IPLನಲ್ಲಿ ಈವರೆಗೂ ಒಮ್ಮೆಯು ಕಪ್ ಗೆಲ್ಲದೇ ಇರೋ ತಂಡಗಳ ಪೈಕಿ RCB ಕೂಡ ಒಂದು. 16 ವರ್ಷಗಳ ಇತಿಹಾಸದಲ್ಲಿ ಹಲವು ಆಟಗಾರರು ಬಂದು ಹೋಗಿದ್ದಾರೆ. ಹಲವು ನಾಯಕರು ಬದಲಾಗಿದ್ದಾರೆ. ಆದ್ರೆ, ತಂಡದ ಹಣೆಬರಹ ಮಾತ್ರ ಬದಲಾಗಿಲ್ಲ.
ಬೆಂಗಳೂರು(ನ.30) ಐಪಿಎಲ್ ಸೀಸನ್ 17 ಅರಂಭಕ್ಕೆ ಇನ್ನು ಮೂರರಿಂದ ನಾಲ್ಕು ತಿಂಗಳು ಬಾಕಿಯಿದೆ. ಮುಂದಿನ ತಿಂಗಳು ಮಿನಿ ಆಕ್ಷನ್ ನಡೆಯಲಿದೆ. ಆದ್ರೆ, ಅದಾಗ್ಲೇ RCB ಫ್ಯಾನ್ಸ್ ತಮ್ಮ ಘೋಷಣೆ ಈ ಸಲ ಕಪ್ ನಮ್ದೇ ಅಂತ ಶುರು ಮಾಡಿದ್ದಾರೆ. ಇವರ ಈ ಕಾನ್ಫಿಡೆನ್ಸ್ಗೆ ಕಾರಣ ಆ ಒಬ್ಬ ಪ್ಲೇಯರ್..? ಯಾರು ಪ್ಲೇಯರ್..? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ...!
IPLನಲ್ಲಿ ಈವರೆಗೂ ಒಮ್ಮೆಯು ಕಪ್ ಗೆಲ್ಲದೇ ಇರೋ ತಂಡಗಳ ಪೈಕಿ RCB ಕೂಡ ಒಂದು. 16 ವರ್ಷಗಳ ಇತಿಹಾಸದಲ್ಲಿ ಹಲವು ಆಟಗಾರರು ಬಂದು ಹೋಗಿದ್ದಾರೆ. ಹಲವು ನಾಯಕರು ಬದಲಾಗಿದ್ದಾರೆ. ಆದ್ರೆ, ತಂಡದ ಹಣೆಬರಹ ಮಾತ್ರ ಬದಲಾಗಿಲ್ಲ. ಇನ್ನು RCB ಅಭಿಮಾನಿಗಳಂತೂ ತಮ್ಮ ತಂಡ ಕಪ್ ಗೆಲ್ಲದೇ ಹೋದ್ರು, ತಮ್ಮ ತಂಡವನ್ನ ಬಿಟ್ಟುಕೊಡಲ್ಲ. ಈ ಸಲ ಕಪ್ ನಮ್ದೇ ಅಂತ ಅನ್ನೋದನ್ನ ಮಾತ್ರ ಬಿಡಲ್ಲ. IPL ಸೀಸನ್ 17 ಅರಂಭಕ್ಕೆ ಇನ್ನು ಮೂರರಿಂದ ನಾಲ್ಕು ತಿಂಗಳು ಬಾಕಿಯಿದೆ. ಆದ್ರೆ, ಅದಾಗ್ಲೇ RCB ಫ್ಯಾನ್ಸ್ ತಮ್ಮ ಘೋಷಣೆ ಶುರು ಮಾಡಿದ್ದಾರೆ. ಈ ಸಲ ಕಪ್ ಗೆದ್ದೇ ಗೆಲ್ತೀವಿ ಅಂತಿದ್ದಾರೆ. ಅದಕ್ಕೆ ಕಾರಣ, ಆಸ್ಟ್ರೇಲಿಯಾ ಬಿಗ್ ಹಿಟ್ಟರ್ ಗ್ಲೇನ್ ಮ್ಯಾಕ್ಸ್ವೆಲ್..!
undefined
ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವೈಟ್‌ಬಾಲ್ ಸರಣಿಯಿಂದ ಬ್ರೇಕ್ ಬಯಸಿದ್ದೇಕೆ?
IPLನಲ್ಲಿ RCB ತಂಡದ ಪರ ಆಡೋ ಮ್ಯಾಕ್ಸ್ವೆಲ್, ಸದ್ಯ ಭಯಾನಕ ಫಾರ್ಮ್ನಲ್ಲಿದ್ದಾರೆ. ಖತರ್ನಾಕ್ ಬ್ಯಾಟಿಂಗ್ ಮೂಲಕ ಅಬ್ಬರಿಸ್ತಿದ್ದಾರೆ. ಸಿಂಗಲ್ ಹ್ಯಾಂಡೆಂಡ್ಲಿ ಪಂದ್ಯಗಳನ್ನ ಗೆಲ್ಲಿಸಿಕೊಡ್ತಿದ್ದಾರೆ. ಟೀಮ್ ಇಂಡಿಯಾ ವಿರುದ್ಧದ ಮೂರನೇ T20 ಪಂದ್ಯವೇ ಇದಕ್ಕೆ ಸಾಕ್ಷಿ.
ಬ್ಯಾಟ್ ಹಿಡಿದ್ರೆ ರಾಕ್ಷಸನಂತೆ ಮ್ಯಾಕ್ಸಿ ಆಟ..!
ಯೆಸ್, ಮೊನ್ನೆಯ ಪಂದ್ಯದಲ್ಲಿ ಮ್ಯಾಕ್ಸಿ ನಿಜಕ್ಕೂ ಬ್ಯಾಟ್ ಹಿಡಿದ ರಾಕ್ಷಸ ನಂತೆ ಆರ್ಭಟಿಸಿದ್ರು. ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನ ಚಿಂದಿ ಉಡಾಯಿಸಿದ್ರು. ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದ್ರು. ಮ್ಯಾಕ್ಸಿಯ ಅಬ್ಬರದಿಂದಾಗಿ ಆಸೀಸ್ ಅಸಾಧ್ಯವಾದ ಗೆಲುವನ್ನ ಸಾಧಿಸ್ತು. ಟೀಮ್ ಇಂಡಿಯಾ ಸೋತ್ರು, RCB ಫ್ಯಾನ್ಸ್ ಫುಲ್ ಖುಷ್ ಆದ್ರು.
ಏಕದಿನ ವಿಶ್ವಕಪ್‌ನ ಅಪ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ಮ್ಯಾಕ್ಸ್ವೆಲ್ ರಾಕ್ಷಸನ ಅವತಾರ ತಾಳಿದ್ರು. ನಭೂತೋ..ನಭವಿಷ್ಯತ್ ಎನ್ನುವಂತಹ ಇನ್ನಿಂಗ್ಸ್ ಮೂಲಕ ಮುಂಬೈನ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ರು. 5ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದು ಇಂಜುರಿ ಮಧ್ಯೆಯೂ ಆರ್ಭಟಿಸಿದ್ರು. ಡಬಲ್ ಸೆಂಚುರಿ ಸಿಡಿಸಿದ್ರು.
Vijay Hazare Trophy: ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್, ಕರ್ನಾಟಕಕ್ಕೆ ಸತತ 4ನೇ ಜಯ
ಮ್ಯಾಕ್ಸ್ವೆಲ್ ಅಷ್ಟೇ ಅಲ್ಲ, ವಿರಾಟ್ ಕೊಹ್ಲಿಯು ಜಬರ್ದಸ್ತ್ ಫಾರ್ಮ್ನಲ್ಲಿದ್ದಾರೆ. ಇನ್ನು ಕ್ಯಾಪ್ಟನ್ ಡುಪ್ಲೆಸಿ ನಂಬಿಕಸ್ಥ ಪ್ಲೇಯರ್ ಆಗಿದ್ದಾರೆ. ಒಟ್ಟಿನಲ್ಲಿ RCB ಆಟಗಾರರ ಫಾರ್ಮ್ ಅಭಿಮಾನಿಗಳ ಕಾನ್ಫಿಡೆನ್ಸ್ ಹೆಚ್ಚಿಸಿದೆ. ಆದ್ರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚುತ್ತಿರೋ ಈ ಆಟಗಾರರು, IPLನಲ್ಲೂ ಇದೇ ಪ್ರದರ್ಶನ ನೀಡ್ತಾರಾ..? ಅನ್ನೋದನ ಕಾದು ನೋಡಬೇಕಿದೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್