IPL 2023 ಲಖ​ನೌಗೆ ಸನ್‌ರೈಸರ್ಸ್ ಹೈದರಾಬಾದ್ ಸವಾ​ಲು

Published : May 13, 2023, 01:18 PM IST
IPL 2023 ಲಖ​ನೌಗೆ ಸನ್‌ರೈಸರ್ಸ್ ಹೈದರಾಬಾದ್ ಸವಾ​ಲು

ಸಾರಾಂಶ

ಹೈದರಾಬಾದ್‌ನಲ್ಲಿಂದು ಆರೆಂಜ್‌ ಆರ್ಮಿಗೆ ಲಖನೌ ಚಾಲೆಂಜ್‌ ಲಖನೌ ಸೋತರೆ ಪ್ಲೇ-ಆಫ್‌ ಸಾಧ್ಯತೆ ಕ್ಷೀಣ ಹೈದರಾಬಾದ್‌ ಸೋತರೇ ಪ್ಲೇ ಆಫ್‌ನಿಂದ ಔಟ್

ಹೈದ​ರಾ​ಬಾ​ದ್‌(ಮೇ.13): 16ನೇ ಆವೃತ್ತಿ ಐಪಿ​ಎ​ಲ್‌ ನಿರ್ಣಾ​ಯಕ ಘಟ್ಟತಲು​ಪಿದ್ದು, ಇನ್ನೇ​ನಿ​ದ್ದರೂ ತಂಡ​ಗಳ ಅಳಿ​ವು-ಉಳಿ​ವಿನ ಲೆಕ್ಕಾ​ಚಾರ ಮಾತ್ರ ಬಾಕಿ ಇದೆ. ಶನಿ​ವಾರದ ಮಹತ್ವದ ಪಂದ್ಯ​ದಲ್ಲಿ ಲಖನೌ ತಂಡ ಸನ್‌​ರೈ​ಸ​ರ್‍ಸ್ ಹೈದ್ರಾ​ಬಾದ್‌ ವಿರುದ್ಧ ಸೆಣ​ಸಾ​ಡ​ಲಿದ್ದು, ಸೋತರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಕ್ಷೀಣಿಸ​ಲಿದೆ. ಹೈದ್ರಾ​ಬಾ​ದ್‌ಗೂ ಗೆಲುವು ಅನಿ​ವಾ​ರ‍್ಯ​ವಾ​ಗಿದ್ದು, ಸೋತರೆ ಟೂರ್ನಿ​ಯಿಂದ ಅಧಿಕೃತವಾಗಿ ಹೊರಬೀಳಲಿದೆ.

11 ಪಂದ್ಯ​ಗ​ಳ​ನ್ನಾ​ಡಿರುವ ಲಖನೌ 5ರಲ್ಲಿ 5ರಲ್ಲಿ ಸೋತಿ​ದೆ. ಚೆನ್ನೈ ವಿರು​ದ್ಧದ ಪಂದ್ಯ​ದಲ್ಲಿ ಅಂಕ ಹಂಚಿ​ಕೆ​ಯಾ​ಗಿ​ರುವ ಕಾರಣ 11 ಅಂಕ​ಗ​ಳನ್ನು ಹೊಂದಿದೆ. ಹೀಗಾಗಿ ಇನ್ನು​ಳಿದ ಮೂರು ಪಂದ್ಯ ಗೆದ್ದರೆ ಪ್ಲೇ-ಆಫ್‌ ಸ್ಥಾನ ಖಚಿ​ತ​ವಾ​ಗ​ಲಿದೆ. ಸೋತರೆ ರೇಸ್‌​ನಲ್ಲಿ ಉಳಿ​ಯ​ಬ​ಹು​ದಾ​ದರೂ ಅಗ್ರ-4ರಲ್ಲಿ ಸ್ಥಾನ ಪಡೆ​ಯ​ಬೇ​ಕಾ​ದರೆ ಪವಾಡ ಘಟಿ​ಸ​ಬೇಕು.

ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಕೃನಾಲ್ ಪಾಂಡ್ಯ ತಂಡವನ್ನು ಮುನ್ನಡೆಸುತ್ತಿದ್ದು, ಕೈಲ್ ಮೇಯರ್‍ಸ್‌, ಕ್ವಿಂಟನ್ ಡಿ ಕಾಕ್‌, ಸ್ಟೋನಿಸ್ ಹಾಗೂ ಪೂರನ್ ಜವಾಬ್ದಾರಿಯುತ ಆಟವಾಡಬೇಕಿದೆ. ಆವೇಶ್ ಖಾನ್, ಮೊಹ್ಸಿನ್ ಖಾನ್‌, ರವಿ ಬಿಷ್ಣೋಯಿ ಮಾರಕ ದಾಳಿ ನಡೆಸಬೇಕಿದೆ.

IPL 2023 ರಶೀದ್ ಖಾನ್ 10 ಸಿಕ್ಸರ್‌ಗೆ ಬೆಚ್ಚಿದ ಮುಂಬೈ, ಆದರೂ ಗುಜರಾತ್‌ಗೆ ಸಿಗಲಿಲ್ಲ ಗೆಲುವು!

ಐಪಿ​ಎ​ಲ್‌ ಇತಿಹಾಸದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಸನ್‌ರೈಸರ್‍ಸ್‌ ಹೈದರಾಬಾದ್ ತಂಡಗಳು ಒಟ್ಟು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವು ಗೆಲುವಿನ ನಗೆ ಬೀರಿದ್ದು, ಇದೀಗ ಆರೆಂಜ್‌ ಆರ್ಮಿ ಎದುರು ಹ್ಯಾಟ್ರಿಕ್ ಗೆಲುವು ಸಾಧಿಸಲು ಲಖನೌ ಸೂಪರ್ ಜೈಂಟ್ಸ್ ಎದುರು ನೋಡುತ್ತಿದೆ

ಮುಖಾಮುಖಿ: 02

ಹೈದ್ರಾ​ಬಾ​ದ್‌: 00

ಲಖನೌ: 02

ಸಂಭವನೀಯ ಆಟಗಾರರ ಪಟ್ಟಿ

ಹೈದ್ರಾ​ಬಾ​ದ್‌: ಅಭಿಷೇಕ್‌ ಶರ್‍ಮಾ, ರಾಹುಲ್ ತ್ರಿಪಾಠಿ, ಏಯ್ಡನ್‌ ಮಾರ್ಕ್​ರ​ಮ್‌​(​ನಾ​ಯ​ಕ​), ಅನ್ಮೋ​ಲ್‌​ಪ್ರೀತ್‌, ಹೆನ್ರಿಚ್ ಕ್ಲಾಸೆನ್‌, ಗ್ಲೆನ್ ಫಿಲಿಫ್ಸ್‌, ಅಬ್ದುಲ್ ಸಮದ್‌,  ಯಾನ್ಸೆನ್‌, ವಿವ್ರಾಂತ್‌, ಭುವನೇಶ್ವರ್ ಕುಮಾರ್, ಟಿ ನಟರಾಜನ್‌, ಮಯಾಂಕ್ ಮಾರ್ಕಂಡೆ.

ಲಖನೌ: ಕ್ವಿಂಟನ್ ಡಿ ಕಾಕ್‌, ಕೈಲ್ ಮೇಯ​ರ್‍ಸ್, ದೀಪಕ್ ಹೂಡಾ, ಕೃನಾಲ್‌ ಪಾಂಡ್ಯ(ನಾ​ಯ​ಕ​), ಮಾರ್‍ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ಆಯುಷ್ ಬದೋನಿ, ಸ್ವಪ್ನಿಲ್‌ ಸಿಂಗ್, ಯಶ್‌, ಆವೇಶ್‌ ಖಾನ್, ರವಿ ಬಿಷ್ಣೋಯ್‌, ಮೊಹ್ಸಿನ್‌ ಖಾನ್‌.

ಪಂದ್ಯ: ಮಧ್ಯಾಹ್ನ 3.30ಕ್ಕೆ,

ಪ್ರಸಾರ: ಸ್ಟಾರ್‌ ಸ್ಪೋರ್‍ಟ್ಸ್, ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಈ ಬಾರಿ ಬೌಲ​ರ್‌​ಗಳೇ ಪ್ರಾಬಲ್ಯ ಸಾಧಿ​ಸಿ​ದ್ದಾರೆ. 5 ಪಂದ್ಯ​ಗ​ಳಲ್ಲಿ ಒಮ್ಮೆ ಮಾತ್ರ 200+ ರನ್‌ ದಾಖಲಾ​ಗಿದೆ. ಇಲ್ಲಿ ಚೇಸಿಂಗ್‌ ಕಷ್ಟ​. ಟಾಸ್‌ ಗೆದ್ದ ತಂಡ ಬ್ಯಾಟಿಂಗ್‌ ಆಯ್ಕೆ ಮಾಡ​ಬ​ಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?