Asianet Suvarna News Asianet Suvarna News

17 ವರ್ಷದ ಐಪಿಎಲ್‌ನಲ್ಲಿ ಕಾರ್ತಿಕ್‌ ತಪ್ಪಿಸಿಕೊಂಡಿದ್ದು ಕೇವಲ ಎರಡೇ ಪಂದ್ಯ!

ಅವರು ಐಪಿಎಲ್‌ನಲ್ಲಿ 6 ತಂಡಗಳನ್ನು ಪ್ರತಿನಿಧಿಸಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿದ್ದ ಕಾರ್ತಿಕ್‌ ಆ ವರ್ಷ ಒಂದು ಪಂದ್ಯದಲ್ಲಿ ಆಡಿರಲಿಲ್ಲ. ಬಳಿಕ 2023ರಲ್ಲಿ ಆರ್‌ಸಿಬಿ ಪರ 1 ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿದ್ದಾಗ ಆಡುವ ಅವಕಾಶ ಸಿಕ್ಕಿರಲಿಲ್ಲ. ಇನ್ನುಳಿದಂತೆ 17 ವರ್ಷದಲ್ಲಿ ಅವರಿದ್ದ ತಂಡ ಆಡಿರುವ ಎಲ್ಲಾ ಪಂದ್ಯಗಳಲ್ಲೂ ತಂಡದ ಪರ ಕಣಕ್ಕಿಳಿದಿದ್ದಾರೆ.

Dinesh Karthik missed only 2 matches in his IPL Career kvn
Author
First Published May 24, 2024, 1:44 PM IST

ಅಹಮದಾಬಾದ್‌: ರಾಜಸ್ಥಾನ ವಿರುದ್ಧ ಸೋಲಿನೊಂದಿಗೆ ಬುಧವಾರ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ ಆರ್‌ಸಿಬಿ ತಂಡದ ದಿನೇಶ್ ಕಾರ್ತಿಕ್‌ 17 ವರ್ಷದ ಐಪಿಎಲ್‌ ವೃತ್ತಿ ಬದುಕಿನಲ್ಲಿ 257 ಪಂದ್ಯಗಳನ್ನಾಡಿದ್ದು, ಕೇವಲ 2 ಪಂದ್ಯಗಳನ್ನು ಮಾತ್ರ ತಪ್ಪಿಸಿಕೊಂಡಿದ್ದಾರೆ.

ಅವರು ಐಪಿಎಲ್‌ನಲ್ಲಿ 6 ತಂಡಗಳನ್ನು ಪ್ರತಿನಿಧಿಸಿದ್ದಾರೆ. 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿದ್ದ ಕಾರ್ತಿಕ್‌ ಆ ವರ್ಷ ಒಂದು ಪಂದ್ಯದಲ್ಲಿ ಆಡಿರಲಿಲ್ಲ. ಬಳಿಕ 2023ರಲ್ಲಿ ಆರ್‌ಸಿಬಿ ಪರ 1 ಪಂದ್ಯದಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿದ್ದಾಗ ಆಡುವ ಅವಕಾಶ ಸಿಕ್ಕಿರಲಿಲ್ಲ. ಇನ್ನುಳಿದಂತೆ 17 ವರ್ಷದಲ್ಲಿ ಅವರಿದ್ದ ತಂಡ ಆಡಿರುವ ಎಲ್ಲಾ ಪಂದ್ಯಗಳಲ್ಲೂ ತಂಡದ ಪರ ಕಣಕ್ಕಿಳಿದಿದ್ದಾರೆ.

ಸೋಲಿನೊಂದಿಗೆ ದಿನೇಶ್‌ ಐಪಿಎಲ್‌ಗೆ ವಿದಾಯ

ಅಹಮದಾಬಾದ್‌: ರಾಜಸ್ಥಾನ ವಿರುದ್ಧ ಸೋಲಿನೊಂದಿಗೆ ದಿನೇಶ್‌ ಕಾರ್ತಿಕ್‌ ಸೋಲಿನೊಂದಿಗೆ ಐಪಿಎಲ್‌ಗೆ ವಿದಾಯ ಹೇಳಿದರು. ಅವರು ಈ ವರೆಗೂ 257 ಪಂದ್ಯಗಳಲ್ಲಿ 4842 ರನ್‌ ಕಲೆಹಾಕಿದ್ದಾರೆ. 2008ರಲ್ಲಿ ಡೆಲ್ಲಿ ತಂಡ ಸೇರಿದ್ದ ಕಾರ್ತಿಕ್‌, 2011ರಲ್ಲಿ ಪಂಜಾಬ್‌ ಪಾಲಾಗಿದ್ದರು. 2012, 2013ರಲ್ಲಿ ಮುಂಬೈ, 2014ರಲ್ಲಿ ಡೆಲ್ಲಿ ಪ್ರತಿನಿಧಿಸಿದ್ದರು. 2015ರಲ್ಲಿ ಆರ್‌ಸಿಬಿಗೆ ಹರಾಜಾಗಿದ್ದ ಅವರು ಗುಜರಾತ್‌ ಲಯನ್ಸ್‌ ತಂಡದ ಪರ 2016, 2017ರಲ್ಲಿ ಆಡಿದ್ದರು. ಬಳಿಕ 2021ರ ವರೆಗೂ ಕೆಕೆಆರ್‌ ತಂಡದಲ್ಲಿದ್ದ ಕಾರ್ತಿಕ್‌ರನ್ನು 2022ರಲ್ಲಿ ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿತ್ತು. ಆರ್‌ಸಿಬಿ ಪರ ಅವರು 937 ರನ್‌ ಸಿಡಿಸಿದ್ದಾರೆ.

ಧೋನಿ ಮುಂದಿನ ವರ್ಷ ಐಪಿಎಲ್‌ನಲ್ಲೂ ಆಡುವ ವಿಶ್ವಾಸವಿದೆ: ಚೆನ್ನೈ ಸಿಇಒ

ಚೆನ್ನೈ: ಎಂ.ಎಸ್‌.ಧೋನಿ 2025ರ ಐಪಿಎಲ್‌ನಲ್ಲೂ ಆಡುವ ಭರವಸೆ ಇದೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಿಇಒ ಕಾಶಿ ವಿಶ್ವನಾಥನ್‌ ತಿಳಿಸಿದ್ದಾರೆ. ಈ ಬಗ್ಗೆ ಸಿಎಸ್‌ಕೆ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಅವರು, ‘ಮುಂದಿನ ಆವೃತ್ತಿಯ ಐಪಿಎಲ್‌ ಬಗ್ಗೆ ಧೋನಿ ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಿದ್ದಾರೆ. ಅವರ ನಿರ್ಧಾರಕ್ಕೆ ನಾವು ಬದ್ಧ ಮತ್ತು ಅದನ್ನು ನಾವು ಗೌರವಿಸುತ್ತೇವೆ. ಆದರೆ ಅವರು ಮುಂದಿನ ವರ್ಷವೂ ಆಯ್ಕೆಗೆ ಲಭ್ಯವಿರುವ ಭರವಸೆ ನಮಗೆ ಇದೆ’ ಎಂದು ತಿಳಿಸಿದ್ದಾರೆ. ಧೋನಿ ಈ ಬಾರಿ ಸಿಎಸ್‌ಕೆ ಪರ 73 ಎಸೆತಗಳಲ್ಲಿ 161 ರನ್‌ ಸಿಡಿಸಿದ್ದಾರೆ.
 
ಹೀಟ್‌ಸ್ಟ್ರೋಕ್‌ಗೆ ತುತ್ತಾಗಿದ್ದ ನಟ ಶಾರುಖ್‌ ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ

ಅಹಮದಾಬಾದ್: ಐಪಿಎಲ್‌ ಪಂದ್ಯಾವಳಿಯಲ್ಲಿ ಭಾಗಿಯಾಗಲು ಇಲ್ಲಿಗೆ ಆಗಮಿಸಿದ್ದ ವೇಳೆ ಹೀಟ್‌ಸ್ಟ್ರೋಕ್‌ಗೆ ತುತ್ತಾಗಿದ್ದ ನಟ ಶಾರುಖ್‌ ಖಾನ್‌ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮಂಗಳವಾರದ ಐಪಿಎಲ್‌ ಪಂದ್ಯದ ಬಳಿಕ ದಿಢೀರ್‌ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಶಾರುಖ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 

Latest Videos
Follow Us:
Download App:
  • android
  • ios