IPL 2023 ಅಗ್ರಸ್ಥಾನಕ್ಕಿಂದು ರಾಯಲ್ಸ್‌ vs ಟೈಟಾನ್ಸ್‌ ಫೈಟ್‌

By Naveen KodaseFirst Published May 5, 2023, 10:17 AM IST
Highlights

ಜೈಪುರದಲ್ಲಿಂದು ರಾಜಸ್ಥಾನಕ್ಕೆ ಗುಜರಾತ್ ಟೈಟಾನ್ಸ್ ಸವಾಲು
ಕಳೆದ ಪಂದ್ಯದಲ್ಲಿ ಸೋಲುಂಡಿರುವ ಇತ್ತಂಡಗಳು
ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿವೆ ಉಭಯ ತಂಡಗಳು

ಜೈಪು​ರ(ಮೇ.05): ಕಳೆದ ಆವೃತ್ತಿ ಐಪಿ​ಎ​ಲ್‌ ಫೈನ​ಲ್‌​ನಲ್ಲಿ ಮುಖಾ​ಮುಖಿ​ಯಾ​ಗಿದ್ದ ಗುಜ​ರಾತ್‌ ಟೈಟಾನ್ಸ್ ಹಾಗೂ ರಾಜ​ಸ್ಥಾನ ರಾಯಲ್ಸ್‌ ತಂಡ​ಗಳು ಈ ಬಾರಿಯೂ ಪ್ಲೇ-ಆಫ್‌​ಗೇ​ರುವ ನೆಚ್ಚಿನ ತಂಡ​ಗ​ಳೆ​ನಿ​ಸಿದ್ದು, ಶುಕ್ರ​ವಾರ ಟೂರ್ನಿ​ಯಲ್ಲಿ 2ನೇ ಬಾರಿ ಮುಖಾ​ಮುಖಿ​ಯಾ​ಗು​ತ್ತಿವೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್‌ ಟೈಟಾನ್ಸ್ ಗೆದ್ದರೆ ಪ್ಲೇ-ಆಫ್‌ ಹೊಸ್ತಿಲು ತಲು​ಪ​ಲಿ​ದ್ದು, ರಾಜಸ್ಥಾನ ರಾಯಲ್ಸ್‌ ಗೆದ್ದರೆ ಅಗ್ರಸ್ಥಾನಕ್ಕೇರಲಿ​ದೆ.

ಸದ್ಯ ಗುಜ​ರಾತ್‌ ಟೈಟಾನ್ಸ್‌ 9 ಪಂದ್ಯ​ಗ​ಳಲ್ಲಿ 12 ಅಂಕ​ದೊಂದಿಗೆ ಅಗ್ರ​ಸ್ಥಾ​ನ​ದ​ಲ್ಲಿ​ದ್ದರೆ, ರಾಜ​ಸ್ಥಾನ 9 ಪಂದ್ಯ​ದಲ್ಲಿ 10 ಅಂಕ​ದೊಂದಿಗೆ 4ನೇ ಸ್ಥಾನ​ದ​ಲ್ಲಿದೆ. ಆದ​ರೆ ಎರಡೂ ತಂಡ​ಗಳು ಕೊನೆ ಪಂದ್ಯ​ದಲ್ಲಿ ಸೋಲ​ನು​ಭ​ವಿ​ಸಿದ್ದು, ಗೆಲು​ವಿನ ಲಯಕ್ಕೆ ಮರ​ಳುವ ಕಾತ​ರ​ದ​ಲ್ಲಿದೆ. ಈ ಪೈಕಿ ರಾಜ​ಸ್ಥಾನ ಕೊನೆ 4 ಪಂದ್ಯ​ಗ​ಳಲ್ಲಿ 3ರಲ್ಲಿ ಸೋತಿದ್ದು, ಪ್ಲೇ-ಆಫ್‌ ಸ್ಥಾನಕ್ಕೆ ಪೈಪೋಟಿ ಹೆಚ್ಚು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಮತ್ತೊಂದು ಸೋಲು ತಂಡದ ಪ್ಲೇ-ಆಫ್‌ ಕನ​ಸಿಗೆ ಹಿನ್ನಡೆ ಉಂಟು​ಮಾ​ಡ​ಬ​ಹುದು. ಎರಡೂ ತಂಡ​ಗ​ಳಲ್ಲಿ ಸ್ಫೋಟಕ ಬ್ಯಾಟ​ರ್‌​ಗಳು ಹಾಗೂ ತಜ್ಞ ಸ್ಪಿನ್ನ​ರ್‌​ಗ​ಳಿ​ದ್ದಾರೆ. ಆದರೆ ಜೈಪು​ರದ ಸ್ಪರ್ಧಾ​ತ್ಮಕ ಪಿಚ್‌​ನಲ್ಲಿ ಯಾರು ಮೇಲುಗೈ ಸಾಧಿ​ಸು​ತ್ತಾರೆ ಎಂಬ ಕುತೂ​ಹ​ಲ​ವಿದೆ. ಉಭಯ ತಂಡ​ಗಳ ಮೊದಲ ಮುಖಾ​ಮುಖಿ​ಯಲ್ಲಿ ರಾಜ​ಸ್ಥಾನ ಗೆದ್ದಿತ್ತು.

Latest Videos

ಗುಜರಾತ್ ಟೈಟಾನ್ಸ್ ತಂಡದಲ್ಲಿ ಶುಭ್‌ಮನ್ ಗಿಲ್‌, ವೃದ್ದಿಮಾನ್ ಸಾಹ, ಕನ್ನಡಿಗ ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರ ದಂಡೇ ಇದೆ. ಇನ್ನು ಮೊಹಮ್ಮದ್ ಶಮಿ, ರಶೀದ್ ಖಾನ್, ನೂರ್ ಅಹಮ್ಮದ್ ಹಾಗೂ ಮೋಹಿತ್ ಶರ್ಮಾ ಮಾರಕ ದಾಳಿ ನಡೆಸುತ್ತಿರುವುದು ಗುಜರಾತ್ ಪಡೆಯು ಆತ್ಮವಿಶ್ವಾಸದಿಂದ ತೇಲುವಂತೆ ಮಾಡಿದೆ. ಇನ್ನು ಗುಜರಾತ್ ತಂಡವು ಯಾವುದೇ ಒಬ್ಬ ಆಟಗಾರನ ಮೇಲೆ ಅವಲಂಬಿತರಾಗದೇ ಇರುವುದು ತಂಡದ ಪ್ಲಸ್ ಪಾಯಿಂಟ್ ಎನಿಸಿದೆ.

ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಂಡವು ಸಾಕಷ್ಟು ಸಮತೋಲಿತ ತಂಡವಾಗಿ ಕಾಣುತ್ತಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ಶಿಮ್ರೊನ್ ಹೆಟ್ಮೇಯರ್ ಅವರಂತಹ ಸ್ಪಷಲಿಸ್ಟ್ ಆಟಗಾರರು ಮತ್ತೊಮ್ಮೆ ರನ್ ಮಳೆ ಹರಿಸಲು ರೆಡಿಯಾಗಿದ್ದಾರೆ. ಇನ್ನು ಯುಜುವೇಂದ್ರ ಚಹಲ್, ಅಶ್ವಿನ್, ಕುಲ್ದೀಪ್ ಯಾದವ್, ಟ್ರೆಂಟ್ ಬೌಲ್ಟ್ ಹಾಗೂ ಸಂದೀಶ್ ಶರ್ಮಾ, ಗುಜರಾತ್ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. 

IPL 2023: ಐಪಿಎಲ್‌ನಲ್ಲಿ 6ನೇ ಸೋಲು ಕಂಡ ಸನ್‌ರೈಸರ್ಸ್‌, ಹೈದರಾಬಾದ್‌ನಲ್ಲಿ ಕೆಕೆಆರ್‌ ವಿನ್‌

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡವು ಒಟ್ಟಾರೆ 4 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ ಮೇಲುಗೈ ಸಾಧಿಸಿದೆ. 4 ಪಂದ್ಯಗಳ ಪೈಕಿ ಟೈಟಾನ್ಸ್‌ ತಂಡವು 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ರಾಜಸ್ಥಾನ ರಾಯಲ್ಸ್ ತಂಡವು ಒಂದು ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. 

ಸಂಭವನೀಯ ಆಟಗಾರರ ಪಟ್ಟಿ

ಗುಜ​ರಾ​ತ್‌ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌​ಮನ್‌ ಗಿಲ್, ಅಭಿ​ನವ್‌ ಮನೋಹರ್, ಹಾರ್ದಿ​ಕ್‌ ಪಾಂಡ್ಯ​(​ನಾ​ಯ​ಕ), ವಿಜಯ್ ಶಂಕರ್‌, ಡೇವಿಡ್ ಮಿಲ್ಲರ್‌, ರಾಹುಲ್ ತೆವಾ​ಟಿಯಾ, ರಶೀದ್‌ ಖಾನ್, ನೂರ್‌ ಅಹಮ್ಮದ್, ಮೊಹಮ್ಮದ್ ಶಮಿ, ಮೋಹಿತ್‌ ಶರ್ಮಾ, ಜೋಶ್ವಾ ಲಿಟ್ಲ್.

ರಾಜಸ್ಥಾನ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌(ನಾಯಕ), ದೇವದತ್ ಪಡಿಕ್ಕಲ್‌, ಧೃವ್‌ ಜ್ವರೆಲ್, ಶಿಮ್ರೊನ್ ಹೆಟ್ಮೇಯರ್‌, ಜೇಸನ್ ಹೋಲ್ಡರ್‌, ರವಿಚಂದ್ರನ್ ಅಶ್ವಿನ್‌, ಯುಜುವೇಂದ್ರ ಚಹಲ್‌, ಸಂದೀಪ್‌ ಶರ್ಮಾ, ಟ್ರೆಂಟ್ ಬೌಲ್ಟ್‌, ಕುಲ್ದೀ​ಪ್‌ ಯಾದವ್.

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್/ಜಿಯೋ ಸಿನಿಮಾ

ಪಿಚ್‌ ರಿಪೋ​ರ್ಟ್‌

ಸವಾಯ್‌ ಮಾನ್‌​ಸಿಂಗ್‌ ಕ್ರೀಡಾಂಗ​ಣ ಸ್ಪರ್ಧಾ​ತ್ಮಕ ಕ್ರಿಕೆ​ಟ್‌ಗೆ ಹೆಸ​ರು​ವಾಸಿ. ಸ್ಪಿನ್ನ​ರ್‌​ಗ​ಳಿಗೆ ಪಿಚ್‌ ಹೆಚ್ಚಿನ ನೆರವು ನೀಡ​ಬ​ಹುದು. ಕಳೆದ ಎರಡೂ ಪಂದ್ಯ​ಗ​ಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿತ್ತು. ಟಾಸ್‌ ಪ್ರಮುಖವಾಗಬಹುದು.

click me!