* ಸೆಹ್ವಾಗ್ ವಿರುದ್ಧ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಗುಡುಗಿದ್ದೇಕೆ..?
* ರೋಹಿತ್ರನ್ನ ವಡ ಪಾವ್ ಎಂದು ಕರೆದ್ರಾ ಸೆಹ್ವಾಗ್..?
* ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ಡೆಲ್ಲಿ ಡ್ಯಾಶರ್
ಬೆಂಗಳೂರು, (ಏ.08): ಸೋಲು.. ಸೋಲು.. ಸೋಲು.. ಹ್ಯಾಟ್ರಿಕ್ ಸೋಲು. ಐದು ಬಾರಿ ಚಾಂಪಿಯನ್, ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ತಂಡಕ್ಕೆ ಸತತ ಮೂರು ಸೋಲು. ಗೆಲುವು ಅನ್ನೋದು ಮರೀಚಿಕೆ. ಕ್ಯಾಪ್ಟನ್ ರೋಹಿತ್ ಶರ್ಮಾ ಪ್ರತಿ ಪಂದ್ಯದ ಬಳಿಕ ವಿ ವಿಲ್ ಕಮ್ಬ್ಯಾಕ್ ಸ್ಟ್ರಾಂಗ್ ಅಂದಿದ್ದೇ ಬಂತು. ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ಟೀಮ್ ಅಂತಹ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲೇ ಇಲ್ಲ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಇನ್ನೂ ಖಾತೆ ತೆರೆಯದ ಮಾಜಿ ಚಾಂಪಿಯನ್ ತಂಡ ಸತತ ಸೋಲಿನಿಂದ ಅಕ್ಷರಶಃ ಕಂಗೆಟ್ಟಿದೆ.
ಮುಂಬೈ ಇಂಡಿಯನ್ಸ್ ತಂಡದ ಹ್ಯಾಟ್ರಿಕ್ ಸೋಲು ಅಭಿಮಾನಿಗಳಿಗೆ ದಿಗಿಲು ಬಡಿಸಿದೆ. ಇಂತಹದೊಂದು ವರ್ಸ್ಟ್ ಆರಂಭವನ್ನ ಅವರಿಂದ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಸೋಲಿನ ಹತಾಶೆ, ನಿರಾಸೆ ಹೆಚ್ಚಿದೆ. ಈ ಮಧ್ಯೆ ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾಡಿದ ಒಂದು ಟ್ವೀಟ್, ಮುಂಬೈ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಕ್ರಾಂತ್ ರೋಣ ಮೂವಿ ಟೀಸರ್ಗೆ ವಿರೇಂದ್ರ ಸೆಹ್ವಾಗ್ ಕ್ಲೀನ್ಬೋಲ್ಡ್..!
The Vada Pav reference is for Mumbai, a city which thrives on Vada Pav. Rohit fans thanda lo , I am a bigger fan of his batting much more than most of you guys.
— Virender Sehwag (@virendersehwag)ರೋಹಿತ್ರನ್ನ ವಡ ಪಾವ್ ಎಂದು ಕರೆದ್ರಾ ಸೆಹ್ವಾಗ್..?:
ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಹೀನಾಯವಾಗಿ ಮುಗ್ಗರಿಸಿದ್ದೇ ತಡ ವಡ ಪಾವ್ ಟ್ವೀಟ್ ಕಾವೇರಿದೆ. ಸೆಹ್ವಾಗ್ ಪಂದ್ಯದ ಬಳಿಕ ಕೆಕೆಆರ್ ಗೆಲುವನ್ನು ಪಸ್ತಾಪಿಸಿ ‘ಬಾಯಿಗೆ ಬಂದ ನಿವಾಲಾ ಕಸಿದುಕೊಂಡರು, ಕ್ಷಮಿಸಿ ವಡಾ ಪಾವ್ ಕಸಿದು ಕೊಂಡರು’ ಎಂದು ಟ್ವೀಟ್ ಮಾಡಿದ್ರು. ಅಂದ್ರೆ ನೇರವಾಗಿ ಮುಂಬೈ ಸೋಲನ್ನ ವಡ ಪಾವ್ಗೆ ಹೋಲಿಸಿ ಕಾಳೆಳೆದಿದ್ರು. ಹಾಗೇನೆ ಅಬ್ಬರಿಸಿ ಬೊಬ್ಬಿರಿದ ಪ್ಯಾಟ್ ಕಮಿನ್ಸ್ ಪ್ರದರ್ಶನ ಹಾಡಿ ಹೊಗಳಿದ್ರು.
ಸೆಹ್ವಾಗ್, ಮುಂಬೈ ಸೋಲಿನ ಬಳಿಕ ಹೀಗೆ ಟ್ವೀಟ್ ಮಾಡ್ತಿದ್ದಂತೆ ಹೊಸ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ವೀರೂ ವಡ ಪಾವ್ ಎಂದು ಬೇಕೆಂತಲೇ ಪ್ರಸ್ತಾಪಿಸಿದ್ದಾರೆ ಎಂದು ಮುಂಬೈ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಸಾಮಾನ್ಯವಾಗಿ ರೋಹಿತ್ ಶರ್ಮಾರನ್ನ ವಡ ಪಾವ್ ಎಂಬ ಟ್ಯಾಗ್ ಲೈನ್ ನೀಡಿ ಟ್ರೋಲ್ ಮಾಡಲಾಗುತ್ತದೆ. ಸೆಹ್ವಾಗ್ ಕೂಡ ಹಿಟ್ಮ್ಯಾನ್ರನ್ನ ಗುರಿಯಾಗಿಸಿ ಈ ರೀತಿ ಟ್ವೀಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ಟೀಮ್ ಇಂಡಿಯಾ ಮಾಜಿ ಆಟಗಾರನನ್ನ ಫುಲ್ ಟ್ರೋಲ್ ಮಾಡ್ತಿದ್ದಾರೆ.
ಟ್ರೋಲಿಗರಿಗೆ ತಕ್ಕ ಉತ್ತರ ಕೊಟ್ಟ ಡೆಲ್ಲಿ ಡ್ಯಾಶರ್:
ಇನ್ನು ವಡ ಪಾವ್ ಟ್ವೀಟ್ ವಿಚಾರವಾಗಿ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗ್ತಿದ್ದಂತೆ ಸೆಹ್ವಾಗ್ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ವಡಾ ಪಾವ್ ಎಂದೂ ಮುಂಬೈ ತಂಡವನ್ನ ಉಲ್ಲೇಖಿಸಿದ್ದೇನೆ ಹೊರತು, ರೋಹಿತ್ ಅವರನ್ನಲ್ಲ. ಸ್ವಲ್ಪ ತಣ್ಣಗಾಗಿ, ಯಾವುದರ ಬಗ್ಗೆಯೂ ಚಿಂತಿಸಬೇಡಿ. ನಾನು ಕೂಡ ರೋಹಿತ್ರ ಬ್ಯಾಟಿಂಗ್ಗೆ ದೊಡ್ಡ ಅಭಿಮಾನಿ ಎಂದು ಹೇಳುವ ಮೂಲಕ ಸೆಹ್ವಾಗ್ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದಾರೆ.
ಒನ್ ಫ್ಯಾಮಿಲಿ ಮುಂಬೈಗೆ ಇದು ರಿಯಲ್ ಚಾಲೆಂಜ್ ಸೀಸನ್:
ಹೌದು, ಪ್ರತಿ ಆವೃತ್ತಿಯಲ್ಲಿ ನಮ್ಮದು ಒನ್ ಫ್ಯಾಮಿಲಿ ಅಂತ ಹೇಳಿ ಸೂಪರ್ ಪರ್ಫಾಮೆನ್ಸ್ ನೀಡಿತ್ತು. ಆದ್ರೆ ಈ ಬಾರಿ ತದ್ವಿರುದ್ಧ ಆಟವಾಡ್ತಿದೆ. ಗೆಲುವಿಗಾಗಿ ಹೆಣಗಾಡ್ತಿದೆ. ಮೊದಲಿನಂತೆ ಕೋ ಪ್ಲೇಯರ್ಸ್ ತಂಡದಲ್ಲಿಲ್ಲ. ಬ್ಯಾಟಿಂಗ್, ಬೌಲಿಂಗ್ ವೀಕ್ ಆಗಿದೆ. ಕ್ಯಾಪ್ಟನ್ ರೋಹಿತ್, ಪೊಲ್ಲಾರ್ಡ್ ರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರ್ತಿಲ್ಲ. ಹೀಗಾಗಿ ಪ್ರತಿ ಸಲದಂತೆ ಈ ಬಾರಿ ಮುಂಬೈ ಪ್ಲೇ ಆಫ್ ಹಾದಿ ನಿಜಕ್ಕೂ ಈಸಿಯಿಲ್ಲ. ಕ್ಯಾಪ್ಟನ್ ರೋಹಿತ್ ಮುಂದೆ ದೊಡ್ಡ ಸವಾಲಿದೆ.