
ಮುಂಬೈ(ಮೇ.09): ಐಪಿಎಲ್ 2023 ಟೂರ್ನಿಯ ಪ್ಲೇ ಆಫ್ ರೇಸ್‌ಗಾಗಿ ಹೋರಾಟ ತೀವ್ರಗೊಳ್ಳುತ್ತಿದೆ. ಆದರೆ ಆರ್‌ಸಿಬಿ ಸಂಕಷ್ಟ ಹೆಚ್ಚಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಸೋಲಿನ ಬಳಿಕ ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧವೂ ಮುಗ್ಗರಿಸಿದೆ. 200 ರನ್ ಟಾರ್ಗೆಟ್ ನೀಡಿದ್ದರೂ ಮುಂಬೈ ಇಂಡಿಯನ್ಸ್ ನಿರಾಯಾಸವಾಗಿ ಪಂದ್ಯ ಗೆದ್ದುಕೊಂಡಿದೆ.16.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮುಂಬೈ ಗೆಲುವಿನ ಕೇಕೆ ಹಾಕಿದೆ. ಇತ್ತ ಮುಂಬೈ ಇಂಡಿಯನ್ಸ್ 8ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿದರೆ, ಇತ್ತ ಆರ್‌ಸಿಬಿ 7ನೇ ಸ್ಥಾನಕ್ಕೆ ಕುಸಿದಿದೆ. ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೂ ಪ್ಲೇ ಆಫ್ ಹಾದಿ ಕಠಿಣವಾಗಿದೆ.
ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಆರ್‌ಸಿಬಿ 200 ರನ್ ಟಾರ್ಗೆಟ್ ನೀಡಿತ್ತು. ಬೃಹತ್ ಮೊತ್ತ ಚೇಸಿಂಗ್ ಮಾಡಲು ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ಸ್ಫೋಟಕ ಆರಂಭ ಪಡೆಯಿತು. ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಆರ್‌ಸಿಬಿ ತಲೆನೋವು ಹೆಚ್ಚಿಸಿತು. ಇಶಾನ್ ಕಿಶನ್ 21 ಎಸೆತದಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 42 ರನ್ ಸಿಡಿಸಿದರು. ಮುಂಬೈ ಇಂಡಿಯನ್ಸ್ 51 ರನ್ ಸಿಡಿಸಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಇಶಾನ್ ಕಿಶನ್ ವಿಕೆಟ್ ಪತನದ ಬೆನ್ನಲ್ಲೇ ಸಪ್ಪೆಯಾಗಿದ್ದ ನಾಯಕ ರೋಹಿತ್ ಶರ್ಮಾ ವಿಕೆಟ್ ಕೈಚೆಲ್ಲಿದರು. ರೋಹಿತ್ ಕೇವಲ 7 ರನ್ ಸಿಡಿಸಿ ನಿರ್ಗಮಿಸಿದರು.
IPL 2023 ಈ ಬಾರಿ ಕಪ್ ಗೆಲ್ಲುವ ತಂಡ ಯಾವುದು? ರವಿಶಾಸ್ತ್ರಿ ಭವಿಷ್ಯ ನಿಜವಾಗುತ್ತಾ?
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾಯಕ ರೋಹಿತ್ ಶರ್ಮಾ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಕಳೆದ 5 ಪಂದ್ಯದಲ್ಲಿ ರೋಹಿತ್ ಶರ್ಮಾ 10 ರನ್ ದಾಟಿಲ್ಲ. ಪ್ರತಿ ಪಂದ್ಯದಲ್ಲಿ ಬಹುಬೇಗನೆ ವಿಕೆಟ್ ಕೈಚೆಲ್ಲಿ ನಿರಾಸೆ ಅನುಭವಿಸಿದ್ದಾರೆ.
ಕಳೆದ 5 ಪಂದ್ಯದಲ್ಲಿ ರೋಹಿತ್ ಶರ್ಮಾ ಇನ್ನಿಂಗ್ಸ್
2 ರನ್ (8 ಎಸೆತ)
3 ರನ್ (5 ಎಸೆತ)
0 ರನ್(3 ಎಸೆತ)
0 ರನ್(3 ಎಸೆತ)
7 ರನ್ (8 ಎಸೆತ)
ರೋಹಿತ್ ವಿಕೆಟ್ ಪತನದ ಬಳಿಕ ನೆಹಾಲ್ ವಧೆರಾ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟ ಆರಂಭಗೊಂಡಿತು. ಸ್ಪೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿ ಲೆಕ್ಕಾಚಾರ ಉಲ್ಟಾ ಮಾಡಿದರು. ಬೌಂಡರಿ ಸಿಕ್ಸರ್ ಮೂಲಕ ಮುಂಬೈ ರನ್‌ರೇಟ್ ಹೆಚ್ಚಿಸಿದರು. ಇತ್ತ ಆರ್‌ಸಿಬಿ ಈ ಜೋಡಿ ಬೇರ್ಪಡಿಸಲು ಅವಿರತ ಶ್ರಮವಹಿಸಿದರು ಪ್ರಯೋಜನವಾಗಲಿಲ್ಲ.
ಅಂತಿಮ 36 ಎಸೆತದಲ್ಲಿ ಮುಂಬೈ ಗೆಲುವಿಗೆ 46 ರನ್ ಅವಶ್ಯಕತೆ ಇತ್ತು. ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್‌ಗೆ ಆರ್‌ಸಿಬಿ ಗೋಡೆ ಛಿದ್ರಗೊಂಡಿತು. ಸೂರ್ಯಕುಮಾರ್ ಯಾದವ್ 35 ಎಸೆತದಲ್ಲಿ 7 ಬೌಂಡರಿ ಹಾಗೂ 6 ಬೌಂಡರಿ ಮೂಲಕ 83 ರನ್ ಸಿಡಿಸಿದರು. ಇತ್ತ ಸೂರ್ಯಕುಮಾರ್ ವಿಕೆಟ್ ಪತನದ ಬೆನ್ನಲ್ಲೇ ಟಿಮ್ ಡೇವಿಡ್ ಡಕೌಟ್ ಆದರು. ಆದರೆ ನೆಹಾಲ್ ಹಾಗೂ ಕ್ಯಾಮರೂನ್ ಗ್ರೀನ್ ಮುಂಬೈ ಆತಂಕ ದೂರ ಮಾಡಿದರು. ನೆಹಾಲ್ ಭರ್ಜರಿ ಸಿಕ್ಸರ್ ಮೂಲಕ 16.3 ಓವರ್‌ಗಳಲ್ಲೇ ಮುಂಬೈಗೆ ಗೆಲುವು ತಂದುಕೊಟ್ಟರು. ನೆಹಾಲ್ ಅಜೇಯ 52 ರನ್ ಸಿಡಿಸಿದರು. ಈ ಮೂಲಕ ಮುಂಬೈ 6 ವಿಕೆಟ್ ಗೆಲುವು ದಾಖಲಿಸಿತು.
IPL 2023 ಅಂತಿಮ ಎಸೆತ ನೋ ಬಾಲ್, ಫ್ರೀ ಹಿಟ್‌ನಲ್ಲಿ ಹೈದರಾಬಾದ್ ತಂಡಕ್ಕೆ ರೋಚಕ ಗೆಲುವು!
ಆರ್‌ಸಿಬಿ ಇನ್ನಿಂಗ್ಸ್: ಮುಂಬೈ ವಿರುದ್ದ ಆರ್‌ಸಿಬಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ವಿರಾಟ್ ಕೊಹ್ಲಿ ಹಾಗೂ ಅನೂಜ್ ರಾವತ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಹೋರಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು. ಮ್ಯಾಕ್ಸ್‌ವೆಲ್ 33 ಎಸೆತದಲ್ಲಿ 68 ರನ್ ಕಾಣಿಕೆ ನೀಡಿದರು. ಇತ್ತ ಫಾಫ್ 41 ಎಸೆತದಲ್ಲಿ 65ರನ್ ಸಿಡಿಸಿದರು. ವೈಫಲ್ಯದಿಂದ ಸೊರಗಿದ್ದ ದಿನೇಶ್ ಕಾರ್ತಿಕ್ 18 ಎಸೆತದಲ್ಲಿ 30 ರನ್ ಸಿಡಿಸಿದರು. ಕೇದಾರ್ ಯಾದವ್ ಅಜೇಯ 12 ಹಾಗೂ ವಾನಿಂಡು ಹಸರಂಗ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 6 ವಿಕೆಟ್ ನಷ್ಟಕ್ಕೆ 199 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.