ನನ್ನ ಟಿ20 ಆಟ ಕುಸಿದಿಲ್ಲ: ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ..!

Published : May 23, 2023, 01:47 PM IST
ನನ್ನ ಟಿ20 ಆಟ ಕುಸಿದಿಲ್ಲ: ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ..!

ಸಾರಾಂಶ

ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ತಮ್ಮ ಪ್ರದರ್ಶನದ ಮೂಲಕ ಮಿಂಚಿದ ಆರ್‌ಸಿಬಿ ರನ್ ಮಷೀನ್ ನನ್ನ ಟಿ20 ಆಟ ಕುಸಿಯುತ್ತಿದೆ ಎಂದು ನನ​ಗ​ನ್ನಿ​ಸು​ತ್ತಿಲ್ಲ ಎಂದ ಕೊಹ್ಲಿ

ಬೆಂಗ​ಳೂ​ರು(ಮೇ.23): ಜನ ನನ್ನ ಟಿ20 ಆಟ ಕುಸಿಯುತ್ತಿದೆ ಎಂದುಕೊಳ್ಳುತ್ತಿದ್ದಾರೆ. ಆದರೆ ನಾನು ಮತ್ತೆ ನನ್ನ ಶ್ರೇಷ್ಠ ಆಟವಾಡುತ್ತಿದ್ದೇನೆ ಎಂದು ಟೀಕಾಕಾರಿಗೆ ವಿರಾಟ್‌ ಕೊಹ್ಲಿ ತೀಕ್ಷ್ಣ ಉತ್ತರ ನೀಡಿದ್ದಾರೆ. ಭಾನು​ವಾರ ಗುಜ​ರಾತ್‌ ವಿರುದ್ಧದ ಪಂದ್ಯ​ದಲ್ಲಿ ಐಪಿ​ಎ​ಲ್‌ನ ತಮ್ಮ 7ನೇ ಶತಕ ಸಿಡಿ​ಸಿದ ಅವರು ಬಳಿಕ ಸಂದ​ರ್ಶ​ನ​ವೊಂದ​ರಲ್ಲಿ ಮಾತ​ನಾ​ಡಿ​ದರು. 

‘ನನ್ನ ಟಿ20 ಆಟ ಕುಸಿಯುತ್ತಿದೆ ಎಂದು ನನ​ಗ​ನ್ನಿ​ಸು​ತ್ತಿಲ್ಲ. ನನ್ನ ಆಟ​ವನ್ನು ಆನಂದಿ​ಸು​ತ್ತಿ​ದ್ದೇನೆ. ಇದೇ ರೀತಿ​ಯಲ್ಲೇ ನಾನು ಟಿ20 ಆಟ​ವಾ​ಡು​ತ್ತೇನೆ. ಸಂದ​ರ್ಭವನ್ನು ಅರ್ಥೈಸಿ ಅದಕ್ಕೆ ತಕ್ಕಂತೆ ಆಟವಾ​ಡ​ಬೇಕು. ನನ್ನ ಆಟದ ಬಗ್ಗೆ ಹೆಮ್ಮೆ​ಯಿ​ದೆ’ ಎಂದಿ​ದ್ದಾರೆ. ಕೊಹ್ಲಿ, ರೋಹಿತ್‌ ಸೇರಿ​ದಂತೆ ಹಿರಿ​ಯ​ರನ್ನು ಭಾರತ ಟಿ20 ತಂಡ​ದಿಂದ ಕೈ ಬಿಡ​ಬೇಕು ಎಂದು ಈಗಾ​ಗಲೇ ಹಲ​ವರು ಹೇಳಿಕೆ ನೀಡಿ​ದ್ದ​ರು.

ಪರಿಸ್ಥಿತಿಗನುಗುಣವಾಗಿ ಆಡುತ್ತೇನೆ:

ಸ್ಟ್ರೈಕ್‌ರೇಟ್‌ ಕುರಿತಂತೆ ಹಲವು ಮಾತನಾಡುತ್ತಾರೆ. ನಾನು ಈಗಾಗಲೇ ಆ ಬಗ್ಗೆ ಹೇಳಿದ್ದೇನೆ. ನಾನು ಯಾವಾಗಲೂ ಪರಿಸ್ಥಿತಿಗನುಗುಣವಾಗಿ ಆಡುತ್ತೇನೆ. ತಂಡವು ನನ್ನಿಂದ ಏನು ಬಯಸುತ್ತದೋ ಆ ರೀತಿ ನಾನು ಆಡುತ್ತೇನೆ. ಈ ರೀತಿ ಆಡುವ ಬಗ್ಗೆ ನನಗೆ ಹೆಮ್ಮೆಯಿದೆ. ಈ ರೀತಿ ನಾನು ಹಲವು ವರ್ಷಗಳಿಂದ ಆಡುತ್ತಾ ಬಂದಿದ್ದೇನೆ. ನನಗೆ ನನ್ನ ಪ್ರದರ್ಶನದ ಬಗ್ಗೆ ಖುಷಿಯಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಕೊಹ್ಲಿ 7ನೇ ಶತಕ; ಹೊಸ ದಾಖಲೆ ನಿರ್ಮಾಣ

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 7ನೇ ಶತಕ ಪೂರ್ತಿಗೊಳಿಸಿದ್ದು, ಟೂರ್ನಿಯ ಇತಿಹಾಸದಲ್ಲೇ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಭಾನುವಾರ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 61 ಎಸೆತಗಳನ್ನು ಎದುರಿಸಿ ಅಜೇಯ 101 ರನ್ ಸಿಡಿಸಿದರು. 34 ವರ್ಷದ ವಿರಾಟ್ ಕೊಹ್ಲಿ ಇದುವರೆಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ 237  ಪಂದ್ಯಗಳನ್ನಾಡಿ 37.2ರ ಬ್ಯಾಟಿಂಗ್ ಸರಾಸರಿಯಲ್ಲಿ 7 ಶತಕ ಹಾಗೂ 50 ಅರ್ಧಶತಕ ಸಹಿತ 7263 ರನ್ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಈ ಐಪಿಎಲ್‌ನಲ್ಲಿ 11 ಶತಕ: ಹೊಸ ದಾಖಲೆ!

2023ರ ಐಪಿಎಲ್‌ನಲ್ಲೂ ಕೊಹ್ಲಿ ಶೈನಿಂಗ್: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ವಿರಾಟ್ ಕೊಹ್ಲಿ, ಆರ್‌ಸಿಬಿ ಪರ 14 ಪಂದ್ಯಗಳನ್ನಾಡಿ 53.25ರ ಬ್ಯಾಟಿಂಗ್ ಸರಾಸರಿಯಲ್ಲಿ 6 ಅರ್ಧಶತಕ ಹಾಗೂ 2 ಶತಕ ಸಹಿತ 639 ರನ್ ಬಾರಿಸಿ, ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌