IPL 2023 ಆರ್‌​ಸಿ​ಬಿಗೆ ಡು ಆರ್‌ ಡೈ ಪಂದ್ಯ: ರಾಜ​ಸ್ಥಾನ ಎದುರಾಳಿ

By Naveen KodaseFirst Published May 14, 2023, 9:41 AM IST
Highlights

ಜೈಪುರದಲ್ಲಿಂದು ರಾಜಸ್ಥಾನ-ಆರ್‍‌ಸಿಬಿ ಮುಖಾಮುಖಿ
ಆರ್‍‌ಸಿಬಿ ಗೆದ್ದ​ರಷ್ಟೇ ಪ್ಲೇ ಆಫ್‌ ಆಸೆ ಜೀವಂತ
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಫಾಫ್ ಡು ಪ್ಲೆಸಿಸ್ ಪಡೆ

ಜೈಪು​ರ(ಮೇ.14): ಕಳೆ​ದೆ​ರಡು ಪಂದ್ಯ​ಗಳ ಆಘಾ​ತ​ಕಾರಿ ಸೋಲಿ​ನೊಂದಿಗೆ ಈ ಬಾರಿ ಐಪಿ​ಎ​ಲ್‌ನ ಪ್ಲೇ-ಆಫ್‌ ರೇಸ್‌​ನಿಂದಲೇ ಹೊರ​ಬೀ​ಳುವ ಆತಂಕ​ದ​ಲ್ಲಿ​ರುವ ರಾಯಲ್‌ ಚಾಲೆಂಜರ್ಸ್ ಶನಿ​ವಾರ ಮಾಡು ಇಲ್ಲವೇ ಮಡಿ ಪಂದ್ಯ​ದಲ್ಲಿ ರಾಜ​ಸ್ಥಾನ ರಾಯಲ್ಸ್‌ ವಿರುದ್ಧ ಸೆಣ​ಸಾ​ಡ​ಲಿದೆ. ಪಂದ್ಯ​ಕ್ಕೆ ಜೈಪುರ ಕ್ರೀಡಾಂಗಣ ಆತಿಥ್ಯ ವಹಿ​ಸ​ಲಿ​ದೆ.

ಸದ್ಯ ಆರ್‌​ಸಿಬಿ 11 ಪಂದ್ಯ​ಗ​ಳಲ್ಲಿ 5 ಗೆಲು​ವಿ​ನೊಂದಿಗೆ 10 ಅಂಕ ಸಂಪಾ​ದಿ​ಸಿದ್ದು, ಉಳಿದ ಮೂರು ಪಂದ್ಯ​ಗ​ಳಲ್ಲೂ ಗೆಲ್ಲು​ವು​ದರ ಜೊತೆಗೆ ನೆಟ್‌ ರನ್‌​ರೇಟ್‌ ಕೂಡಾ ಏರಿ​ಸ​ಬೇಕು. ಹೀಗಾಗಿ ರಾಜ​ಸ್ಥಾನ ವಿರುದ್ಧ ಅದ​ರದೇ ತವ​ರಿ​ನಲ್ಲಿ ದೊಡ್ಡ ಅಂತ​ದ​ರಲ್ಲಿ ಗೆಲ್ಲ​ಬೇ​ಕಾದ ಅನಿ​ವಾ​ರ್ಯತೆ ಫಾಫ್‌ ಪಡೆ​ಗಿದೆ. ಒಂದು ವೇಳೆ ಸೋತರೆ ನಾಕೌಟ್‌ ರೇಸ್‌​ನಿಂದ ಹೊರ​ಗು​ಳಿ​ಯು​ವುದು ಖಚಿತ. ಮತ್ತೊಂದೆಡೆ ರಾಜ​ಸ್ಥಾನ 12 ಪಂದ್ಯ​ಗ​ಳಲ್ಲಿ 6 ಜಯ​ದೊಂದಿಗೆ 12 ಅಂಕ​ ಹೊಂದಿದ್ದು, ಈ ಪಂದ್ಯ​ದಲ್ಲಿ ಗೆದ್ದರಷ್ಟೇ ಅಗ್ರ-4ರಲ್ಲಿ ಉಳಿ​ಯುವ ಅವ​ಕಾ​ಶ​ ಸಿಗ​ಲಿದೆ.

Latest Videos

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಂಚ ಮೇಲುಗೈ ಸಾಧಿಸಿದೆ. 28 ಪಂದ್ಯಗಳ ಪೈಕಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ, 12 ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್‌ ಗೆಲುವಿನ ನಗೆ ಬೀರಿದೆ. ಇನ್ನು ಎರಡು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿರಲಿಲ್ಲ.

IPL 2023 ಸನ್‌ರೈಸರ್ಸ್‌ ಎದುರು ಲಖನೌಗೆ ಗೆಲುವು ತಂದ ಪೂರನ್‌-ಮಂಕಡ್‌

ಇಂಟ್ರೆಸ್ಟಿಂಗ್ ಅಂಕಿ-ಅಂಶ:

ಆರ್ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್‌ ಇನ್ನು ಕೇವಲ 21 ರನ್‌ ಗಳಿಸಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 4000 ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಇದಷ್ಟೇ ಅಲ್ಲದೇ ಇನ್ನು ಕೇವಲ 5 ಬೌಂಡರಿ ಬಾರಿಸಿದರೆ, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 50 ಬೌಂಡರಿ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ರಾಜಸ್ಥಾನ ರಾಯಲ್ಸ್‌ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಇನ್ನು ಕೇವಲ 2 ರನ್‌ ಬಾರಿಸಿದರೆ, ಫಾಫ್ ಡು ಪ್ಲೆಸಿಸ್ ಹಿಂದಿಕ್ಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳಲಿದ್ದಾರೆ.

ರಾಜಸ್ಥಾನ ರಾಯಲ್ಸ್ ಮತ್ತೋರ್ವ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಇನ್ನು ಕೇವಲ 8 ರನ್ ಬಾರಿಸಿದರೆ, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 400 ರನ್ ಬಾರಿಸಿದ ಬ್ಯಾಟರ್‍‌ಗಳ ಕ್ಲಬ್ ಸೇರಲಿದ್ದಾರೆ.

ಸಂಭವನೀಯ ತಂಡಗಳು ಹೀಗಿವೆ:

ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಫಾಫ್ ಡು ಪ್ಲೆಸಿಸ್‌(ನಾಯಕ), ವಿರಾಟ್ ಕೊಹ್ಲಿ, ಅನೂಜ್ ರಾವತ್, ಗ್ಲೆನ್‌ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮ್ರಾರ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಕೇದಾರ್ ಜಾಧವ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್.

ರಾಜಸ್ಥಾನ ರಾಯಲ್ಸ್:  
ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ಕ್ಯಾಪ್ಟನ್&ವಿಕೆಟ್ ಕೀಪರ್), ಜೋ ರೂಟ್, ಧೃವ್ ಜ್ವರೇಲ್, ಶಿಮ್ರೊನ್ ಹೆಟ್ಮೇಯರ್, ರವಿಚಂದ್ರನ್ ಅಶ್ವಿನ್‌, ಟ್ರೆಂಟ್‌ ಬೌಲ್ಟ್, ಸಂದೀಪ್ ಶರ್ಮಾ, ಕೆ ಎಂ ಆಸಿಫ್, ಯುಜುವೇಂದ್ರ ಚಹಲ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

click me!