IPL 2023; ನ.15ಕ್ಕೆ 10 ಫ್ರಾಂಚೈಸಿಯಿಂದ ರಿಲೀಸ್, ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ!

Published : Nov 14, 2022, 07:30 PM ISTUpdated : Nov 14, 2022, 07:44 PM IST
IPL 2023; ನ.15ಕ್ಕೆ 10 ಫ್ರಾಂಚೈಸಿಯಿಂದ ರಿಲೀಸ್, ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ!

ಸಾರಾಂಶ

ಐಪಿಎಲ್ ಟೂರ್ನಿ ತಯಾರಿಗಳನ್ನು ಈಗಾಗಲೇ ಫ್ರಾಂಚೈಸಿ ಆರಂಭಿಸಿದೆ. ಇದೀಗ ಈಗಾಗಲೇ ಟ್ರೇಡಿಂಗ್ ಮೂಲಕ ಕೆಲ ಆಟಾಗರರು ಹೊಸ ತಂಡ ಸೇರಿಕೊಂಡಿದ್ದಾರೆ. ಇದೀಗ ಐಪಿಎಲ್ 2023ರ ಟೂರ್ನಿಗೆ ತಂಡದಲ್ಲಿ ಉಳಿಸಿಕೊಂಡ ಹಾಗೂ ತಂಡದಿಂದ ಕೈಬಿಟ್ಟ ಆಟಾಗರರ ಪಟ್ಟಿ ಬಿಡುಗಡೆ ಮಾಡಲು ಕೊನೆಯ ದಿನಾಂಕ ಘೋಷಿಸಿದೆ.

ಮುಂಬೈ(ನ.14): ಐಪಿಎಲ್ 2023ರ ಟೂರ್ನಿಗೆ ಬಿಸಿಸಿಐ ಹಾಗೂ 10 ಫ್ರಾಂಚೈಸಿಗಳು ತಯಾರಿ ಭರ್ಜರಿಯಾಗಿದೆ. ಈಗಾಗಲೇ ಟ್ರೇಡಿಂಗ್ ಮೂಲಕ ಆಟಗಾರರ ವಿನಿಮಯ ನಡೆದಿದೆ. ಡೆಲ್ಲಿಯಿಂದ ಶಾರ್ದೂಲ್ ಠಾಕೂರ್ ಕೆಕೆಆರ್ ತಂಡ ಸೇರಿಕೊಂಡರೆ, ಆರ್‌ಸಿಬಿ ತಂಡದ ಜೇಸನ್ ಬೆಹ್ರೆನಡ್ರಾಫ್ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಟ್ರೇಡಿಂಗ್ ಮೂಲಕ ಆಟಾಗಾರರು ಹೊಸ ತಂಡ ಸೇರಿಕೊಂಡಿದ್ದಾರೆ. ಇದೀಗ  ಐಪಿಎಲ್ ಹರಾಜಿಗೆ ಸಿದ್ಧತೆ ನಡೆಸುತ್ತಿದೆ. ಇದರ ನಡುವೆ ನಾಳೆ(ನ.15) ಎಲ್ಲಾ 10 ತಂಡಗಳು ಐಪಿಎಲ್ 2023ರ ಟೂರ್ನಿಗೆ ತಂಡದಲ್ಲಿ ಉಳಿಸಿಕೊಂಡ ಹಾಗೂ ತಂಡದಿಂದ ಕೈಬಿಟ್ಟ ಆಟಗಾರರ ಪಟ್ಟಿ ಬಿಡುಗಡೆ ಮಾಡಲಿದೆ. ಇಷ್ಟೇ ಅಲ್ಲ ನಾಳೆ ಟ್ರೇಡಿಂಗ್ ಮೂಲಕ ಆಟಗಾರರ ವಿನಿಮಯಕ್ಕೂ ಅಂತಿಮ ದಿನವಾಗಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡ ಈಗಾಗಲೇ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಗುರ್ಬಾಜ್, ಲ್ಯೂಕಿ ಫರ್ಗ್ಯೂಸನ್ ಟ್ರೇಡಿಂಗ್ ಮೂಲಕ ಖರೀದಿ ಮಾಡಿದೆ. ಮಯಾಂಕ್ ಅಗರ್ವಾಲ್, ಕೇನ್ ವಿಲಿಯಮ್ಸನ್ ಸೇರಿದಂತೆ ಹಲವು ಆಟಗಾರರನ್ನು ಫ್ರಾಂಚೈಸಿ ಕೈಬಿಡುವ ಸಾಧ್ಯತೆಗಳು ಗೋಚಿಸುತ್ತಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ರವೀಂದ್ರ ಜಡೇಜಾ ಅವರನ್ನ ಕೈಬಿಡುತ್ತಾ ಅನ್ನೋ ಕುತೂಹಲವೂ ಮನೆ ಮಾಡಿದೆ. ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ಮುಂದಿನ ಆವೃತ್ತಿ ಐಪಿಎಲ್‌ನಲ್ಲೂ ಚೆನ್ನೈ ಸೂಪರ್‌ ಕಿಂಗ್‌್ಸ ಪರ ಆಡುವ ಸಾಧ್ಯತೆ ಇದೆ.  ನಾಯಕ ಧೋನಿಯ ಮನವಿ ಬಳಿಕ ಫ್ರಾಂಚೈಸಿಯು ಜಡೇಜಾರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

IPL Trading: ಡೆಲ್ಲಿ ತೊರೆದು ಕೆಕೆಆರ್ ತೆಕ್ಕೆಗೆ ಜಾರಿದ ಶಾರ್ದೂಲ್ ಠಾಕೂರ್..!

ಮಂಬೈ ಇಂಡಿಯನ್ಸ್‌ನಿಂದ ಪೊಲ್ಲಾರ್ಡ್‌ ಹೊರಕ್ಕೆ?
5 ಬಾರಿ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 2023ರ ಆವೃತ್ತಿಗೆ ತನ್ನ ತಾರಾ ಆಲ್ರೌಂಡರ್‌ ಕೀರನ್‌ ಪೊಲ್ಲಾರ್ಡ್‌ರನ್ನು ಕೈಬಿಟ್ಟಿದೆ ಎಂದು ವರದಿಯಾಗಿದೆ. ಪೊಲ್ಲಾರ್ಡ್‌ ಮುಂದಿನ ತಿಂಗಳು ನಡೆಯಲಿರುವ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 2010ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ಮುಂಬೈ ಪರವೇ ಆಡಿರುವ ಪೊಲ್ಲಾರ್ಡ್‌ 189 ಪಂದ್ಯಗಳಲ್ಲಿ 3412 ರನ್‌ ಗಳಿಸಿದ್ದಾರೆ. ಜೊತೆಗೆ 69 ವಿಕೆಟ್‌ ಕಬಳಿಸಿದ್ದಾರೆ. ಕಳೆದ ವರ್ಷ ಮುಂಬೈ 6 ಕೋಟಿ ರು. ನೀಡಿ ಪೊಲ್ಲಾರ್ಡ್‌ರನ್ನು ಹರಾಜಿಗೂ ಮೊದಲೇ ತಂಡದಲ್ಲಿ ಉಳಿಸಿಕೊಂಡಿತ್ತು.

IPL 2023: KKR ತೆಕ್ಕೆಗೆ ಜಾರಿದ ಗುಜರಾತ್ ಟೈಟಾನ್ಸ್ ಮಾರಕ ವೇಗಿ..!

ಡಿ.23ಕ್ಕೆ ಕೊಚ್ಚಿಯಲ್ಲಿ ಐಪಿಎಲ್‌ ಮಿನಿ ಹರಾಜು
2023ರ ಐಪಿಎಲ್‌ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿ.23ರಂದು ಕೊಚ್ಚಿಯಲ್ಲಿ ನಡೆಯಲಿದೆ ಎಂದು ಬುಧವಾರ ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದೆ. ಹರಾಜು ಪ್ರಕ್ರಿಯೆಯು ಬೆಂಗಳೂರು ಇಲ್ಲವೇ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆಯಬಹುದು ಎನ್ನಲಾಗಿತ್ತು. ಆದರೆ ಬಿಸಿಸಿಐ ಕೊಚ್ಚಿಯಲ್ಲಿ ನಡೆಸಲು ನಿರ್ಧರಿಸಿದೆ. ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ನ.15ರೊಳಗೆ ಪ್ರಕಟಿಸಬೇಕಿದೆ. ಕಳೆದ ಹರಾಜಿನ ಬಳಿಕ ಉಳಿದ ಹಣ, ಆಟಗಾರರನ್ನು ಕೈಬಿಟ್ಟಬಳಿಕ ಉಳಿಯುವ ಹಣದ ಜೊತೆಗೆ ಹೆಚ್ಚುವರಿ 5 ಕೋಟಿ ರು. ಬಳಸಲು ಅವಕಾಶ ನೀಡಲಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!