IPL 2023 ಪಂದ್ಯಕ್ಕೂ ಮೊದಲೇ ಆರ್‌ಸಿಬಿಗೆ ಬ್ಯಾಡ್ ನ್ಯೂಸ್, ಸ್ಟಾರ್ ಆಲ್‌ರೌಂಡರ್ ಅಲಭ್ಯ!

By Suvarna NewsFirst Published Apr 2, 2023, 3:03 PM IST
Highlights

IPL 2023 ಟೂರ್ನಿ ಅದ್ಧೂರಿ ಆರಂಭ ಪಡೆದಿದೆ. ಮೂರನೇ ದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ  ಮುಂಬೈ ಇಂಡಿಯನ್ಸ್ ಹೋರಾಟಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದರೆ ಮೊದಲ ಪಂದ್ಯಕ್ಕೆ ತಯಾರಿ ನಡೆಸಿಕೊಳ್ಳುತ್ತಿರುವ ಆರ್‌ಸಿಬಿ ತಂಡಕ್ಕೆ ಚಿಂತೆ ಶುರುವಾಗಿದೆ. ಪ್ರಮುಖ ಆಟಗಾರ ಗೈರಾಗಿದ್ದಾರೆ.

ಬೆಂಗಳೂರು(ಏ.02); ಐಪಿಎಲ್ 2023 ಟೂರ್ನಿಯಲ್ಲಿ ಮೊದಲ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಜ್ಜಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಈಗಾಗಲೇ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸುತ್ತಿದ್ದಾರೆ. ಆದರೆ ಆರ್‌ಸಿಬಿ ತನ್ನ ಮೊದಲ ಪಂದ್ಯಕ್ಕೂ ಮೊದಲೇ ಪ್ರಮುಖ ಆಟಗಾರನ ಸೇವೆಯಿಂದ ವಂಚಿತವಾಗಿದೆ. ಶ್ರೀಲಂಕಾದ ಸ್ಟಾರ್ ಆಲ್ರೌಂಡರ್ ವಾನಿಂಡು ಹಸರಂಗ ಆರ್‌ಸಿಬಿ ತಂಡ ಸೇರಿಕೊಂಡಿಲ್ಲ. ಎಪ್ರಿಲ್ 9ರ ವರೆಗೆ ವಾನಿಂಡು ಹಸರಂಗ ಆರ್‌ಸಿಬಿಗೆ ಲಭ್ಯವಿಲ್ಲ ಎಂದು ಕೋಚ್ ಸಂಜಯ್ ಬಂಗಾರ್ ಸ್ಪಷ್ಟಪಡಿಸಿದ್ದಾರೆ. 

ವಾನಿಂಡು ಹಸರಂಗ ಆರ್‌ಸಿಬಿಯ ಕೀ ಪ್ಲೇಯರ್. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಗರಿಷ್ಠ ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಹಸರಂಗ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಕಳೆದ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ2ನೇ ಗರಿಷ್ಠ ವಿಕೆಟ್ ಟೇಕರ್ ಅನ್ನೋ ದಾಖಲೆಯನ್ನು ಬರೆದಿದ್ದಾರೆ. ಹಸರಂಗ 2022ರ ಐಪಿಎಲ್ ಟೂರ್ನಿಯಲ್ಲಿ 16 ಪಂದ್ಯಗಳಿಂದ 26 ವಿಕೆಟ್ ಕಬಳಿಸಿದ್ದಾರೆ. ಇದೀಗ ಏಪ್ರಿಲ್ 9ರ  ವರೆಗೆ ಹಸರಂಗ ಲಭ್ಯವಿಲ್ಲ. 

ಈ ಸಲ ಕಪ್ ನಹಿ, ಪಂದ್ಯಕ್ಕೂ ಮೊದಲೇ ಡುಪ್ಲಿಸಿಸ್ ಹೇಳಿಕೆಗೆ ಅಭಿಮಾನಿಗಳು ಶಾಕ್, ನಕ್ಕು ನೀರಾದ ಕೊಹ್ಲಿ!

ಇತ್ತ ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್‌ವುಡ್ ಸೇವೆಯೂ ಆರ್‌ಸಿಬಿಗೆ ಲಭ್ಯವಿಲ್ಲ. ಹೇಜಲ್‌ವುಡ್ ಬದಲು ಇಂಗ್ಲೆಂಡ್ ವೇಗಿ ರೀಸಿ ಟೊಪ್ಲೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಇತ್ತ ರಜತ್ ಪಾಟಿದಾರ್ ಇಂಜುರಿ ಕಾರಣದಿಂದ ಆರ್‌ಸಿಬಿಗೆ ಲಭ್ಯವಿಲ್ಲ. ಆದರೆ ಇಂಜುರಿಯಿಂದ ಚೇತರಿಸಿಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಇಂದಿನ ಪಂದ್ಯ ಆಡಲಿದ್ದಾರೆ ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ.

ಕಳೆದ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿ ನಿರಾಸೆ ಅನುಭವಿಸಿತ್ತು. ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಸೋಲು ಅನುಭವಿಸಿತ್ತು. ಈ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು.  ಪ್ರತಿ ಆವೃತ್ತಿಯಲ್ಲಿ ಆರ್‌ಸಿಬಿ ಅತ್ಯಂತ ಬಲಿಷ್ಠ ತಂಡವಾಗಿ ಕಣಕ್ಕಿಳಿದಿದೆ. ಆದರೆ ಪ್ರತಿ ಬಾರಿ ಟ್ರೋಫಿ ಮಿಸ್ ಮಾಡಿಕೊಂಡಿದೆ. ಈ ಬಾರಿ ಕೆಲ ಬದಲಾವಣೆಯೊಂದಿಗೆ ಆರ್‌ಸಿಬಿ ಕಣಕ್ಕಿಳಿದಿದೆ. ಹೀಗಾಗಿ ಮತ್ತೆ ಟ್ರೋಫಿ ಆಸೆ ಚಿಗುರೊಡೆದಿದೆ.

10ನೇ ಕ್ಲಾಸ್‌ ಅಂಕಪಟ್ಟಿ ಹಂಚಿಕೊಂಡ ಕೊಹ್ಲಿ! ವಿರಾಟ್‌ SSLC ಯಲ್ಲಿ ಪಡೆದ ಸ್ಕೋರ್ ಎಷ್ಟು?

ಸಂಭವನೀಯ ಆಟಗಾರರ ಪಟ್ಟಿ
ಆರ್‌​ಸಿ​ಬಿ: ಡು ಪ್ಲೆಸಿ​(​ನಾ​ಯ​ಕ), ಕೊಹ್ಲಿ, ಶಾಬಾಜ್‌, ಮ್ಯಾಕ್ಸ್‌ವೆಲ್‌, ಮಹಿ​ಪಾಲ್‌, ಕಾರ್ತಿಕ್‌, ಬ್ರೇಸ್‌​ವೆಲ್‌, ಮನೋಜ್‌, ಹರ್ಷಲ್‌, ಟಾಪ್ಲಿ, ಸಿರಾ​ಜ್‌
ಮುಂಬೈ: ರೋಹಿತ್‌(ನಾ​ಯ​ಕ​), ಇಶಾನ್‌, ಗ್ರೀನ್‌, ಸೂರ‍್ಯ​ಕು​ಮಾ​ರ್‌, ತಿಲಕ್‌, ಡೇವಿಡ್‌, ರಮ​ಣ್‌​ದೀಪ್‌, ಆರ್ಚರ್‌, ಶೊಕೀನ್‌, ಬೆಹ್ರ​ನ್‌​ಡ್ರಾಫ್‌, ಚಾವ್ಲಾ

ಚಿನ್ನ​ಸ್ವಾಮಿ ಕ್ರೀಡಾಂಗ​ಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ​ಯಾ​ಗಿದ್ದು, ದೊಡ್ಡ ಮೊತ್ತದ ಪಂದ್ಯ​ಗ​ಳಿಗೆ ಹೆಸ​ರು​ವಾಸಿ. ಇಲ್ಲಿ ಚೇಸಿಂಗ್‌ ಮಾಡುವ ತಂಡ ಹೆಚ್ಚಿನ ಲಾಭ ಗಳಿ​ಸಿದ ಉದಾ​ಹ​ರ​ಣೆ​ಗ​ಳಿದ್ದು, ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ದು​ಕೊ​ಳ್ಳುವ ಸಾಧ್ಯತೆ ಹೆಚ್ಚಿದೆ.
 

click me!