂದೂ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿಲ್ಲ.


ಮುಂಬೈ: ಮುಂಬೈ ಇಂಡಿಯನ್ಸ್‌ನ ಭವಿಷ್ಯಕ್ಕಾಗಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡುವುದು ಅನಿವಾರ್ಯವಾಗಿತ್ತು ಎಂದು ಫ್ರಾಂಚೈಸಿಯ ಜಾಗತಿಕ ಕ್ರಿಕೆಟ್ ಮುಖ್ಯಸ್ಥ ಜಯವರ್ಧನೆ ಸಮರ್ಥಿಸಿಕೊಂಡಿದ್ದಾರೆ. 

ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ‘ರೋಹಿತ್‌ರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕಠಿಣ ನಿರ್ಧಾರ. ಆದರೆ ಅದು ಅನಿವಾರ್ಯ. ತಂಡದ ಭವಿಷ್ಯ ನೋಡಿ ಈ ನಿರ್ಧಾರ ಕೈಗೊಂಡಿದ್ದೇವೆ. ರೋಹಿತ್ ಯಾವತ್ತೂ ತಂಡದ ಜೊತೆಗಿರುತ್ತಾರೆ. ಅವರ ಮಾರ್ಗದರ್ಶನ ತಂಡಕ್ಕೆ ಮಹತ್ವದ್ದು’ ಎಂದು ತಿಳಿಸಿದ್ದಾರೆ.

Tap to resize

Latest Videos

2024ರ ಟಿ20 ವಿಶ್ವಕಪ್‌ನ ನಾಯಕ ಸ್ಥಾನಕ್ಕೆ ರೋಹಿತ್‌ ಮೊದಲ ಆಯ್ಕೆ

ಮುಂಬೈ(ಡಿ.21): ಐಪಿಎಲ್‌ನ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಕಳೆದುಕೊಂಡರೂ 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡದ ನಾಯಕನ ಸ್ಥಾನಕ್ಕೆ ರೋಹಿತ್‌ ಶರ್ಮಾ ಅವರೇ ಬಿಸಿಸಿಐ ಮುಂದಿರುವ ಮೊದಲ ಆಯ್ಕೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರೋಹಿತ್‌ ಏಕದಿನ ವಿಶ್ವಕಪ್‌ ಸೇರಿದಂತೆ ಎಲ್ಲಾ ಮಾದರಿಯಲ್ಲೂ ನಾಯಕತ್ವದಲ್ಲಿ ಮಿಂಚಿದ್ದು, ಅವರನ್ನೇ ಟಿ20 ವಿಶ್ವಕಪ್‌ಗೂ ನಾಯಕನಾಗಿ ಮುಂದುವರಿಸಲು ಬಿಸಿಸಿಐ ಆಯ್ಕೆ ಸಮಿತಿ ಒಲವು ತೋರಿದೆ ಎಂದು ಹೇಳಲಾಗುತ್ತಿದೆ. 

Ind vs SA 3rd ODI: ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಫೈನಲ್..!

ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್‌ನ ನಾಯಕತ್ವ ಬದಲಾವಣೆ ಭಾರತ ತಂಡದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಲ್ಲದೆ ಹಾರ್ದಿಕ್‌ಗೆ ಭಾರತ ಟಿ20 ನಾಯಕತ್ವ ನೀಡುವ ಯಾವುದೇ ಯೋಚನೆ ಸದ್ಯ ಬಿಸಿಸಿಐ ಮುಂದೆ ಇಲ್ಲ ಎಂದು ತಿಳಿದುಬಂದಿದೆ. ಗಮನಾರ್ಹ ಸಂಗತಿ ಏನೆಂದರೆ ರೋಹಿತ್‌ 2022ರ ನವೆಂಬರ್‌ ಬಳಿಕ ಒಂದೂ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿಲ್ಲ.

ಆಟಗಾರನ ಖರೀದಿಯಲ್ಲಿ ಪಂಜಾಬ್ ಎಡವಟ್ಟು?

ದುಬೈ: ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಆಟಗಾರನ ಖರೀದಿಯಲ್ಲಿ ಎಡವಟ್ಟು ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಶಶಾಂಕ್ ಸಿಂಗ್ ಎಂಬವರನ್ನು ಪಂಜಾಬ್ ಮೂಲಬೆಲೆ 20 ಲಕ್ಷ ರು.ಗೆ ಖರೀದಿಸಿದೆ. ಆದರೆ ತಾನು ಖರೀದಿಸಲು ಉದ್ದೇಶಿಸಿದ್ದ ಶಶಾಂಕ್ ಬೇರೊಬ್ಬರು ಎಂಬುದನ್ನು ಫ್ರಾಂಚೈಸಿಗೆ ಬಳಿಕ ಮನವರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. 

IPL Auction 2024: ಸ್ಟಾರ್ಕ್‌, ಕಮಿನ್ಸ್‌ಗೆ ಏಕಿಷ್ಟು ದೊಡ್ಡ ಮೊತ್ತ? IPL ಸೀಸನ್ ಪೂರ್ತಿ ಲಭ್ಯ ಇರ್ತಾರಾ ಈ ಇಬ್ಬರು ವೇಗಿಗಳು?

ಆದರೆ ಈ ಬಗ್ಗೆ ಫ್ರಾಂಚೈಸಿಯು ಸ್ಪಷ್ಟನೆ ನೀಡಿದ್ದು, ಹರಾಜಿನಲ್ಲಿ ಶಶಾಂಕ್ ಹೆಸರಿನ ಇಬ್ಬರು ಇದ್ದಿದ್ದರಿಂದ ಗೊಂದಲವಾಗಿತ್ತು. ಆದರೆ ನಮ್ಮ ಆಯ್ಕೆ ಸರಿಯಾಗಿಯೇ ಇತ್ತು ಎಂದಿದೆ.

ಏಕದಿನ ಶ್ರೇಯಾಂಕ: ಅಗ್ರಸ್ಥಾನ ಕಳೆದುಕೊಂಡ ಶುಭ್‌ಮನ್ ಗಿಲ್

ದುಬೈ: ಭಾರತದ ತಾರಾ ಬ್ಯಾಟರ್ ಶುಭ್‌ಮನ್ ಗಿಲ್ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ವಿಶ್ವಕಪ್ ವೇಳೆ ನಂ.1 ಸ್ಥಾನಕ್ಕೇರಿದ್ದ ಗಿಲ್ ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ಸದ್ಯ 810 ರೇಟಿಂಗ್ ಅಂಕಗಳನ್ನು ಹೊಂದಿದ್ದು, 824 ಅಂಕಗಳೊಂದಿಗೆ ಪಾಕಿಸ್ತಾನದ ಬಾಬರ್ ಆಜಂ ಮತ್ತೆ ನಂ.1 ಸ್ಥಾನ ಅಲಂಕರಿಸಿದ್ದಾರೆ. 

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ 3 ಮತ್ತು 4ನೇ ಸ್ಥಾನಗಳಲ್ಲಿದ್ದಾರೆ. ಶ್ರೇಯಸ್ ಅಯ್ಯರ್‌ 12ನೇ ಸ್ಥಾನಕ್ಕೆ ಕುಸಿದಿದ್ದು, ಕೆ.ಎಲ್. ರಾಹುಲ್ 16ನೇ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಮೊಹಮದ್ ಸಿರಾಜ್ 3ನೇ ಸ್ಥಾನ ಕಾಯ್ದುಕೊಂಡಿದ್ದು, ಜಸ್‌ಪ್ರೀತ್ ಬುಮ್ರಾ 5ನೇ ಹಾಗೂ ಕುಲ್ದೀಪ್ ಯಾದವ್ 8ನೇ ಸ್ಥಾನದಲ್ಲಿದ್ದಾರೆ. ಮೊಹಮದ್ ಶಮಿ 11 ಮತ್ತು ರವೀಂದ್ರ ಜಡೇಜಾ 22ನೇ ಸ್ಥಾನದಲ್ಲಿದ್ದಾರೆ.

click me!