RCB ಫ್ಯಾನ್ ಫಾಲೋವರ್ಸ್ ಹೆಚ್ಚಾಗಲು ಕಾರಣವೇನು ಗೊತ್ತಾ..?

By Suvarna News  |  First Published May 8, 2022, 2:46 PM IST

* ಐಪಿಎಲ್‌ನಲ್ಲಿ ಭರ್ಜರಿ ಮನರಂಜನೆ ನೀಡಿರುವ ತಂಡವೆಂದರೆ ಅದು ಆರ್‌ಸಿಬಿ

* ಸಾಮಾಜಿಕ ಕಳಕಳಿಯ ಮೂಲಕವೂ ಗಮನ ಸೆಳೆದಿದೆ ಬೆಂಗಳೂರು ಮೂಲದ ಫ್ರಾಂಚೈಸಿ

* ಕಪ್‌ ಗೆಲ್ಲದೇ ಇದ್ದರೂ ಆರ್‌ಸಿಬಿ ಫ್ಯಾನ್ ಫಾಲೋವರ್ಸ್‌ ಹೆಚ್ಚಾಗಲು ಕಾರಣವೇನು ಗೊತ್ತಾ?


ಬೆಂಗಳೂರು(ಮೇ.08): ರಾಯಲ್ ಚಾಲೆಂಜರ್ಸ್ ಬೆಂಗಳೂರು. 14 ವರ್ಷಗಳಿಂದ ಐಪಿಎಲ್ ಆಡುತ್ತಿದ್ದರೂ ಇದುವರೆಗೂ ಚಾಂಪಿಯನ್ ಆಗಿಲ್ಲ. ಆದ್ರೂ RCB ಫ್ಯಾನ್ ಫಾಲೋವರ್ಸ್ ಮಾತ್ರ ಕಮ್ಮಿಯಾಗಿಲ್ಲ. 2008ರಿಂದ ಪ್ರತಿ ವರ್ಷ RCB ಫ್ಯಾನ್ ಫಾಲೋವರ್ಸ್ ಹೆಚ್ಚಾಗುತ್ತಿದ್ದಾರೆ ಹೊರತು, ಕಡಿಮೆಯಾಗುತ್ತಿಲ್ಲ. RCB ಗೆಲ್ಲಲಿ ಸೋಲಲಿ ಸಂಭ್ರಮಿಸುತ್ತಾರೆ. ಸದ್ಯ ಐಪಿಎಲ್​ನಲ್ಲಿ ಸಿಎಸ್​ಕೆ, ಮುಂಬೈ ಮತ್ತು RCB ಇರುವಷ್ಟು ಫ್ಯಾನ್ ಫಾಲೋವರ್ಸ್​ ಮತ್ಯಾವ ತಂಡಕ್ಕೂ ಇಲ್ಲ.

RCB ಫ್ಯಾನ್ ಫಾಲೋವರ್ಸ್​ ಹೆಚ್ಚಾಗಿರಲು ಸ್ಟಾರ್ ಆಟಗಾರರು ಮಾತ್ರ ಕಾರಣರಲ್ಲ. ಫ್ರಾಂಚೈಸಿಗಳ ಸಾಮಾಜಿಕ ಕಳಕಳಿಯೂ ಕಾರಣ. ಹೌದು, ಐಪಿಎಲ್​​ನಲ್ಲಿ ತಂಡ ಖರೀದಿಸಿ, RCB ಫ್ರಾಂಚೈಸಿ ಕೇವಲ ದುಡ್ಡು ಮಾತ್ರ ಮಾಡ್ತಿಲ್ಲ. ಸಾಮಾಜಿಕ ಕಾರ್ಯಗಳನ್ನೂ ಮಾಡ್ತಿದ್ದಾರೆ. ಅದರಲ್ಲಿ ಒಂದು ಗೋ ಗ್ರೀನ್. ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ 2011ರಿಂದಲೂ ಒಂದು ಪಂದ್ಯದಲ್ಲಿ ಹಸಿರು ಜರ್ಸಿ ತೊಟ್ಟು ಮೈದಾನಕ್ಕಿಳಿಯುತ್ತಿದೆ ಆರ್​​ಸಿಬಿ.

Tap to resize

Latest Videos

RCB ಫ್ರಾಂಚೈಸಿ, ಗೋ ಗ್ರೀನ್​​​ ಘೋಷಣೆಯಡಿ ಜಾಗತಿಕ ತಾಪಮಾನದ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಇದಷ್ಟೇ ಅಲ್ಲದೆ ಫ್ರಾಂಚೈಸಿ, ಸ್ವಯಂ ಪ್ರೇರಿತವಾಗಿ ಗಿಡ ನೆಡುವ ಮೂಲಕ, ಮಾಲಿನ್ಯ ತಡೆಗಟ್ಟುವ, ಇಂಧನ ಉಳಿಸುವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ. ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಏಕೈಕ ಐಪಿಎಲ್ ಪ್ರಾಂಚೈಸಿ ಎನ್ನುವ ಕೀರ್ತಿಗೆ RCB ಪಾತ್ರವಾಗಿದೆ. 2016ರಲ್ಲಿ RCB ಪ್ಲೇಯರ್ಸ್ ಸೈಕಲ್ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದರು.

ಇಂದು ಹೈದ್ರಾಬಾದ್ ವಿರುದ್ಧ ಗ್ರೀನ್ ಜೆರ್ಸಿಯಲ್ಲಿ ಆರ್​​ಸಿಬಿ:

ಪ್ರತಿ ವರ್ಷದಂತೆ ಈ ವರ್ಷವೂ RCB, ಗ್ರೀನ್ ಜೆರ್ಸಿಯಲ್ಲಿ ಆಡಲಿದೆ. ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ RCB ಪ್ಲೇಯರ್ಸ್ ಗ್ರೀನ್ ಜೆರ್ಸಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಈ ಮೂಲ್ಕ ಪರಿಸರ ಉಳಿಸಿ ಅನ್ನೋ ಅಭಿಯಾನವನ್ನ  ಮುಂದುವರೆಸಲಿದ್ದಾರೆ. ಈ ಬಗ್ಗೆ RCB ಪ್ಲೇಯರ್ಸ್ ಮಾತನಾಡಿದ್ದಾರೆ.

IPL 2022: ಸನ್‌ರೈಸರ್ಸ್‌ ಎದುರು ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ RCB..!

ಗ್ರೀನ್ ಜೆರ್ಸಿಯಲ್ಲಿ ಆರ್​​ಸಿಬಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು:

2011ರಲ್ಲಿ ಆರಂಭವಾದ ಗೋ ಗ್ರೀನ್ ಕಾರ್ಯಕ್ರಮಕ್ಕೆ 12ರ ಸಂಭ್ರಮ. ಗ್ರೀನ್ ಜೆರ್ಸಿ ಹಾಕಿಕೊಂಡು RCB ಆಡಿರುವ ಕಳೆದ 10 ಪಂದ್ಯಗಳಲ್ಲಿ ಗೆದ್ದಿರೋದು ಜಸ್ಟ್ ಎರಡು ಪಂದ್ಯವನ್ನ ಮಾತ್ರ. 7 ಮ್ಯಾಚ್ ಸೋತಿದ್ದರೆ, ಒಂದು ರದ್ದಾಗಿತ್ತು. ಈ ಸಲ ಆರ್​ಸಿಬಿ ಉಳಿದ ಮೂರು ಪಂದ್ಯ ಗೆದ್ದರಷ್ಟೇ ಪ್ಲೇ ಆಫ್ ಹಂತಕ್ಕೇರೋದು. ಗ್ರೀನ್ ಜೆರ್ಸಿ ಹಾಕಿಕೊಂಡು ಆಡಿದ್ರೆ ಗೆಲುವಿಲ್ಲ ಅನ್ನೋದು RCB ಫ್ರಾಂಚೈಸಿಗೆ ಗೊತ್ತಿದ್ದರೂ ಗೆಲುವಿಗಿಂತ ಸಾಮಾಜಿಕ ಕಳಕಳಿ ಮುಖ್ಯ ಅಂತ ಗೋ ಗ್ರೀನ್ ಅಭಿಯಾನವನ್ನ ಬಿಟ್ಟಿಲ್ಲ. ಇದೇ ಈಗ ಅಭಿಮಾನಿಗಳಲ್ಲಿ ಭಯ ಹುಟ್ಟಿಸಿರೋದು. ಗ್ರೀನ್ ಜೆರ್ಸಿ ಸೋಲಿನ ಸರಪಳಿಯಿಂದ ಈ ಸಲ ಆರ್​ಸಿಬಿ ಹೊರಬರುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

2021ರಲ್ಲಿ ಗ್ರೀನ್ ಜೆರ್ಸಿ ಬದಲು ಬ್ಲ್ಯೂ ಜೆರ್ಸಿ:

2011ರಿಂದ ಸತತ 10 ವರ್ಷ ಗೋ ಗ್ರೀನ್ ಅಭಿಯಾನ ಮಾಡುತ್ತಿದ್ದ RCB, ಕಳೆದ ವರ್ಷ ಮಾತ್ರ ಗೋ ಗ್ರೀನ್ ಬದಲು ಕೋವಿಡ್ ವಾರಿಯರ್ಸ್​​​​ಗೆ ಸಲಾಂ ಹೊಡೆದಿತ್ತು. ಗ್ರೀನ್ ಜೆರ್ಸಿ ಬದಲು ಬ್ಲ್ಯೂ ಜೆರ್ಸಿ ಹಾಕಿಕೊಂಡು ಕೋರೋನಾ ವಾರಿಯರ್ಸ್​​ಗೆ ಗೌರವ ಸೂಚಿಸಿತ್ತು. ಬ್ಲ್ಯೂ ಜೆರ್ಸಿಯಲ್ಲೂ ಆರ್​​ಸಿಬಿ ಸೋತಿತ್ತು.

click me!