
ಮೊಹಾಲಿ(ಮೇ.03): ಲಿಯಾಮ್ ಲಿವಿಂಗ್‌ಸ್ಟೋನ್ ಅಜೇಯ 82 ಹಾಗೂ ಜಿತೇಶ್ ಶರ್ಮಾ ಅಜೇಯ 49 ರನ್ ನೆರವಿನಿಂದ ಪಂಜಾಬ್ ಕಿಂಗ್ಸ್ 3 ವಿಕೆಟ್ ನಷ್ಟಕ್ಕೆ 214 ರನ್ ಸಿಡಿಸಿದೆ. ಲಿವಿಂಗ್‌ಸ್ಟೋನ್ 42 ಎಸೆತದಲ್ಲಿ 82 ರನ್ ಚಚ್ಚಿದರೆ, ಜಿತೇಶ್ 27 ಎಸೆತದಲ್ಲಿ 49 ರನ್ ಸಿಡಿಸಿದರು. ಮೊಹಾಲಿ ಕ್ರೀಡಾಂಗಣದಲ್ಲಿ ಪಂಜಾಬ್ ಬೃಹತ್ ಮೊತ್ತ ಸಿಡಿಸಿದೆ. ಇದೀಗ ಮುಂಬೈ ಇಂಡಿಯನ್ಸ್ ಈ ಟಾರ್ಗೆಟ್ ಚೇಸ್ ಮಾಡುತ್ತಾ? ಅನ್ನೋ ಕುತೂಹಲ ಹೆಚ್ಚಾಗಿದೆ. ಇಂದಿನ ಪಂದ್ಯಕ್ಕೆ ಬ್ಯಾಟಿಂಗ್ ಪಿಚ್ ಸಿದ್ಧಪಡಿಸಲಾಗಿದೆ. ಹೀಗಾಗಿ ಚೇಸಿಂಗ್ ಪೈಪೋಟಿಯಿಂದ ಕೂಡಿರಲಿದೆ. ಆದರೆ ಸ್ಪಿನ್ನರ್ಸ್ ಲಾಭ ಪಡೆದುಕೊಂಡರೆ ಮುಂಬೈಗೆ ಸವಾಲಾಗಲಿದೆ.
ಪಂಜಾಬ್ ಆರಂಭ ಉತ್ತಮವಾಗಿರಲಿಲ್ಲ. ಪ್ರಬ್‌ಸಿಮ್ರನ್ ಸಿಂಗ್ ಕೇವಲ 9 ರನ್ ಸಿಡಿಸಿ ಔಟಾದರು. ಶಿಖರ್ ಧವನ್ ಹಾಗೂ ಮ್ಯಾಥ್ಯೂ ಶಾರ್ಟ್ ಜೊತೆಯಾಟದಿಂದ ಪಂಜಾಬ್ ತಿರುಗೇಟು ನೀಡಿತು. ಧವನ್ 30 ರನ್ ಸಿಡಿಸಿ ನಿರ್ಗಮಿಸಿದರು. ಮ್ಯಾಥ್ಯೂ ಶಾರ್ಟ್ 27 ರನ್ ಸಿಡಿಸಿ ಔಟಾದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಪಂಜಾಬ್ ಅಬ್ಬರ ಹೆಚ್ಚಾಯಿತು. ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಶರ್ಮಾ ಹೋರಾಟಾ ಮುಂಬೈ ನಿದ್ದಿಗೆಡಿಸಿತು.
IPL 2023 ಲಖನೌ-ಚೆನ್ನೈ ಪಂದ್ಯ ಮಳೆಯಿಂದ ರದ್ದು, ಅಂಕಪಟ್ಟಿಯಲ್ಲಿ ಮಹತ್ತರ ಬದಲಾವಣೆ!
ಲಿಯಾಮ್ ಹೊಡೆತಕ್ಕೆ ಪಂಜಾಬ್ ಬೃಹತ್ ಮೊತ್ತದತ್ತ ಸಾಗಿತು. ಇತ್ತ ಜಿತೇಶ್ ಶರ್ಮಾ ಉತ್ತಮ ಸಾಥ್ ನೀಡಿದರು. ಲಿಯಾಮ್ 7 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರೆ, ಇತ್ತ ಜಿತೇಶ್ ಶರ್ಮಾ 5 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಲಿಯಾಮ್ ಅಜೇಯ 82 ರನ್ ಸಿಡಿಸಿದರೆ, ಜಿತೇಶ್ ಅಜೇ 49 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 3 ವಿಕೆಟ್ ನಷ್ಟಕ್ಕೆ 214 ರನ್ ಸಿಡಿಸಿತು.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಾಧೇರಾ, ಜೋಫ್ರಾ ಆರ್ಚರ್, ಪಿಯುಷ್ ಚಾವ್ಲಾ, ಕುಮಾರ್ ಕಾರ್ತಿಕೇಯಾ, ಅಕಾಶ್ ಮದ್ವಾಲ್, ಅರ್ಶದ್ ಖಾನ್
ಅಭಿಮಾನಿಗಳಿಗೆ ಗುಡ್ ನ್ಯೂಸ್,ನಿವೃತ್ತಿ ನಿರ್ಧರಿಸಿಲ್ಲ; ಕೊನೆಯ ಐಪಿಎಲ್ ಮಾತು ತಳ್ಳಿಹಾಕಿದ ಧೋನಿ!
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಪ್ರಬ್‌ಸಿಮ್ರನ್ ಸಿಂಗ್, ಶಿಖರ್ ಧವನ್(ನಾಯಕ), ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಸ್ಯಾಮ್ ಕುರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹಾರ್, ಅರ್ಶದೀಪ್ ಸಿಂಗ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.