
ಮುಂಬೈ(ಮೇ.22); ಐಪಿಎಲ್ 2022 ಲೀಗ್ ಟೂರ್ನಿಯ ಕೊನೆಯ ಹಾಗೂ 70ನೇ ಪಂದ್ಯ. ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಹೋರಾಟ ಅಟಕ್ಕುಂಟು ಲೆಕ್ಕಕ್ಕಿಲ್ಲ. ಈ ಪ್ರಾಕ್ಟೀಸ್ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಕೇನ್ ವಿಲಿಯಮ್ಸನ್ ಅಲಭ್ಯತೆಯಿಂದ ಸನ್‌ರೈಸರ್ಸ್ ತಂಡವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸುತ್ತಿದ್ದಾರೆ. ಹೈದರಾಬಾದ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ.
ಸನ್‌ರೈಸರ್ಸ್ ಹೈದರಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ಪ್ರಿಯಂ ಗರ್ಗ್, ರಾಹುಲ್ ತ್ರಿಪಾಠಿ, ಆ್ಯಡಿನ್ ಮರ್ಕ್ರಮ್, ನಿಕೋಲಸ್ ಪೂರನ್, ರೋಮಾರಿಯೋ ಶೆಫರ್ಡ್, ವಾಶಿಂಗ್ಟನ್ ಸುಂದರ್, ಜೆ ಸುಚಿತ್, ಭುವನೇಶ್ವರ್ ಕುಮಾರ್(ನಾಯಕ), ಫಜ್ಲಾಕ್ ಫಾರೂಖಿ, ಉಮ್ರಾನ್ ಮಲಿಕ್
IPL 2022: ಮತ್ತೆ ಮತ್ತೆ ನೋಡಬೇಕೆನಿಸುವ ಆರ್‌ಸಿಬಿ ಸಂಭ್ರಮಾಚರಣೆ..! ವಿಡಿಯೋ ವೈರಲ್
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಜಾನಿ ಬೈರ್‌ಸ್ಟೋ, ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್ ಅಗರ್ವಾಲ್(ನಾಯಕ), ಶಾರೂಖ್ ಖಾನ್ ಜಿತೇಶ್ ಶರ್ಮಾ, ಹರ್ಪ್ರೀತ್ ಬ್ರಾರ್, ನಥನ್ ಎಲ್ಲಿಸ್, ಪ್ರೇರಂಕ್ ಮಂಕಡ್, ಕಾಗಿಸೋ ರಬಡಾ, ಅರ್ಶದೀಪ್ ಸಿಂಗ್
ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 7ನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 8ನೇ ಸ್ಥಾನದಲ್ಲಿದೆ. ಉಭಯ ತಂಡಗಳು ತಲಾ 12 ಅಂಕ ಸಂಪಾದಿಸಿದೆ. ಗೆದ್ದ ತಂಡ 14 ಅಂಕ ಸಂಪಾದಿಸಲಿದೆ. ಇನ್ನೊಂದು ಗೆಲುವು ದಾಖಲಿಸಿದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವೂ ಈ ತಂಡಕ್ಕಿತ್ತು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲ ಸೇರಿದಂತೆ ಹಲವು ಕಾರಣಗಳಿಂದ ಪಂಜಾಬ್ ಹಾಗೂ ಹೈದರಾಬಾದ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ.
ಪಂಜಾಬ್ ತಂಡ ಪ್ರತಿ ಗೆಲುವಿನ ಬಳಿಕ ಪಂದ್ಯವನ್ನು ಸೋತಿದೆ. ಇತ್ತ ಹೈದರಾಬಾದ್ ಆರಂಭಿಕ 2 ಪಂದ್ಯ ಸೋತು, ಬಳಿಕ 5 ಪಂದ್ಯ ಗೆದ್ದಿತ್ತು. ಅಷ್ಟೇ ವೇಗದಲ್ಲಿ ಇನ್ನುಳಿದ 5 ಪಂದ್ಯ ಸೋತಿತ್ತು. ಇಂದಿನ ಪಂದ್ಯ ಗೆದ್ದು ಟೂರ್ನಿಗೆ ಗೆಲುವಿನೊಂದಿಗೆ ವಿದಾಯ ಹೇಳಲು ಹೈದರಾಬಾದ್ ಹಾಗೂ ಪಂಜಾಬ್ ನಿರ್ಧರಿಸಿದೆ. ಇದಕ್ಕಾಗಿ ತಯಾರಿ ನೆಡೆಸಿದೆ.
IPL 2022 ಡೆಲ್ಲಿ ವಿರುದ್ಧ ಮುಂಬೈಗೆ ಗೆಲುವು, ಆರ್‌ಸಿಬಿಗೆ ಸಿಕ್ತು ಪ್ಲೇ ಆಫ್ ಚಾನ್ಸ್!
ಗೆದ್ದ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರೆ, ಸೋತ ತಂಡ 8ನೇ ಸ್ಥಾನದಲ್ಲಿರಲಿದೆ. ಇಂದಿನ ಪಂದ್ಯಕ್ಕೂ ಮೊದಲೇ ಕೇನ್ ವಿಲಿಯಮ್ಸ್ ತವರಿಗೆ ವಾಪಾಸ್ಸಾಗಿದ್ದಾರೆ.
IPL 2022 ಪ್ಲೇ ಆಫ್
ಇಂದಿನ ಪಂದ್ಯದ ಫಲಿತಾಂಶ ಹೈದರಾಬಾದ್, ಪಂಜಾಬ್ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಷ್ಟೇ ಅಲ್ಲ ಪ್ಲೇ ಆಫ್ ತಲುಪಿರುವ ತಂಡಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬಾರಿಯ ಐಪಿಎಲ್ ಪ್ಲೇ ಆಫ್ ಹಂತಕ್ಕೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಇದರಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಂಡಿದೆ. ಇನ್ನು ರಾಜಸ್ಥಾನ ರಾಯಲ್ಸ್, ಲಖನೌ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನ ಪಡೆದುಕೊಂಡು ಪ್ಲೇ ಆಫ್ ಖಚಿತಪಡಿಸಿಕೊಂಡಿತ್ತು. ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಿದ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ.
ಟೂರ್ನಿಯಿಂದ ಹೊರಬಿದ್ದ ತಂಡಗಳೆಂದರೆ, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.