
ಮುಂಬೈ(ಮೇ.12): ರಶೀದ್ ಖಾನ್ ಸಿಕ್ಸರ್ ಹೊಡೆತಕ್ಕೆ ಮುಂಬೈ ಇಂಡಿಯನ್ಸ್ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು. ಬರೋಬ್ಬರಿ 10 ಸಿಕ್ಸರ್ ಸಿಡಿಸುವ ಮೂಲಕ ಮುಂಬೈ ಭರ್ಜರಿ ಗೆಲುವಿನ ಲೆಕ್ಕಾಚಾರ ಉಲ್ಟಾ ಮಾಡಿದರು. ಬರೋಬ್ಬರಿ 10 ಸಿಕ್ಸರ್ ಸಿಡಿಸಿದ ರಶೀದ್ ಖಾನ್ ಗುಜರಾತ್ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕಾರಣ ಸೂರ್ಯಕುಮಾರ್ ಯಾದವ್ ಸ್ಫೋಟಕ ಸೆಂಚುರಿಗೆ ಗುಜರಾತ್ ಟೈಟಾನ್ಸ್ ತಲೆಬಾಗಿದೆ. ಸೂರ್ಯಕುಮಾರ್ ಸಿಡಿಸಿದ ಅಜೇಯ 103 ರನ್ ನೆರವಿನಿಂದ ಗುಜರಾತ್ ಟೈಟಾನ್ಸ್‌ಗೆ 219 ರನ್ ಟಾರ್ಗೆಟ್ ನೀಡಲಾಗಿತ್ತು. ಈ ಬೃಹತ್ ಮೊತ್ತ ಚೇಸ್ ಮಾಡಲು ವಿಫಲವಾದ ಗುಜರಾತ್ 27 ಸೋಲಿಗೆ ಗುರಿಯಾಗಿದೆ.
ಬೃಹತ್ ಟಾರ್ಗೆಟ್ ಗುಜರಾತ್ ಟೈಟಾನ್ಸ್ ಮೇಲೆ ಇನ್ನಿಲ್ಲದ ಒತ್ತಡ ಹಾಕಿತು. ಇದರ ಪರಿಣಾಮ ಪ್ರತಿ ಎಸೆತದಲ್ಲಿ ರನ್ ಅನಿವಾರ್ಯವಾಯಿತು. ಆದರೆ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ವೃದ್ಧಿಮಾನ್ ಸಾಹ 2 ರನ್ ಹಾಗೂ ಶುಭಮನ್ ಗಿಲ್ ಕೇವಲ 6 ರನ್ ಸಿಡಿಸಿ ಔಟಾದರು.ನಾಯಕ ಹಾರ್ದಿಕ್ ಪಾಂಡ್ಯ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. 26 ರನ್‌ಗೆ ಗುಜರಾಟ್ ಟೈಟಾನ್ಸ್ 3 ವಿಕೆಟ್ ಕಳೆದುಕೊಂಡಿತು.
ಜೈಸ್ವಾಲ್ ಶತಕ ಬಾರಿಸಲು ತಮ್ಮ ಫಿಫ್ಟಿ ಅವಕಾಶ ತ್ಯಾಗ ಮಾಡಿದ ಸ್ಯಾಮ್ಸನ್..! ಸಂಜು ನಡೆಗೆ ಫ್ಯಾನ್ಸ್ ಫಿದಾ
ವಿಜಯ್ ಶಂಕರ್ ಹಾಗೂ ಡೇವಿಡ್ ಮಿಲ್ಲರ್ ಜೊತೆಯಾಟದಿಂದ ಗುಜರಾತ್ ಟೈಟಾನ್ಸ್ ಚೇತರಿಕೆ ಕಂಡಿತು. ವಿಜಯ್ ಶಂಕರ್ 14 ಎಸೆತದಲ್ಲಿ 6 ಬೌಂಡರಿ ಮೂಲಕ 29 ರನ್ ಸಿಡಿಸಿ ಔಟಾದರು. ಡೇವಿಡ್ ಮಿಲ್ಲರ್ ಹೋರಾಟ ಮುಂದುವರಿಸಿದರು. ಮಿಲ್ಲರ್‌ಗೆ ಉತ್ತಮ ಸಾಥ್ ಸಿಗಲಿಲ್ಲ. ಅಭಿನವ್ ಮನೋಹರ್ 2 ರನ್ ಸಿಡಿಸಿ ಔಟಾದರು. ಡೇವಿಡ್ ಮಿಲ್ಲರ್ 26 ಎಸೆತದಲ್ಲಿ 4 ಬೌಂಡರಿ 2 ಸಿಕ್ಸರ್ ಮೂಲಕ 41 ರನ್ ಸಿಡಿಸಿ ಔಟಾದರು.
ರಾಹುಲ್ ಟಿವಾಟಿಯಾ 14 ರನ್ ಸಿಡಿಸಿ ನಿರ್ಗಮಿಸಿದರು. ಅಂತಿಮ ಹಂತದಲ್ಲಿ ರಶೀದ್ ಖಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೌಂಡರಿ ಸಿಕ್ಸರ್ ಮೂಲಕ ಮುಂಬೈ ಲೆಕ್ಕಾಚಾರ ಉಲ್ಟಾ ಮಾಡುವ ಪ್ರಯತ್ನ ಮಾಡಿದರು. ಆದರೆ ಮತ್ತೊಂದಡೆಯಿಂದ ವಿಕೆಟ್ ಪತನ ಮುಂದುವರಿಯಿತು. ನೂರ್ ಅಹಮ್ಮದ್ 1 ರನ್ ಸಿಡಿಸಿ ಔಟಾದರು. ಅಂತಿಮ 24 24 ಎಸೆತದಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿಗೆ 83 ರನ್ ಅವಶ್ಯಕತೆ ಇತ್ತು.
ರಶೀದ್ ಖಾನ್ ಅಬ್ಬರ ಮುಂದುವರಿಯಿತು. ಕೇವಲ 21 ಎಸೆತದಲ್ಲಿ ರಶೀದ್ ಖಾನ್ ಹಾಫ್ ಸೆಂಚುರಿ ಸಿಡಿಸಿದರು. ರಶೀದ್ ಖಾನ್ ಗುಜರಾತ್ ಟೈಟಾನ್ಸ್ ಸೋಲಿನ ಅಂತರ ಕಡಿಮೆ ಮಾಡಿದರು. ಹೀನಾಯ ಸೋಲಿನ ಆತಂಕದಲ್ಲಿದ್ದ ಗುಜರಾತ್ ಟೈಟಾನ್ಸ್‌ಗೆ ರಶೀದ್ ಖಾನ್ ನೆರವಾದರು. ರಶೀದ್ ಅಬ್ಬರದಿಂದ ಅಂತಿಮ 12 ಎಸೆತದಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿಗೆ 55 ರನ್ ಅವಶ್ಯಕೆ ಇತ್ತು.
ವೈಡ್ ಹಾಕಲೆತ್ನಿಸಿದ ಸುಯಾಶ್ ಶರ್ಮಾ ಕೀಳು ಅಭಿರುಚಿಯನ್ನು ಕಟು ಶಬ್ದಗಳಿಂದ ಟೀಕಿಸಿದ ಆಕಾಶ್ ಚೋಪ್ರಾ
19ನೇ ಓವರ್‌ನ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 2ನೇ ಎಸೆತದಲ್ಲಿ ರಶೀದ್ ಖಾನ್ ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಮುಂಬೈ ತಲೆನೋವು ಹೆಚ್ಚಾಯಿತು. ಆದರೆ ಮರು ಎಸೆತದಲ್ಲಿ ರಶೀದ್ ಖಾನ್ ನಿರೀಕ್ಷಿತ ರನ್ ಬರಲಿಲ್ಲ. ಕೇವಲ 1 ರನ್ ಸಿಡಿಸಿದರು. ಮುಂದಿನ ಮೂರು ಎಸೆತದ ಎದುರಿಸಿದ ಅಲ್ಜಾರಿ ಜೋಸೆಫ್ ಯಾವುದೇ ರನ್ ಸಿಡಿಸಲು ವಿಫಲರಾದರು. ಹೀಗಾಗಿ ಅಂತಿಮ 6 ಎಸೆತದಲ್ಲಿ ಗುಜರಾತ್ ಗೆಲುವಿಗೆ 48 ರನ್ ಬೇಕಿತ್ತು. ಮೊದಲ ಎಸತ ವೈಡ್. ಹೀಗಾಗಿ ಮತ್ತೊಂದು ಎಸೆತ ಬೌಲಿಂಗ್ ಮಾಡಿದ ಕಾರ್ತಿಕೇಯಗೆ ಶಾಕ್. ರಶೀದ್ ಖಾನ್ ಭರ್ಜರಿ ಸಿಕ್ಸರ್ ಸಿಡಿಸಿದರು. ಎರಡನೇ ಎಸೆತದಲ್ಲಿ ರನ್ ಬರಲಿಲ್ಲ. ಮೂರನೇ ಎಸೆತ ಮತ್ತೆ ಸಿಕ್ಸರ್. 4ನೇ ಎಸೆತವೂ ಸಿಕ್ಸರ್. ಬಳಿಕ ರನ್ ಬರಲಿಲ್ಲ. ಈ ಮೂಲಕ ಮುಂಬೈ 27 ರನ್ ಗೆಲುವು ಕಂಡಿತು. ರಶೀದ್ ಖಾನ್ 32 ಎಸೆತದಲ್ಲಿ 10 ಸಿಕ್ಸರ್ ಮೂಲಕ ಅಜಯ 79 ರನ್ ಸಿಡಿಸಿದರು. ಗುಜರಾತ್ ಟೈಟಾನ್ಸ್ 8 ವಿಕೆಟ್ ನಷ್ಟಕ್ಕೆ 191 ರನ್ ಸಿಡಿಸಿತು.
ಮುಂಬೈ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತ್ತು. ಆದರೆ ಸೂರ್ಯಕುಮಾರ್ ಯಾದವ್ ಅಬ್ಬರದಿಂದ ಮುಂಬೈ 218ರನ್ ಸಿಡಿಸಿತು. ಸೂರ್ಯಕುಮಾರ್ ಯಾದವ್ 49 ಎಸೆತದಲ್ಲಿ ಅಜೇಯ 103 ರನ್ ಸಿಡಿಸಿದರು. ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 218 ರನ್ ಸಿಡಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.