ಗುಜರಾತ್‌ vs ಲಖನೌ: ಸೋದರರ ಸವಾಲ್‌ಗೆ ಮೋದಿ ಸ್ಟೇಡಿಯಂ ರೆಡಿ!

Published : May 07, 2023, 10:09 AM IST
 ಗುಜರಾತ್‌ vs ಲಖನೌ: ಸೋದರರ ಸವಾಲ್‌ಗೆ ಮೋದಿ ಸ್ಟೇಡಿಯಂ ರೆಡಿ!

ಸಾರಾಂಶ

ಅಹಮದಾಬಾದ್‌ನಲ್ಲಿಂದು ಗುಜರಾತ್‌ vs ಲಖನೌ ಫೈಟ್ ಟೈಟಾನ್ಸ್‌ ಗೆದ್ರೆ ಪ್ಲೇಆಫ್‌ ಸ್ಥಾನ ಬಹುತೇಕ ಖಚಿತ ಕೆ ಎಲ್ ರಾಹುಲ್‌ ಅನುಪಸ್ಥಿತಿಯಲ್ಲಿ ಕೃನಾಲ್‌ ಪಾಂಡ್ಯ ಲಖನೌ ನಾಯಕ

ಅಹ​ಮ​ದಾ​ಬಾ​ದ್‌(ಮೇ.07): 16ನೇ ಆವೃತ್ತಿ ಐಪಿ​ಎ​ಲ್‌ನ ಈ ವಾರಾಂತ್ಯ ಸೋದ​ರರ ಸವಾ​ಲ್‌ಗೆ ಸಾಕ್ಷಿ​ಯಾ​ಗ​ಲಿ​ದೆ. ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ನಾಯ​ಕ​ತ್ವದ ಗುಜ​ರಾ​ತ್‌ ತಂಡಕ್ಕೆ ಕೃನಾಲ್‌ ಪಾಂಡ್ಯ ಮುನ್ನಡೆಸಲಿರುವ ಲಖನೌ ತಂಡದ ಸವಾಲು ಎದುರಾಗಲಿದೆ. ಕೆ ಎಲ್ ರಾಹುಲ್‌ ಅನುಪಸ್ಥಿತಿಯಲ್ಲಿ ಕೃನಾಲ್‌ ಪಾಂಡ್ಯ ಲಖನೌ ಸೂಪರ್ ಜೈಂಟ್ಸ್‌ ನಾಯಕರಾಗಿ ನೇಮಕಗೊಂಡಿದ್ದಾರೆ.

14 ಅಂಕ​ದೊಂದಿಗೆ ಅಗ್ರ​ಸ್ಥಾ​ನ​ದ​ಲ್ಲಿ​ರುವ ಗುಜ​ರಾತ್‌ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಬಹು​ತೇಕ ಖಚಿ​ತವಾಗಲಿದೆ. ಮತ್ತೊಂದೆಡೆ ಗೆಲು​ವಿನ ಲಯಕ್ಕೆ ಮರಳಿ ಅಗ್ರ-4ರಲ್ಲೇ ಉಳಿ​ದು​ಕೊ​ಳ್ಳಲು ಲಖನೌ ಸೂಪರ್‌ ಕಾಯು​ತ್ತಿದೆ. ಟೈಟಾನ್ಸ್‌ ಬಲಿಷ್ಠ ಬ್ಯಾಟಿಂಗ್‌, ಬೌಲಿಂಗ್‌ ಪಡೆ ಹೊಂದಿದ್ದರೆ, ಅಸ್ಥಿರ ಬ್ಯಾಟಿಂಗ್‌ ಪಡೆಯ ಸಮ​ಸ್ಯೆ ಲಖನೌ ತಂಡ​ವನ್ನು ಕಾಡು​ತ್ತಿ​ದೆ.

ಎಂದಿನಂತೆ ಗುಜರಾತ್ ಟೈಟಾನ್ಸ್ ತಂಡವು ಬ್ಯಾಟಿಂಗ್‌ನಲ್ಲಿ ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಅಭಿನವ್ ಮನೋಹರ್ ಹಾಗೂ ಡೇವಿಡ್ ಮಿಲ್ಲರ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ರಾಹುಲ್ ತೆವಾಟಿಯಾ ಹಾಗೂ ವಿಜಯ್ ಶಂಕರ್ ಆಲ್ರೌಂಡರ್ ರೂಪದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ನೂರ್ ಅಹಮ್ಮದ್ ಹಾಗೂ ಮೋಹಿತ್ ಶರ್ಮಾ, ಬಲಿಷ್ಠ ಲಖನೌ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

IPL 2023: ಆರ್‌ಸಿಬಿಗೆ ನೀರು ಕುಡಿಸಿದ ಸಾಲ್ಟ್‌, ಬೌಲರ್‌ಗಳದ್ದೇ ಫಾಲ್ಟ್‌!

ಇನ್ನು ಲಖನೌ ಸೂಪರ್ ಜೈಂಟ್ಸ್ ತಂಡವು ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಕೈಲ್ ಮೇಯರ್ಸ್ ಜತೆಗೆ ಮನನ್ ವೋಹ್ರಾ ಮತ್ತೊಮ್ಮೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನುಳಿದಂತೆ ದೀಪಕ್ ಹೂಡಾ, ಆಯುಷ್ ಬದೋನಿ, ನಿಕೋಲಸ್ ಪೂರನ್ ಹಾಗೂ ಮಾರ್ಕಸ್ ಸ್ಟೋನಿಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಬೌಲಿಂಗ್‌ನಲ್ಲಿ ನವೀನ್ ಉಲ್ ಹಕ್, ಆವೇಶ್ ಖಾನ್, ಮೊಹ್ಸಿನ್ ಖಾನ್ ಹಾಗೂ ಕೃಷ್ಣಪ್ಪ ಗೌತಮ್ ತಂಡಕ್ಕೆ ಮತ್ತೊಂದು ಗೆಲುವು ತಂದುಕೊಡಲು ಎದುರು ನೋಡುತ್ತಿದ್ದಾರೆ. 

ಐಪಿಎಲ್ ಇತಿಹಾಸದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಒಟ್ಟು 3 ಬಾರಿ ಮುಖಾಮುಖಿಯಾಗಿದ್ದು, ಮೂರು ಪಂದ್ಯಗಳಲ್ಲೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಗೆಲುವಿನ ನಗೆ ಬೀರಿದೆ. ಇನ್ನು ಇಂದಿನ ಪಂದ್ಯದಲ್ಲಾದರೂ ಗುಜರಾತ್ ಎದುರು ಲಖನೌ ತಂಡವು ಗೆಲುವಿನ ಖಾತೆ ತೆರೆಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಗುಜ​ರಾ​ತ್‌ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್ ಗಿಲ್‌, ಹಾರ್ದಿಕ್‌ ಪಾಂಡ್ಯ(ನಾಯಕ), ವಿಜಯ್ ಶಂಕರ್‌, ಡೇವಿಡ್ ಮಿಲ್ಲರ್‌, ಅಭಿ​ನವ್‌ ಮನೋಹರ್, ರಾಹುಲ್‌ ತೆವಾಟಿಯಾ, ರಶೀದ್‌ ಖಾನ್, ನೂರ್‌ ಅಹಮ್ಮದ್, ಮೊಹ್ಮಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಮೋಹಿತ್‌ ಶರ್ಮಾ.

ಲಖನೌ ಸೂಪರ್ ಜೈಂಟ್ಸ್‌: ಕೈಲ್ ಮೇಯರ್ಸ್‌, ಮನನ್‌ ವೋಹ್ರಾ, ದೀಪಕ್ ​ಹೂ​ಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್‌, ನಿಕೋಲಸ್ ಪೂರ​ನ್‌, ಕೃನಾ​ಲ್‌ ಪಾಂಡ್ಯ​(​ನಾ​ಯ​ಕ), ಕೃಷ್ಣಪ್ಪ ಗೌತಮ್‌, ನವೀನ್‌ ಉಲ್ ಹಕ್, ರವಿ ಬಿಷ್ಣೋಯ್‌, ಮೊಹ್ಸಿನ್‌ ಖಾನ್, ಆವೇ​ಶ್‌ ಖಾನ್.

ಪಂದ್ಯ: ಮಧ್ಯಾಹ್ನ 3.30ರಿಂದ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ನರೇಂದ್ರ ಮೋದಿ ಕ್ರೀಡಾಂಗ​ಣ​ದ ಪಿಚ್‌ ಬ್ಯಾಟರ್‌​ಗ​ಳಿಗೆ ಹೆಚ್ಚಿನ ನೆರವು ನೀಡ​ಲಿದ್ದು, ದೊಡ್ಡ ಮೊತ್ತ ದಾಖ​ಲಾ​ಗುವ ಸಾಧ್ಯತೆ ಹೆಚ್ಚು. ಕಳೆ​ದೆ​ರಡು ಪಂದ್ಯ​ಗ​ಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ