
ಲಖನೌ(ಮೇ.01): ರನ್ ಬರುತ್ತಿಲ್ಲ, ಬೌಂಡರಿ ಸಿಕ್ಸರ್ ಸಿಡಿಯುತ್ತಿಲ್ಲ. ಮತ್ತೊಂದೆಡೆ ವಿಕೆಟ್ ಬೀಳುತ್ತಲೇ ಇದೆ. ಇದು ಲಖನೌ ಸೂಪರ್ ಜೈಂಟ್ಸ್ ವಿರುದ್ದ ಆರ್‌ಸಿಬಿ ತಂಡದ ಪರಿಸ್ಥಿತಿ. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರೂ ರನ್ ರೇಟ್ ಇರಲಿಲ್ಲ. ಇನ್ನುಳಿದವರಿಂದ ಕನಿಷ್ಠ ಹೋರಾಟವೂ ಬರಲಿಲ್ಲ. ದಿನೇಶ್ ಕಾರ್ತಿಕ್ ಎಂದಿನಂತೆ ರನೌಟ್‍ಗೆ ಬಲಿಯಾದರು.ಸ್ಲೋ ವಿಕೆಟ್‌ನಲ್ಲಿ ಹರಸಾಹಸ ಪಟ್ಟ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 126 ರನ್ ಸಿಡಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ಬೃಹತ್ ಮೊತ್ತ ಸಿಡಿಸುವ ಜೋಶ್‌ನೊಂದಿಗೆ ಕಣಕ್ಕಿಳಿಯಿತು. ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ನೀಡಿದರು. ಆದರೆ ರನ್‌ರೇಟ್ ಟಿ20 ಆಟಕ್ಕೆ ತಕ್ಕಂತೆ ಇರಲಿಲ್ಲ. ಕೊಹ್ಲಿ 30 ಎಸೆತದಲ್ಲಿ 31 ರನ್ ಸಿಡಿಸಿ ಔಟಾದರು. ಇತ್ತ ಫಾಫ್ ಡುಪ್ಲೆಸಿಸ್ ಹೋರಾಟ ಮುದುವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ.
RCB ತಂಡದಿಂದ ಡೇವಿಡ್ ವಿಲ್ಲಿ ಔಟ್; ಅನುಭವಿ ಕೇದರ್ ಜಾಧವ್ ಇನ್..!
ತಂಡ ಸೇರಿಕೊಂಡ ಅನೂಜ್ ರಾವತ್ ನಿರಾಸೆ ಮೂಡಿಸಿದರು. ಕೇವಲ 9 ರನ್ ಸಿಡಿಸಿ ನಿರ್ಗಮಿಸಿದರು. ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್‌ನಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್್ ಅಬ್ಬರಿಸಲಿಲ್ಲ. ಮ್ಯಾಕ್ಸ್‌ವೆಲ್ 4 ರನ್ ಸಿಡಿಸಿ ನಿರ್ಗಮಿಸಿದರು.ಸತತ ವೈಫಲ್ಯ ಅನುಭವಿಸುತ್ತಿದ್ದರೂ, ಮತ್ತೆ ಮತ್ತೆ ಅವಕಾಶ ಪಡೆಯುತ್ತಿರುವ ಸೂಯಾಶ್ ಪ್ರಭುದೇಸಾಯಿ 6 ರನ್ ಸಿಡಿಸಿ ನಿರ್ಗಮಿಸಿದರು.
ಡುಪ್ಲೆಸಿಸ್ ಬೌಂಡರಿ ಸಿಕ್ಸರ್‌ಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಿರೀಕ್ಷೆಯಂತೆ ರನ್ ಹರಿದುಬರಲಿಲ್ಲ. ಡುಪ್ಲೆಸಿಸ್ 40 ಎಸೆತದಲ್ಲಿ 44 ರನ್ ಸಿಡಿಸಿ ಔಟಾದರು. ಇತ್ತ ದಿನೇಶ್ ಕಾರ್ತಿಕ್ ಹೋರಾಟ ಆರಂಭಿಸಿದರೂ ಒಂದು ಬೌಂಡರಿ 1 ಸಿಕ್ಸರ್ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ರಿಲೀಫ್ ನೀಡಿದರು. ಇತ್ತ ಮಹಿಪಾಲ್ ಲೊಮ್ರೊರ್ ವಿಕೆಟ್ ಪತನಗೊಂಡಿತು. ಇನ್ನು ದಿನೇಶ್ ಕಾರ್ತಿಕ್ ಎಂದಿನಂತೆ 16 ರನ್ ಸಿಡಿಸಿ ರನೌಟ್‍ಗೆ ಬಲಿಯಾದರು.
ಕರಣ್ ಶರ್ಮಾ 2, ಮೊಹಮ್ಮದ್ ಸಿರಾಜ್ ಶೂನ್ಯ ಸುತ್ತಿದರು. ವಾನಿಂಡು ಹಸರಂಗ ಅಜೇಯ 8 ರನ್ ಸಿಡಿಸಿದರು. ಈ ಮೂಲಕ ಆರ್‌ಸಿಬಿ 9 ವಿಕೆಟ್ ನಷ್ಟಕ್ಕೆ 126 ರನ್ ಸಿಡಿಸಿತು. ಇಂದಿನ ಪಂದ್ಯಕ್ಕೆ ಸ್ಲೋ ಪಿಚ್ ರೆಡಿಮಾಡಲಾಗಿದೆ. ಲಖನೌ ತಂಡಕ್ಕೆ ಸುಲಭ ಟಾರ್ಗೆಟ್ ಸಿಕ್ಕಿದೆ. ಆದರೆ ಚೇಸಿಂಗ್ ಅಂದುಕೊಂಡಷ್ಟು ಸುಲಭವಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.