ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರದ ಆರಂಭದ ಬಳಿಕ ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 192 ರನ್ ಟಾರ್ಗೆಟ್ ನೀಡಿದೆ.
ವಿಶಾಖಪಟ್ಟಣಂ(ಮಾ.31) ಡೆವಿಡ್ ವಾರ್ನರ್ , ಪೃಥ್ವಿ ಶಾ ಹಾಗೂ ರಿಷಬ್ ಪಂತ್ ಅಬ್ಬರ, ಪತಿರಾನ ಅದ್ಬುತ ಕ್ಯಾಚ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಹೋರಾಟ ಹಲವು ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಮೂವರು ಸ್ಫೋಟಕ ಬ್ಯಾಟಿಂಗ್ ಮೂಲಕ ರನ್ ಮಳೆ ಸುರಿಸಿದರು. ಆದರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳಿಂದ ರನ್ ಬರಲಿಲ್ಲ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇದರಂತೆ ಉತ್ತಮ ಆರಂಭ ಪಡೆಯಿತು. ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಹೋರಾಟ ಡೆಲ್ಲಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ವಾರ್ನರ್ ಹಾಫ್ ಸೆಂಚುರಿ ಸಿಡಿಸಿದರು. ಮತ್ತೊಂದು ಸ್ಫೋಟಕ ಹೊಡೆತಕ್ಕೆ ಮುಂದಾಗ ಡೇವಿಡ್ ವಾರ್ನರ್ ಮಥೀಶಾ ಪತಿರಾನಗೆ ಕ್ಯಾಚ್ ನೀಡಿದರು. ಪತಿರಾನ ಅದ್ಭುತ ಕ್ಯಾಚ್ ಮೂಲಕ ಗಮನಸೆಳೆದರು.
ಧೋನಿ ಬೆರುಗುಗೊಳಿಸಿದ ಪತಿರಾನ ಕ್ಯಾಚ್, IPL 2024 ಅತ್ಯುತ್ತಮ ಕ್ಯಾಚ್ ಪಟ್ಟ!
ಡೇವಿಡ್ ವಾರ್ನರ್ 35 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು.ಇದರ ಬೆನ್ನಲ್ಲೇ ಪೃಥ್ವಿ ಶಾ ವಿಕೆಟ್ ಪತನಗೊಂಡಿತು ಕೇವಲ 27 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 43 ರನ್ ಸಿಡಿಸಿ ಔಟಾದರು. ನಾಯಕ ರಿಷಬ್ ಪಂತ್ ಬ್ಯಾಟಿಂಗ್ ಡೆಲ್ಲಿ ತಂಡದ ಕೈಹಿಡಿಯಿತು. ಅಬ್ಬರಿಸಿದ ಪಂತ್ ಹಾಫ್ ಸೆಂಚುರಿ ಸಿಡಿಸಿದರು. ಪಂತ್ 31 ಎಸೆತದಲ್ಲಿ 52 ರನ್ ಸಿಡಿಸಿದರು.
ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ಮೊದಲ ಕ್ರಮಾಂಕದ ರಿಷಬ್ ಪಂತ್ ವಿಕೆಟ್ ಪತನದ ಬಳಿಕ ಡೆಲ್ಲಿ ಕೊಂಚ ಮಂಕಾಯಿತು. ಮಿಚೆಲ್ ಮಾರ್ಶ್ 18 ರನ್ ಸಿಡಿಸಿ ಔಟಾದರು. ಇತ್ತ ತ್ರಿಸ್ಟನ್ ಸ್ಟಬ್ಸ್ ಡಕೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಅಂತಿಮ ಹಂತದಲ್ಲಿ ಅಕ್ಸರ್ ಪಟೇಲ್ ಹಾಗೂ ಅಭಿಷೇಕ್ ಪೊರೆಲ್ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿತು.
ಸಿಎಸ್‌ಕೆ ಪರ ಅದ್ಭುತ ಕ್ಯಾಚ್ ಹಿಡಿದ ಮಥೀಶಾ ಪತಿರಾನ 3 ವಿಕೆಟ್ ಕಬಳಿಸಿ ಮಿಂಚಿದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಮುಂದೆ 192 ರನ್ ಚೇಸಿಂಗ್ ಸವಾಲು ಎದುರಿಸಲು ಸಜ್ಜಾಗಿದೆ. ಈ ಮೊತ್ತ ಚೇಸ್ ಮಾಡಬಲ್ಲ ಬ್ಯಾಟ್ಸ್‌ಮನ್ ಚೆನ್ನೈ ತಂಡದಲ್ಲಿದ್ದಾರೆ. ಆದೆರೆ ಡೆಲ್ಲಿ ಬೌಲರ್ ಮುಂದೆ ಚೇಸಿಂಗ್ ಕುತೂಹಲ ಕೆರಳಿಸಿದೆ.
1500+ ಸಿಕ್ಸರ್ ಸಿಡಿಸಿ 2ನೇ ಸ್ಥಾನದಲ್ಲಿದ್ರೂ RCB ಕಪ್ ಗೆದ್ದಿಲ್ಲ, ಫಸ್ಟ್ ಪ್ಲೇಸಲ್ಲಿರೋ ತಂಡ ಕಪ್ ಗೆದ್ದಿದ್ಯಾ?
ಸಿಎಸ್‌ಕೆ ಪ್ಲೇಯಿಂಗ್ 11
ರುತುರಾಜ್ ಗಾಯಕ್ವಾಡ್(ನಾಯಕ), ರಾಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮೆಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ, ದೀಪಕ್ ಚಹಾರ್, ತುಷಾರ್ ಪಾಂಡೆ, ಮಥೀಶಾ ಪತಿರಾನ, ಮುಸ್ತಾಫಿಜುರ್ ರಹಮಾನ್