
ಅಹಮದಾಬಾದ್: ಬ್ಯಾಟಿಂಗ್ ವೈಫಲ್ಯ, ಡೆತ್ ಓವರ್‌ಗಳಲ್ಲಿ ಬೌಲರ್‌ಗಳ ಕಳಪೆ ಪ್ರದರ್ಶನದಿಂದಾಗಿ ಸತತ 2 ಪಂದ್ಯ ಗಳಲ್ಲಿ ಸೋತಿರುವ ಪಂಜಾಬ್ ಕಿಂಗ್ಸ್ ಹ್ಯಾಟ್ರಿಕ್ ಸೋಲು ತಪ್ಪಿ ಸುವ ಕಾತರದಲ್ಲಿದ್ದು, ಗುರುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದೆ.
ಪಂಜಾಬ್ 3 ಪಂದ್ಯಗಳಲ್ಲಿ ಒಮ್ಮೆಯೂ 180ರ ಗಡಿ ದಾಟಿಲ್ಲ. ಶಿಖರ್ ಧವನ್ ಲಯದಲ್ಲಿದ್ದರೂ ಸ್ಟೈಕ್‌ರೇಟ್ ಹೆಚ್ಚಿಸುವತ್ತ ಗಮನ ಹರಿಸ ಬೇಕಿದೆ. ಇತರ ಬ್ಯಾಟರ್‌ಗಳು ಸ್ಥಿರತೆ ಕಾಯ್ದು ಕೊಳ್ಳಬೇಕಿದ್ದು, ಸ್ಯಾಮ್ ಕರನ್, ಜಾನಿ ಬೇರ್‌ಸ್ಟೋವ್, ಜಿತೇಶ್ ಶರ್ಮಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಗಾಯಾಳು ಲಿವಿಂಗ್ ಸ್ಟೋನ್ ಅಲಭ್ಯರಾದರೆ ತಂಡಕ್ಕೆ ಹಿನ್ನಡೆಯುಂಟಾಗುವ ಸಾಧ್ಯತೆ ಹೆಚ್ಚು.
ಮಯಾಂಕ್ ಯಾದವ್ ಮಾರಕ ವೇಗಕ್ಕೆ ಮನಸೋತ ದಿಗ್ಗಜ ಕ್ರಿಕೆಟಿಗರು..!
ಅತ್ತ ಗುಜರಾತ್ ಬ್ಯಾಟಿಂಗ್ ಕೂಡಾ ಸಪ್ಪೆಯಾಗಿದೆ. ತಂಡದ ಯಾರಿಂದಲೂ ಈ ಬಾರಿ ಫಿಫ್ಟಿ ದಾಖಲಾಗಿಲ್ಲ, ಮೋಹಿತ್, ಉಮೇಶ್ ಮೊನಚು ದಾಳಿ, ರಶೀದ್, ಅತುಲ್ಲಾರ ಆಲ್ರೌಂಡರ್ ಆಟ ತಂಡಕ್ಕೆ ನಿರ್ಣಾಯಕ.
ಸದ್ಯ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಆಡಿದ 3 ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಸೋಲಿನೊಂದಿಗೆ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡವು ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ರಿಷಭ್ ಪಂತ್ ಹೃದಯ ಕದ್ದ ಇಶಾ ನೇಗಿ..! ಇಲ್ಲಿದೆ ಕ್ಯೂಟ್ ಜೋಡಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಸಂಭವನೀಯ ಆಟಗಾರರ ಪಟ್ಟಿ
ಗುಜರಾತ್ ಟೈಟಾನ್ಸ್:
ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್(ನಾಯಕ), ಅಜ್ಮುತುಲ್ಲಾ, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ನೂರ್ ಅಹಮದ್, ಮೋಹಿತ್ ಶರ್ಮಾ, ದರ್ಶನ್ ನಾಲ್ಕಂಡೆ.
ಪಂಜಾಬ್ ಕಿಂಗ್ಸ್:
ಶಿಖರ್ ಧವನ್(ನಾಯಕ), ಜಾನಿ ಬೇರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ರಾಹುಲ್ ಚಹರ್, ಆರ್ಶದೀಪ್ ಸಿಂಗ್.
ಪಂದ್ಯ ಆರಂಭ: ಸಂಜೆ 7:30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.