IPL 2022 ಆರ್‌ಸಿಬಿ ತಂಡಕ್ಕಿದೆ 205 ರನ್‌ಗಳ ಫೋಬಿಯಾ..!

Published : Mar 29, 2022, 09:52 AM IST
IPL 2022 ಆರ್‌ಸಿಬಿ ತಂಡಕ್ಕಿದೆ 205 ರನ್‌ಗಳ ಫೋಬಿಯಾ..!

ಸಾರಾಂಶ

* 14 ಆವೃತ್ತಿಗಳಿಂದಲೂ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ * 200+ ರನ್‌ ದಾಖಲಿಸಿದರೂ ಪಂಜಾಬ್ ಎದುರು ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು * 205 ರನ್‌ ಗಳಿಸಿದ ಬಹುತೇಕ ಪಂದ್ಯಗಳಲ್ಲಿ ಆರ್‌ಸಿಬಿಗೆ ಎದುರಾಗಿದೆ ಆಘಾತಕಾರಿ ಸೋಲು

ಮುಂಬೈ(ಮಾ.29): RCB ತಂಡಕ್ಕೆ ಯಾಕೋ ಲಕ್ಕೇ ಸರಿಯಿಲ್ಲ. 14 ವರ್ಷಗಳಿಂದ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ. ಈ ಸಲ ಕಪ್ ನಮ್ದೆ.. ಈ ಸಲ ಕಪ್ ನಮ್ದೆ ಅಂತ ಅಭಿಯಾನ ಮಾಡಿದ್ದೇ ಬಂತು. ಕಪ್ ಮಾತ್ರ ಬೆಂಗಳೂರಿಗೆ ಬರಲಿಲ್ಲ. ಐಪಿಎಲ್​ನಲ್ಲಿ ಇರೋ ಬರೋ ರೆಕಾರ್ಡ್​ಗಳೆಲ್ಲಾ RCB ಹೆಸರಿನಲ್ಲಿವೆ. ವೈಯಕ್ತಿಕ ದಾಖಲೆಗಳು ಅಷ್ಟೆ. ಆರ್​ಸಿಬಿ ಪರ ಆಡಿದವರ ಹೆಸರಿನಲ್ಲಿ ಇವೆ. ಆದ್ರೆ ಒಂದೇ ಒಂದು ಐಪಿಎಲ್ ಟ್ರೋಫಿಯೂ RCB ಬಳಿ ಇಲ್ಲ. ಹಾಗಾಗಿಯೇ RCB ಆನ್ ಲಕ್ಕಿ ಟೀಮ್ ಲಿಸ್ಟ್​ಗೆ ಸೇರಿರೋದು.

ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) (Royal Challengers Bangalore) ಎಷ್ಟೇ ಉತ್ತಮ ಬ್ಯಾಟರ್‌ಗಳನ್ನು ಹೊಂದಿದ್ದರೂ, ಬೌಲರ್‌ಗಳ ಕಳಪೆ ಪ್ರದರ್ಶನದಿಂದ ಸೋಲುವುದನ್ನು ಅಭಿಮಾನಿಗಳು ಹಲವು ವರ್ಷಗಳಿಂದ ನೋಡುತ್ತಿದ್ದಾರೆ. ಈ ವರ್ಷವೂ ವಿಭಿನ್ನವಾಗಿರುವುದಿಲ್ಲ ಎನ್ನುವ ಭಾವನೆ ಮೊದಲ ಪಂದ್ಯದಲ್ಲೇ ಅಭಿಮಾನಿಗಳ ಮನದಲ್ಲಿ ಮೂಡಿದೆ. 15ನೇ ಆವೃತ್ತಿಯಲ್ಲಿ 200ಕ್ಕೂ ಹೆಚ್ಚು ರನ್‌ ಸಿಡಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾದ ಆರ್‌ಸಿಬಿ, 200ಕ್ಕೂ ಹೆಚ್ಚು ರನ್‌ ಚಚ್ಚಿಸಿಕೊಂಡ ಮೊದಲ ತಂಡ ಎನ್ನುವ ಅಪಖ್ಯಾತಿಗೂ ಗುರಿಯಾಗಿದೆ.

14 ವರ್ಷದ್ದು ಒಂದು ಲೆಕ್ಕ. ಈ ವರ್ಷದ್ದು ಒಂದು ಲೆಕ್ಕ. ತಂಡ ಬದಲಾಗಿದೆ. ನಾಯಕನೂ ಬದಲಾಗಿದ್ದಾನೆ. ಹಾಗಾಗಿ ಈ ಸಲ RCB ಕಪ್  ಗೆಲ್ಲಲಿದೆ ಅನ್ನೋ ನಿರೀಕ್ಷೆಗಳಿದ್ದವು. ಆದರೆ ಮೊದಲ ಪಂದ್ಯದಲ್ಲೇ ಸೋತು ತಲೆ ತಗ್ಗಿಸಿ ನಿಂತಿದೆ. 205 ರನ್ ಬಾರಿಸಿದ್ರೂ ಸೋತು ಸುಣ್ಣವಾಗಿದೆ. ಫ್ಯಾನ್ಸ್ ಬೇರೆ ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ. ಆದ್ರೆ RCB ಮೊನ್ನೆ ಹೊಡೆದಿದ್ದು 205 ರನ್. ಆ 205 ರನ್​ಗಳೇ RCBಗೆ ಕಂಟಕ. ಅದು ಹೇಗೆ ಅನ್ನೋದನ್ನ ತಿಳಿದುಕೊಳ್ಳಬೇಕು ಅಂದರೆ ಇತಿಹಾಸ ನೋಡಬೇಕು.

ಐದು ಬಾರಿ 205 ರನ್. ಗೆದ್ದಿರೋದು ಜಸ್ಟ್ ಒಂದು ಪಂದ್ಯ:

ನೀವು ನಂಬಲೇ ಬೇಕು. ಐಪಿಎಲ್ ಇತಿಹಾಸದಲ್ಲೇ RCB ದಾಖಲೆಯ 21 ಬಾರಿ 200 ಪ್ಲಸ್ ರನ್ ಹೊಡೆದಿದೆ. ಈ 21ರಲ್ಲಿ ಐದು ಸಲ 205 ರನ್​ಗಳನ್ನ ಬಾರಿಸಿದೆ. ಈ ಐದರಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ RCB ಗೆದ್ದಿದೆ. ಉಳಿದ ನಾಲ್ಕು ಬಾರಿಯೂ ಸೋತಿದೆ. ಇದು ಅಚ್ಚರಿ ಎನಿಸಿದ್ರೂ ಸತ್ಯ.

RCB ಪಂದ್ಯ ಸೋತರೂ, ಎದುರಾಳಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ರಾಯಲ್ ಚಾಲೆಂಜರ್ಸ್‌..!

ಆರ್​​ಸಿಬಿಗೆ 2005ರ ಫೊಬಿಯಾ

ವರ್ಷ    ಎದುರಾಳಿ        ರನ್    ಫಲಿತಾಂಶ

2011    ಪಂಜಾಬ್       205    ಜಯ
2012    ಸಿಎಸ್​ಕೆ        205    ಸೋಲು
2018    ಸಿಎಸ್​ಕೆ        205    ಸೋಲು
2019    ಕೆಕೆಆರ್        205    ಸೋಲು
2022    ಪಂಜಾಬ್      205     ಸೋಲು

ಈ ಅಂಕಿಅಂಶಗಳನ್ನ ನೋಡಿದರೆ RCBಗೆ 205 ರನ್​ಗಳ ಫೋಬಿಯಾ ಹೇಗೆಲ್ಲಾ ಕಾಡಿದೆ ಅಂತ. 2011ರಲ್ಲಿ 205 ರನ್ ಹೊಡೆದು ಗೆಲುವು ದಾಖಲಿಸಿದ್ದೇ ಕೊನೆ. 11 ವರ್ಷಗಳಿಂದ ನಾಲ್ಕು ಸಲ 205 ರನ್ ಬಾರಿಸಿದ್ರೂ ಗೆಲುವು ಮಾತ್ರ ದಕ್ಕಿಲ್ಲ. ಅಲ್ಲಿಗೆ 205 ಫೊಬಿಯಾ RCBಯನ್ನ ಕಾಡ್ತಿದೆ. ಪಂಜಾಬ್ ಕಿಂಗ್ಸ್‌ ತಂಡದ ಎದುರು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಆರ್‌ಸಿಬಿ ತಂಡವು ನೂತನ ನಾಯಕ ಫಾಫ್ ಡು ಪ್ಲೆಸಿಸ್‌ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಬರೋಬ್ಬರಿ 205 ರನ್ ಬಾರಿಸಿತ್ತು. ಹೀಗಿದ್ದೂ, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆಯಲ್ಲಿ ಮಾಡಿಕೊಂಡ ಎಡವಟ್ಟಿನಿಂದಾಗಿ ಆರ್‌ಸಿಬಿ ಪಂದ್ಯವನ್ನು ಕೈಚೆಲ್ಲಿತು. ಈ ಫೊಬಿಯಾದಿಂದ RCB ಹೊರಬರಲಿ. ಮತ್ತೆ 205 ರನ್ ಹೊಡೆದು ಗೆಲುವು ದಾಖಲಿಸಲಿ ಅನ್ನೋದೇ ಅಭಿಮಾನಿಗಳ ಆಶಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?