IPL 2023: ಕೋಲ್ಕ​ತಾ ವಿರುದ್ಧ ಜಯಿ​ಸಿ ಪ್ಲೇ-ಆಫ್‌​ಗೇ​ರು​ತ್ತಾ ಚೆನ್ನೈ?

Published : May 14, 2023, 10:36 AM IST
IPL 2023: ಕೋಲ್ಕ​ತಾ ವಿರುದ್ಧ ಜಯಿ​ಸಿ ಪ್ಲೇ-ಆಫ್‌​ಗೇ​ರು​ತ್ತಾ ಚೆನ್ನೈ?

ಸಾರಾಂಶ

ಚೆಪಾಕ್‌ ಮೈದಾನದಲ್ಲಿ ಚೆನ್ನೈ-ಕೋಲ್ಕತಾ ಮುಖಾಮುಖಿ ಬಹುತೇಕ ಪ್ಲೇ ಆಫ್‌ ಹಂತವನ್ನು ಖಚಿತಪಡಿಸಿಕೊಂಡಿರುವ ಸಿಎಸ್‌ಕೆ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಕೆಕೆಆರ್

ಚೆನ್ನೈ(ಮೇ.14): ಈ ಬಾರಿ ಪ್ಲೇ-ಆಫ್‌ ತಲು​ಪುವ ನೆಚ್ಚಿನ ತಂಡ ಎನಿ​ಸಿ​ಕೊಂಡಿ​ದ್ದರೂ ಇನ್ನಷ್ಟೇ ತನ್ನ ಸ್ಥಾನ ಖಚಿ​ತ​ಪ​ಡಿ​ಸಿ​ಕೊ​ಳ್ಳ​ಬೇ​ಕಿ​ರುವ ಚೆನ್ನೈ ಸೂಪರ್ ಕಿಂಗ್ಸ್‌, ಶನಿ​ವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣ​ಸಾ​ಡ​ಲಿದೆ. ಈ ಪಂದ್ಯವು ಎರಡೂ ತಂಡಗಳ ಪಾಲಿಗೆ ಸಾಕಷ್ಟು  ಮಹತ್ವವಹಿಸಿದ್ದು ಹೈವೋಲ್ಟೇಜ್‌ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಸ್ಟೇಡಿಯಂ ಆತಿಥ್ಯ ವಹಿಸಿದೆ. 

12 ಪಂದ್ಯ​ಗ​ಳಲ್ಲಿ 7ರಲ್ಲಿ ಗೆದ್ದು 15 ಅಂಕ ಸಂಪಾ​ದಿ​ಸಿ​ರುವ ಚೆನ್ನೈಗೆ ಅಗ್ರ-2ರಲ್ಲಿ ಉಳಿದು ಕ್ವಾಲಿ​ಫೈ​ಯ​ರ್‌-1ಕ್ಕೆ ಅರ್ಹತೆ ಗಿಟ್ಟಿ​ಸಿ​ಕೊ​ಳ್ಳುವ ಅವ​ಕಾ​ಶ​ವಿದೆ. ಹೀಗಾಗಬೇ​ಕಾ​ದರೆ ಉಳಿ​ದೆ​ರಡು ಪಂದ್ಯ​ಗ​ಳನ್ನು ಗೆಲ್ಲ​ಬೇಕು. ಈ ಪಂದ್ಯ ಗೆದ್ದರೆ ಗುಜರಾತ್ ಟೈಟಾನ್ಸ್ ತಂಡವನ್ನು ಹಿಂದಿಕ್ಕಿ ಅಗ್ರ​ಸ್ಥಾ​ನ​ಕ್ಕೇ​ರ​ಲಿದ್ದು, ಒಂದು ವೇಳೆ ಸೋತರೂ ಕೊನೆ ಪಂದ್ಯ​ದಲ್ಲಿ ಗೆದ್ದರೆ ಪ್ಲೇ-ಆಫ್‌ಗೇರ​ಬ​ಹುದು. 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ, ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ಅಬ್ಬರಿಸುತ್ತಿದ್ದಾರೆ. ಇನ್ನು ಮೋಯಿನ್ ಅಲಿ ಬ್ಯಾಟಿಂಗ್‌ನಲ್ಲಿ ಕೊಂಚ ಲಯಕ್ಕೆ ಬರಬೇಕಿದ್ದು, ನಾಯಕ ಧೋನಿ ಕೊನೆಯಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಇನ್ನು ಬೌಲರ್‍‌ಗಳಾದ ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಮತೀಶ್ ಪತಿರಣ ಮಾರಕ ದಾಳಿ ನಡೆಸುತ್ತಿರುವುದು ಚೆನ್ನೈ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

IPL 2023 ಆರ್‌​ಸಿ​ಬಿಗೆ ಡು ಆರ್‌ ಡೈ ಪಂದ್ಯ: ರಾಜ​ಸ್ಥಾನ ಎದುರಾಳಿ

ಮತ್ತೊಂದೆಡೆ ಕೋಲ್ಕತಾ 12ರಲ್ಲಿ ಕೇವಲ 10 ಅಂಕ ಸಂಪಾ​ದಿ​ಸಿದ್ದು, ಗೆದ್ದರೂ ನಾಕೌ​ಟ್‌ಗೇ​ರ​ಬೇ​ಕಿ​ದ್ದರೆ ಪವಾಡ ನಡೆ​ಯ​ಬೇಕು. ಹೀಗಾಗಿ ತಂಡ​ಕ್ಕಿದು ಪ್ರತಿ​ಷ್ಠೆಯ ಪಂದ್ಯ. ಬಲಿಷ್ಠ ಚೆನ್ನೈ ಎದುರು ಗೆಲುವು ಸಾಧಿಸಬೇಕಿದ್ದರೆ, ಕೋಲ್ಕತಾ ನೈಟ್‌ ರೈಡರ್ಸ್ ಪರ ಜೇಸನ್ ರಾಯ್, ರೆಹಮನುಲ್ಲಾ ಗುರ್ಬಾಜ್‌, ವೆಂಕಟೇಶ್ ಅಯ್ಯರ್, ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಬ್ಯಾಟಿಂಗ್‌ನಲ್ಲಿ ಆಸರೆಯಾಗಬೇಕಿದೆ. ಇನ್ನು ಆಲ್ರೌಂಡರ್ ರಸೆಲ್‌, ಶಾರ್ದೂಲ್ ಠಾಕೂರ್ ಹಾಗೂ ನರೈನ್‌ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಆಸರೆಯಾಗಬೇಕಿದೆ. ಇನ್ನು ಬೌಲರ್‍‌ಗಳಾದ ವರುಣ್ ಚಕ್ರವರ್ತಿ, ಸುಯಾಶ್‌ ಶರ್ಮಾ, ಉಮೇಶ್ ಯಾದವ್ ಮಾರಕ ದಾಳಿ ನಡೆಸಬೇಕಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ:

ಚೆನ್ನೈ ಸೂಪರ್ ಕಿಂಗ್ಸ್:
ಋತುರಾಜ್ ಗಾಯಕ್ವಾಡ್‌, ಡೆವೊನ್ ಕಾನ್‌ವೇ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೋಯಿನ್ ಅಲಿ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ&ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ, ಮತೀಶ್ ಪತಿರಣ.

ಕೋಲ್ಕತಾ ನೈಟ್ ರೈಡರ್ಸ್‌:
ಜೇಸನ್ ರಾಯ್‌, ರೆಹಮನುಲ್ಲಾ ಗುರ್ಬಾಜ್‌(ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ(ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್‌ ನರೈನ್‌, ಉಮೇಶ್ ಯಾದವ್, ಸುಯಾಶ್ ಶರ್ಮಾ, ವರುಣ್‌ ಚಕ್ರವರ್ತಿ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!