IPL 2023 ಗಿಲ್ ಸೆಂಚುರಿ, ಶಮಿ ದಾಳಿ, ಹೈದರಾಬಾದ್ ಮಣಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ಗುಜರಾತ್!

By Suvarna NewsFirst Published May 15, 2023, 11:26 PM IST
Highlights

ಶುಬಮನ್ ಗಿಲ್ ಸೆಂಚುರಿ ಸಿಡಿಸಿ ಅಬ್ಬರಿಸಿದರೆ, ಇತ್ತ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಹಾಗೂ ಮೋಹಿತ್ ಶರ್ಮಾ ಮಿಂಚಿದರು. ಇದರ ಪರಿಣಾಮ ಗುಜರಾತ್ ಟೈಟಾನ್ಸ್ 34 ರನ್ ಗೆಲುವು ದಾಖಲಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ.

ಅಹಮ್ಮದಾಬಾದ್(ಮೇ.15):  ಶುಬಮನ್ ಗಿಲ್ ಸ್ಫೋಟಕ ಸೆಂಚುರಿ ಬಳಿ, ಮೊಹಮ್ಮದ್ ಶಮಿ ಮಾರಕ ದಾಳಿಗೆ ಸನ್‌ರೈಸರ್ಸ್ ಹೈದರಾಬಾದ್ ತತ್ತರಿಸಿದೆ. ಬಡಹತ್ ಮೊತ್ತ ಚೇಸ್ ಮಾಡಲು ಸಾಧ್ಯವಾಗದೆ ಎಸ್ಆರ್‌ಹೆಚ್ ಸೋಲೋಪ್ಪಿಕೊಂಡಿದೆ. 34 ರನ್ ಗೆಲುವಿನ ಮೂಲಕ ಗುಜರಾತ್ ಟೈಟಾನ್ಸ್ ಐಪಿಎಲ್ 2023 ಟೂರ್ನಿಯ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಇಷ್ಟೇ ಈ ಬಾರಿಯ ಟೂರ್ನಿಯಲ್ಲಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿದ ಮೊದಲ ತಂಡ ಗುಜರಾತ್ ಟೈಟಾನ್ಸ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತ ಹೈದರಾಬಾದ್ ಟೂರ್ನಿಯಿಂದ ಹೊರಬಿದ್ದಿದೆ.

ಹೈದರಾಬಾದ್ ತಂಡಕ್ಕೆ 189 ರನ್ ಟಾರ್ಗೆಟ್ ನೀಡಲಾಗಿತ್ತು. ಮೊಹಮ್ಮದ್ ಶಮಿ ಹಾಗೂ ಮೋಹಿತ್ ಶರ್ಮಾ ದಾಳಿಗೆ ಹೈದರಾಬಾದ್ ನಲುಗಿತು. ರನ್ ಗಳಿಸುವುದಕ್ಕಿಂತ ವಿಕೆಟ್ ಉಳಿಸಿಕೊಳ್ಳುವುದೇ ಸಾಹಸವಾಗಿತ್ತು. ಆರಂಭಿಕ ಅನ್ಮೋಲ್‌ಪ್ರೀತ್ ಸಿಂಗ್ ಕೇವಲ 5 ರನ್ ಸಿಡಿಸಿ ಔಟಾದರು. ಇತ್ತ ಅಭಿಷೇಕ್ ಶರ್ಮಾ 4 ರನ್ ಸಿಡಿಸಿ ನಿರ್ಗಮಿಸಿದರು. 11 ರನ್‌ಗೆ ಸನ್‌ರೈಸರ್ಸ್ ಹೈದರಾಬಾದ್ ಪ್ರಮುಕ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

'IPL 2023 ಧೋನಿಯಂತಹ ಆಟಗಾರರು ತಲೆಮಾರಿಗಲ್ಲ, ಶತಮಾನಕ್ಕೊಬ್ಬರು ಸಿಗುತ್ತಾರೆ

ರಾಹುಲ್ ತ್ರಿಪಾಠಿ ಕೇವಲ 1 ರನ್ ಸಿಡಿಸಿ ಔಟಾದರು. ನಾಯಕ ಆ್ಯಡಿನ್ ಮರ್ಕ್ರಮ್ ಹಾಗೂ ಹೆನ್ರಿಚ್ ಕಾಲ್ಸೀನ್ ಜೊತೆಯಾಟದಿಂದ ಹೈದರಾಬಾದ್ ಚೇತರಿಸಿಕೊಳ್ಳುವ ಸೂಚನೆ ನೀಡಿತು. ಆದರೆ ಇವರಿಬ್ಬರ ಹೋರಾಟ ಹೆಚ್ಚು ಹೊತ್ತು ಇರಲಿಲ್ಲ. ಆ್ಯಡಿನ್ ಮರ್ಕ್ರಮ್ 10 ರನ್ ಸಿಡಿಸಿ ಔಟಾದರು. ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ಪತನ ನಿಲ್ಲಲಿಲ್ಲ. ಇತ್ತ ರನ್ ಹಾಗೂ ವಿಕೆಟ್ ಇಲ್ಲದೆ ಸೋಲಿನ ಸುಳಿಗೆ ಸಿಲುಕಿತು. 

ಸನ್ವೀರ್ ಸಿಂಗ್ 7 ರನ್ ಸಿಡಿಸಿ ಔಟಾದರೆ, ಅಬ್ದುಲ್ ಸಮಾದ್ 4 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ಕೋ ಜಾನ್ಸೆನ್ 3 ರನ್ ಸಿಡಿಸಿ ಔಟಾದರು. ಹೆನ್ರಿಚ್ ಏಕಾಂಗಿ ಹೋರಾಟ ನೀಡಿದರೆ, ಇತರರಿಂದ ಸಾಥ್ ಸಿಗಲಿಲ್ಲ. ಅಂತಿಮ ಹಂತದಲ್ಲಿ ಹೆನ್ರಿಚ್ ಕಾಲ್ಸೀನ್ ಹಾಗೂ  ಭುವನೇಶ್ವರ್ ಕುಮಾರ್ ಜೊತೆಯಾಟ ಹೈದರಾಬಾದ್ ಕೈಹಿಡಿಯಿತು. 

IPL 2023 ಆರ್‌ಸಿಬಿ ದಾಖಲೆ ಗೆಲುವು ಸಾಧಿಸಿದರೂ ದಿನೇಶ್ ಕಾರ್ತಿಕ್ ಫುಲ್ ಟ್ರೋಲ್!

ಹೆನ್ರಿಚ್ ಕಾಲ್ಸೀನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಭುವನೇಶ್ವರ್ ಕುಮಾರ್ ಉತ್ತಮ  ಸಾಥ್ ನೀಡಿದರು. ದಿಟ್ಟ ಹೋರಾಟ ನಡೆಸಿದ ಕಾಲ್ಸೀನ್ 64 ರನ್ ಸಿಡಿಸಿ ಔಟಾದರು. ಈ ವೇಳೆ ಹೈದರಾಬಾದ್ ಗೆಲುವಿಗೆ 19 ಎಸೆತದಲ್ಲಿ 62 ರನ್ ಅವಶ್ಯಕತೆ ಇತ್ತು. ಭುವನೇಶ್ವರ್ ಕುಮಾರ್ 27 ರನ್ ಸಿಡಿಸಿದರೆ ಇತ್ತ ಮಯಾಂಕ್ ಮಾರ್ಕಂಡೆ ಅಜೇಯ 18 ರನ್ ಸಿಡಿಸಿ ದಿಟ್ಟ ಹೋರಾಟ ನೀಡಿದರು. ಸನ್‌ರೈಸರ್ಸ್ ಹೈದರಾಬಾದ್ 9 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು. ಗುಜರಾತ್ ಟೈಟಾನ್ಸ್ 34 ರನ್ ಗೆಲುವು ದಾಖಲಿಸಿತು. ಇತ್ತ ಹೈದರಾಬಾದ್ ಐಪಿಎಲ್ ಟೂರ್ನಿಯಿಂದ ಹೊರಬಿತ್ತು.

ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಬಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಹೋರಾಟ ನರವಾಯಿತು. ಆರಂಭದಲ್ಲೇ ವಿಕಟ್ ಕಳದೆಕೊಂಡು ಆಘಾತ ಅನುಭವಿಸಿದ್ದ ಗುಜರಾತ್ ತಂಡಕ್ಕೆ ಗಿಲ್ ಹಾಗೂ ಸುದರ್ಶನ್ ಬ್ಯಾಟಿಂಗ್ ನೆರವಾಯಿತು. ಸಾಯಿ ಸುದರ್ಶನ್ 47 ರನ್ ಕಾಣಿಕೆ ನೀಡಿದರು. ಆದರೆ ಗಿಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಸೆಂಚುರಿ ಸಿಡಿಸಿದರು. ಐಪಿಎಲ್ ಟೂರ್ನಿಯಲ್ಲಿ ಶುಬಮನ್ ಗಿಲ್ ಚೊಚ್ಚಲ ಸೆಂಚುರಿ ದಾಖಲಿಸಿದರು. ಗಿಲ್ 58 ಎಸೆತದಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 101 ರನ್ ಸಿಡಿಸಿದರು. ಇತರ ಬ್ಯಾಟ್ಸ್‌ಮನ್‌ಗಳಿಂದ ರನ್ ಬರಲಿಲ್ಲ. ಹೀಗಾಗಿ ಗುಜರಾತ್ ಟೈಟಾನ್ಸ್ 9 ವಿಕೆಟ್ ನಷ್ಟಕ್ಕೆ 188 ರನ್ ಸಿಡಿಸಿತು.

click me!