IPL 2022 ಟಾಸ್ ಗೆದ್ದ ಹೈದರಾಬಾದ್, ಪಂಜಾಬ್‌ಗೆ ಧವನ್ ನಾಯಕ!

Published : Apr 17, 2022, 03:09 PM ISTUpdated : Apr 17, 2022, 03:19 PM IST
IPL 2022 ಟಾಸ್ ಗೆದ್ದ ಹೈದರಾಬಾದ್, ಪಂಜಾಬ್‌ಗೆ ಧವನ್ ನಾಯಕ!

ಸಾರಾಂಶ

ಪಂಜಾಬ್ ಕಿಂಗ್ಸ್ ತಂಡಕ್ಕೆ ಮಯಾಂಕ್ ಬದಲು ಧವನ್ ನಾಯಕ ಪಂಜಾಬ್ ವಿರುದ್ಧ ಟಾಸ್ ಗೆದ್ದ ಹೈದರಾಬಾದ್ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ  

ಮುಂಬೈ(ಏ.17): ಐಪಿಎಲ್ 2022 ಟೂರ್ನಿಯ 28ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಸನ್‌‌ರೈಸರ್ಸ್ ಹೈದರಾಬಾದ್(PBKS vs SRH) ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ (Toss)ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೈದರಾಬಾದ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಪಂಜಾಬ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ನಾಯಕ ಮಯಾಂಕ್ ಅಗರ್ವಾಲ್ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಮಯಾಂಕ್ ಬದಲು ಪ್ರಭಸಿಮ್ರನ್ ತಂಡ ಸೇರಿಕೊಂಡಿದ್ದಾರೆ. ಇನ್ನು ಶಿಖರ್ ಧವನ್ ತಂಡ ಮುನ್ನಡೆಸುತ್ತಿದ್ದಾರೆ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಶಿಖರ್ ಧವನ್(ನಾಯಕ), ಜಾನಿ ಬೈರ್‌ಸ್ಟೋ, ಪ್ರಭಸಿಮ್ರನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಒಡನೆ ಸ್ಮಿತ್, ಕಾಗಿಸೋ ರಬಾಡ, ರಾಹುಲ್ ಚಹಾರ್, ವೈಭವ್ ಆರೋರ, ಅರ್ಶದೀಪ್ ಸಿಂಗ್

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ನಾಯಕ), ರಾಹುಲ್ ತ್ರಿಪಾಠಿ, ಆ್ಯಡಿನ್ ಮಕ್ರಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ಜಗದೀಶಾ ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೋ ಜಾನ್ಸೆನ್, ಉಮ್ರಾನ್ ಮಿಲಿಕ್, ಟಿ ನಟರಾಜನ್

ರಾಕಿ ಬಾಯ್​​ ಯಶ್​ ಅವತಾರದಲ್ಲಿ ಧೂಳೆಬ್ಬಿಸಿದ ವಾರ್ನರ್​​​

ಒಟ್ಟು ಮುಖಾಮುಖಿ: 18
ಸನ್‌ರೈಸ​ರ್‍ಸ್: 12
ಪಂಜಾಬ್‌: 06

ಕೇನ್‌ ವಿಲಿಯಮ್ಸನ್‌ ನಾಯಕತ್ವದ ಹೈದರಾಬಾದ್‌ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿತ್ತು. ಆದರೆ ಬಳಿಕ ಹಾಲಿ ಚಾಂಪಿಯನ್‌ ಚೆನ್ನೈ, ಗುಜರಾತ್‌ ಟೈಟಾನ್ಸ್‌ ಹಾಗೂ ಕೋಲ್ಕತಾ ನೈಟ್‌ ರೈಡ​ರ್‍ಸ್ ವಿರುದ್ಧ ಜಯ ಸಾಧಿಸಿದ್ದು, ಸತತ ನಾಲ್ಕನೇ ಗೆಲುವಿಗೆ ಎದುರು ನೋಡುತ್ತಿದೆ. ಯಾವುದೇ ಆಟಗಾರರನ್ನು ಹೆಚ್ಚಾಗಿ ನೆಚ್ಚಿಕೊಳ್ಳದೇ ಸಂಘಟಿತ ಪ್ರದರ್ಶನ ತೋರುತ್ತಿರುವುದು ತಂಡದ ಪ್ಲಸ್‌ ಪಾಯಿಂಟ್‌. ಅಭಿಷೇಕ್‌ ಶರ್ಮಾ, ವಿಲಿಯಮ್ಸನ್‌, ರಾಹುಲ್‌ ತ್ರಿಪಾಠಿ, ನಿಕೋಲಸ್‌ ಪೂರನ್‌, ಏಡನ್‌ ಮಾರ್ಕ್ರಮ್‌ ತಂಡದ ಬ್ಯಾಟಿಂಗ್‌ ಬೆನ್ನುಲುಬಾಗಿದ್ದಾರೆ. ಕನ್ನಡಿಗ ಜಗದೀಶ್‌ ಸುಚಿತ್‌ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದು, ಭಾರತೀಯ ವೇಗಿಗಳಾದ ಭುವನೇಶ್ವರ್‌ ಕುಮಾರ್‌, ಟಿ.ನಟರಾಜನ್‌ ಹಾಗೂ ಉಮ್ರಾನ್‌ ಮಲಿಕ್‌ ಮತ್ತೊಮ್ಮೆ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ತವಕದಲ್ಲಿದ್ದಾರೆ..

ಮತ್ತೊಂದೆಡೆ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ಪಂಜಾಬ್‌ ಅಸ್ಥಿರ ಪ್ರದರ್ಶನ ತೋರುತ್ತಿದೆ. ಇಂದು ಅಗರ್ವಾಲ್ ಬದಲು ಶಿಖರ್ ಧವನ್ ನಾಯಕನಾಗಿದ್ದಾರೆ. ಪಂಜಾಬ್ ಕಿಂಗ್ಸ್ ಆಡಿರುವ 5 ಪಂದ್ಯಗಳಲ್ಲಿ ಮೂರರಲ್ಲಿ ಜಯಗಳಿಸಿದೆ. ಶಿಖರ್‌ ಧವನ್‌ ಬ್ಯಾಟಿಂಗ್‌ ಲಯ ಕಂಡುಕೊಂಡಿದ್ದು ತಂಡಕ್ಕೆ ಬಲ ಒದಗಿಸಿದೆ. ಸ್ಫೋಟಕ ಆಟಕ್ಕೆ ಹೆಸರುವಾಗಿರುವ ಲಿವಿಂಗ್‌ಸ್ಟೋನ್‌, ಶಾರುಖ್‌ ಖಾನ್‌ ಮತ್ತೊಂದು ಆಕರ್ಷಕ ಆಟದ ನಿರೀಕ್ಷೆಯಲ್ಲಿದ್ದಾರೆ. ಕಗಿಸೊ ರಬಾಡ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ಇತರರಿಂದ ಸೂಕ್ತ ಬೆಂಬಲ ಸಿಕ್ಕರೆ ಮಾತ್ರ ಗೆಲುವು ಸುಲಭವಾಗಲಿದೆ.

IPL 2022 ರಾಹುಲ್ ಶತಕಕ್ಕೆ ಒಲಿದ ಗೆಲುವು, ಮುಂಬೈಗೆ ಸತತ 6ನೇ ಸೋಲು!

ಆರ್‌ಸಿಬಿ ಅಬ್ಬರಕ್ಕೆ ತಲೆಬಾಗಿದ ಕ್ಯಾಪಿಟಲ್ಸ್‌
ನಿನ್ನೆ ನಡೆದ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌, ರಿಷಬ್‌ ಪಂತ್‌ ಹೋರಾಟದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ 15ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು 16 ರನ್‌ ಗೆಲುವು ಸಾಧಿಸಿದೆ. ಚೆನ್ನೈ ಸೂಪರ್‌ ಕಿಂಗ್‌್ಸ ವಿರುದ್ಧದ ಕಳೆದ ಪಂದ್ಯದಲ್ಲಿ ಮುಖಭಂಗ ಅನುಭವಿಸಿದ್ದ ತಂಡದ ಬೌಲಿಂಗ್‌ ಪಡೆ ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿತು. ಇದರೊಂದಿಗೆ 6 ಪಂದ್ಯಗಳಲ್ಲಿ 4ನೇ ಜಯಗಳಿಸಿದ ಫಾಫ್‌ ಡು ಪ್ಲೆಸಿ ಬಳಗ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. 5 ಪಂದ್ಯಗಳಲ್ಲಿ 3ನೇ ಸೋಲುಂಡ ಡೆಲ್ಲಿ 8ನೆ ಸ್ಥಾನದಲ್ಲೇ ಬಾಕಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?
ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!