IPL 2024 ಚೆನ್ನೈ ಎದುರು ಟಾಸ್ ಗೆದ್ದ ಲಖನೌ ಬೌಲಿಂಗ್ ಆಯ್ಕೆ; ಎರಡು ತಂಡದಲ್ಲೂ ಮೇಜರ್ ಚೇಂಜ್

By Naveen Kodase  |  First Published Apr 19, 2024, 7:07 PM IST

ಒಂದು ಕಡೆ ಸತತ 2 ಸೋಲು ಕಂಡಿರುವ ಕೆ ಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತವರಿನ ಅಂಗಳದಲ್ಲಿ ಗೆಲ್ಲುವ ಮೂಲಕ ಜಯದ ಹಳಿಗೆ ಮರಳಲು ಕಾತರದಲ್ಲಿದೆ. 


ಲಖನೌ(ಏ.19): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 34ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಲಖನೌ ತಂಡದ ನಾಯಕ ಕೆ ಎಲ್ ರಾಹುಲ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 

ಲಖನೌ ಹಾಗೂ ಚೆನ್ನೈ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಲಖನೌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಶಮಾರ್ ಜೋಸೆಫ್ ಬದಲಿಗೆ ಕಿವೀಸ್ ಮೂಲದ ವೇಗಿ ಮ್ಯಾಟ್ ಹೆನ್ರಿ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಡೇರಲ್ ಮಿಚೆಲ್ ಬದಲಿಗೆ ಮೋಯಿನ್ ಅಲಿ ಹಾಗೂ ಶಾರ್ದೂಲ್ ಠಾಕೂರ್ ಬದಲಿಗೆ ದೀಪಕ್ ಚಹರ್ ತಂಡ ಕೂಡಿಕೊಂಡಿದ್ದಾರೆ.

Tap to resize

Latest Videos

ಪಂಜಾಬ್ ಮೇಲೆ ಮೋಸ ಮಾಡಿ ಪಂದ್ಯ ಗೆಲ್ತಾ ಮುಂಬೈ ಇಂಡಿಯನ್ಸ್..? ಮೈದಾನದಲ್ಲೇ ಕರ್ರನ್ ಅಸಮಾಧಾನ

🚨 Toss Update 🚨

Lucknow Super Giants win the toss and elect to bowl against Chennai Super Kings.

Follow the Match ▶️ https://t.co/PpXrbLNaDm | pic.twitter.com/DS00GIitd2

— IndianPremierLeague (@IPL)

ಒಂದು ಕಡೆ ಸತತ 2 ಸೋಲು ಕಂಡಿರುವ ಕೆ ಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ತವರಿನ ಅಂಗಳದಲ್ಲಿ ಗೆಲ್ಲುವ ಮೂಲಕ ಜಯದ ಹಳಿಗೆ ಮರಳಲು ಕಾತರದಲ್ಲಿದೆ.  ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಲಖನೌ ಸೂಪರ್ ಜೈಂಟ್ಸ್ ತಂಡವು 6 ಪಂದ್ಯಗಳನ್ನಾಡಿ ತಲಾ 3 ಗೆಲುವು, ಸೋಲುಗಳೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

IPL 2024 ಚೆನ್ನೈ ಸೂಪರ್ ಕಿಂಗ್ಸ್ vs ಲಖನೌ ಸೂಪರ್ ಜೈಂಟ್ಸ್: ಸ್ಪಿನ್ ಅಖಾಡದಲ್ಲಿ ಗೆಲ್ಲೋರ್ಯಾರು?

ಉಭಯ ತಂಡಗಳ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್‌ ಗಾಯಕ್ವಾಡ್(ನಾಯಕ), ರಚಿನ್‌ ರವೀಂದ್ರ, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂ ಎಸ್ ಧೋನಿ, ದೀಪಕ್ ಚಹರ್ , ತುಷಾರ್ ದೇಶಪಾಂಡೆ, ಮುಸ್ತಾಫಿಜುರ್‌ ರೆಹಮಾನ್.

ಲಖನೌ ಸೂಪರ್ ಜೈಂಟ್ಸ್‌: ಕ್ವಿಂಟನ್ ಡಿ ಕಾಕ್‌, ಕೆ ಎಲ್ ರಾಹುಲ್‌(ನಾಯಕ), ದೀಪಕ್ ಹೂಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ಕೃನಾಲ್‌ ಪಾಂಡ್ಯ, ರವಿ ಬಿಷ್ಣೋಯ್‌, ಮೊಹ್ಸಿನ್‌ ಖಾನ್, ಮ್ಯಾಟ್ ಹೆನ್ರಿ, ಯಶ್‌ ಠಾಕೂರ್.

ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

click me!