
ಬೆಂಗಳೂರು: 15ನೇ ಐಪಿಎಲ್ ಸ್ಟಾರ್ ಆಟಗಾರರಿಲ್ಲದೇ ಕಳೆಗುಂದಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಮಾಸ್ ಮಾಹಾರಾಜ ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಿಸಿದ್ರು. ಇನ್ನು ಮತ್ತೋರ್ವ ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್ ಸೀಸನ್ನಿಂದ ಹಿಂದೆ ಸರಿದ್ರು ಬಿಗ್ ಶಾಕ್ ನೀಡಿದ್ರು. ಪವರ್ ಹಿಟ್ಟರ್ ರೈನಾ ಬಿಕರಿಯಾಗದೇ ಹೊರಬಿದ್ರು. ಈ ಸ್ಟಾರ್ ಲೆಜೆಂಡ್ಗಳ ಆಟವನ್ನ ಫ್ಯಾನ್ಸ್ ಖಂಡಿತ ಸಾಕಷ್ಟು ಮಿಸ್ ಮಾಡಿಕೊಳ್ತಿದ್ದಾರೆ. ಈ ಮೂವರ ಪೈಕಿ ಯುನಿವರ್ಸಲ್ ಬಾಸ್ ಮತ್ತೆ ಕಲರ್ ಫುಲ್ ಲೋಕಕ್ಕೆ ಧುಮುಕಲು ಸಜ್ಜಾಗಿದ್ದಾರೆ.
ಮುಂದಿನ IPL ನಲ್ಲಿ ಕಣಕ್ಕಿಳಿಯಲಿದ್ಧಾರೆ ಗೇಲ್ :
ಯೆಸ್, ತನ್ನ ಸ್ಪೋಟಕ ಆಟದಿಂದಲೇ ಮನೆಮಾತಾಗಿ, ಐಪಿಎಲ್ನ ಸ್ಫೋಟಕ ದಾಂಡಿಗ ಅಂತ ಕರೆಸಿಕೊಳ್ಳೋ ಕ್ರಿಸ್ ಗೇಲ್ ಮತ್ತೆ ಐಪಿಎಲ್ ಗೆ ಎಂಟ್ರಿಕೊಟ್ಟು ಫ್ಯಾನ್ಸ್ ರಂಜಿಸಲು ರೆಡಿಯಾಗಿದ್ದಾರೆ. ಟೂರ್ನಿ ಆರಂಭಕ್ಕೂ ಭಯಾನಕ ಬ್ಯಾಟರ್ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಸರಿದಿದ್ರು. ಗೇಲ್ರ ಈ ನಿರ್ಧಾರ ಕಟ್ಟಾಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಯಾಕಂದ್ರೆ ಗೇಲ್ ಇದ್ದ ಕಡೆ ಸಿಕ್ಸರ್-ಬೌಂಡ್ರಿಗಳ ಮಜಾ ಇರುತ್ತೆ. ಜೋಶ್ ಹೈ ಇರುತ್ತೆ. ಈ ಸಲ ಇದು ಯಾವುದೂ ಇಲ್ಲದಾಗಿದೆ.
ಡೆಲ್ಲಿ ಎದುರಿನ ಪಂದ್ಯದ ವೇಳೆ ಧೋನಿ ಬ್ಯಾಟ್ ಕಚ್ಚಿದ್ದೇಕೆ..? ಈ ಬಗ್ಗೆ ಅಮಿತ್ ಮಿಶ್ರಾ ಹೇಳಿದ್ದೇನು..?
ಸದ್ಯ 15ನೇ ಐಪಿಎಲ್‌ನಿಂದ ಹಿಂದೆ ಸರಿದಿದ್ದ ಗೇಲ್ ಮತ್ತೆ ಐಪಿಎಲ್ ಆಡೋದು ಖಚಿತವಾಗಿದೆ. ಮುಂದಿನ ಐಪಿಎಲ್‌ನಲ್ಲಿ ರಂಗಿನ್ ಆಟದಲ್ಲಿ ಕಣಕ್ಕಿಳಿಯೋದಾಗಿ ಕ್ರಿಸ್ ಗೇಲ್ ಹೇಳಿದ್ಧಾರೆ. ಅಲ್ಲಿಗೆ ಕೆರಿಯರ್ ದೈತ್ಯ ಮತ್ತೆ ಐಪಿಎಲ್ ಆಡ್ತಾರೋ, ಇಲ್ವೋ ಅನ್ನೋ ಗೊಂದಲಕ್ಕೆ ಆನ್ಸರ್ ಸಿಕ್ಕಂತಾಗಿದೆ. ಅಲ್ಲದೇ ಫ್ಯಾನ್ಸ್ ಗೇಲ್ರ ಈ ಮಾತಿನಿಂದ ಫುಲ್ ಖುಷ್ ಆಗಿದ್ದಾರೆ. ‘ನಾನು 3 ತಂಡಗಳ ಪರ ಆಡಿದ್ದೇನೆ. ಕೆಕೆಆರ್, ಆರ್‌ಸಿಬಿ ಹಾಗೂ ಪಂಜಾಬ್. ಈ ಪೈಕಿ ಆರ್‌ಸಿಬಿಯಲ್ಲಿ ಅತ್ಯುತ್ತಮ ಸಮಯ ಕಳೆದಿದ್ದೇನೆ. ಪಂಜಾಬ್ ತಂಡದಲ್ಲೂ ಅನುಭವ ಚೆನ್ನಾಗಿತ್ತು. ಈ ಎರಡು ತಂಡಗಳಿಗೆ ಕಪ್ ಗೆಲ್ಲಿಸಿಕೊಡಬೇಕು ಎನ್ನುವ ಹಂಬಲವಿದೆ’ ಎಂದು ಗೇಲ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.