IPL 2023: ಟಾಸ್‌ ಗೆದ್ದ ಆರ್‌ಸಿಬಿ ತಂಡದಲ್ಲಿ ಆಗಿರೋ ಬದಲಾವಣೆ ಏನು?

Published : May 06, 2023, 07:01 PM ISTUpdated : May 06, 2023, 07:12 PM IST
IPL 2023: ಟಾಸ್‌ ಗೆದ್ದ ಆರ್‌ಸಿಬಿ ತಂಡದಲ್ಲಿ ಆಗಿರೋ ಬದಲಾವಣೆ ಏನು?

ಸಾರಾಂಶ

ಅಂಕಪಟ್ಟಿಯಲ್ಲಿ ಕಟ್ಟಕಡೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಅಗ್ರ ನಾಲ್ಕು ತಂಡಗಳಲ್ಲಿ ಸ್ಥಾನ ಪಡೆಯುವ ಗುರಿಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಶನಿವಾರ ಅರುಣ್‌ ಜೇಟ್ಲಿ ಮೈದಾನದಲ್ಲಿ ಕಾದಾಟ ನಡೆಸಲಿದೆ.  

ನವದೆಹಲಿ (ಮೇ.6): ವಿವಾದಗಳಿಂದಾಗಿಯೇ ಸುದ್ದಿಯಲ್ಲಿದ್ದ ಕಳೆದ ಪಂದ್ಯದಲ್ಲಿ ಲಕ್ನೋ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ ವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಉತ್ತರದ ದಂಡಯಾತ್ರೆಯಲ್ಲಿ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಅರುಣ್‌ ಜೇಟ್ಲಿ ಮೈದಾನದಲ್ಲಿ ಎದುರಿಸಲಿದೆ.  ಈ ಬಾರಿ ಸರಾಸರಿ 165ರಂತೆ ರನ್‌ ದಾಖಲಾಗಿರುವ ಈ ಮೈದಾನದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಯಾಗಲಿವೆ. ಟಾಸ್‌ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಇತ್ತೀಚೆಗೆ ತಂಡಕ್ಕೆ ಸೇರಿಕೊಂಡಿರುವ ಕೇದಾರ್‌ ಜಾಧವ್‌ ಅವರನ್ನು ಆರ್‌ಸಿಬಿ ಆಡುವ ಬಳಗಕ್ಕೆ ಸೇರಿಸಿಕೊಂಡಿದೆ. ನಾವು ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧಾರ ಮಾಡಿದ್ದೇವೆ. ಪಿಚ್‌ ಡ್ರೈ ಆಗಿರುವಂತೆ ಕಾಣುತ್ತಿದೆ. ಇಂದು ರಾತ್ರಿ ಇಬ್ಬನಿ ಸಮಸ್ಯೆ ಇರುವ ರೀತಿ ಕಾಣುತ್ತಿಲ್ಲ. ಪಂದ್ಯದ ಪ್ರತಿ ಹಂತದಲ್ಲೂ ಯೋಚೆನೆ ಮಾಡುತ್ತಾ ಯಾವುವುದ ಉತ್ತಮ ಸ್ಕೋರ್‌ ಎನ್ನುವುದನ್ನು ತೀರ್ಮಾನ ಮಾಡಬೇಕಾಗುತ್ತದೆ. ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಇರುವ ಕಾರಣ, ಫ್ಲೆಕ್ಸಿಬಲ್‌ ಆಗಿರಲು ಸಾಧ್ಯವಾಗುತ್ತದೆ. ಅಗ್ರ ಕ್ರಮಾಂಕದ ನಾಲ್ಕು ಪ್ಲೇಯರ್‌ಗಳು ಉತ್ತಮವಾಗಿ ಆಡಿದ್ದಾರೆ. ಕೆಲ ಪಂದ್ಯಗಳಲ್ಲಿ ಉತ್ತಮವಾಗಿ ರನ್‌ ಬಾರಿಸಿದ್ದೇವೆ. ಕೇದಾರ್‌ ಜಾದವ್‌ ತಂಡಕ್ಕೆ ಮರಳಿದ್ದಾರೆ ಎಂದು ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್‌ ಟಾಸ್‌ ವೇಳೆ ಹೇಳಿದ್ದಾರೆ.

ನಾವೂ ಕೂಡ ಇಲ್ಲಿ ಮೊದಲು ಬ್ಯಾಟಿಂಗ್‌ ಮಾಡಲು ಬಯಸಿದ್ದೆವು. ತುಂಬಾ ಎನರ್ಜಿಯೊಂದಿಗೆ ಹಾಗೂ ಪ್ಯಾಶನ್‌ನೊಂದಿಗೆ ನಾವು ಇಲ್ಲಿ ಬಂದಿದ್ದೆವು. ಇಂದು ಇಲ್ಲಿ ಮಳೆ ಬಂದಿದೆ. ಹಾಗಾಗಿ ಸಂಜೆಯ ವೇಳೆ ಇಬ್ಬನಿ ಇರುವ ಸಾಧ್ಯತೆ ಕಡಿಮೆ. ಆನ್ರಿಚ್‌ ನೋರ್ಜೆ ಬದಲು ಮುಖೇಶ್‌ ಕುಮಾರ್‌ ತಂಡಕ್ಕೆ ಬಂದಿದ್ದಾರೆ. ಇನ್ನೊಬ್ಬ ವಿದೇಶಿ ಆಟಗಾರನ ಬದಲಿಗೆ ಮಿಚೆಲ್‌ ಮಾರ್ಷ್‌ ತಂಡಕ್ಕೆ ಬಂದಿದ್ದಾರೆ ಎಂದು ಡೇವಿಡ್‌ ವಾರ್ನರ್‌ ಟಾಸ್‌ವೇಳೆ ಹೇಳಿದ್ದಾರೆ.


ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿ.ಕೀ), ಮಿಚೆಲ್ ಮಾರ್ಷ್, ರಿಲೀ ರೊಸೊವ್, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

IPL 2023 ಚೆನ್ನೈ ಎದುರು ಹೀನಾಯ ಸೋಲುಂಡ ಮುಂಬೈ ಇಂಡಿಯನ್ಸ್..! ಸೋಲಿನ ಲೆಕ್ಕಚುಕ್ತಾ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿ.ಕೀ), ಕೇದಾರ್ ಜಾಧವ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್

ಹಳ್ಳಿಯಲ್ಲಿ ಒಲೆಯಲ್ಲಿ ಅಡುಗೆ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಕ್ರಿಕೆಟ್ ದೇವರು

 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ