IPL 2022: ಆರಂಭಿಕ ಕೆಲ ಪಂದ್ಯಗಳಿಗೆ ದಕ್ಷಿಣ ಆಟಗಾರರು ಅಲಭ್ಯ..?

Published : Mar 08, 2022, 10:10 AM IST
IPL 2022: ಆರಂಭಿಕ ಕೆಲ ಪಂದ್ಯಗಳಿಗೆ ದಕ್ಷಿಣ ಆಟಗಾರರು ಅಲಭ್ಯ..?

ಸಾರಾಂಶ

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭ * ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತಂತೆ ಉಭಯ ಸಂಕಟಕ್ಕೆ ಸಿಲುಕಿದ ದಕ್ಷಿಣ ಆಫ್ರಿಕಾ ಆಟಗಾರರು * ಐಪಿಎಲ್‌ ಟೂರ್ನಿಯ ವೇಳೆಯಲ್ಲಿಯೇ ದಕ್ಷಿಣ ಆಫ್ರಿಕಾ ತಂಡವು ತವರಿನಲ್ಲಿ ಬಾಂಗ್ಲಾದೇಶ ವಿರುದ್ದ ಸರಣಿಯನ್ನಾಡಲಿದೆ

ಜೋಹಾನ್ಸ್‌ಬರ್ಗ್‌(ಮಾ.08): 15ನೇ ಆವೃತ್ತಿಯ ಐಪಿಎಲ್‌ಗೂ (IPL 2022) ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಧರ್ಮಸಂಕಟ ಎದುರಾಗಿದ್ದು, ಐಪಿಎಲ್‌ ಹಾಗೂ ರಾಷ್ಟ್ರ ತಂಡದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್‌ 18ರಿಂದ ತವರಿನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಮಾ.30ರಿಂದ 2 ಪಂದ್ಯಗಳ ಟೆಸ್ಟ್‌ ಸರಣಿ ನಿಗದಿಯಾಗಿದೆ.  ಇನ್ನು ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್‌ ಮಾರ್ಚ್ 26ಕ್ಕೆ ಆರಂಭಗೊಳ್ಳಲಿದೆ. ಟೆಸ್ಟ್‌ ಸರಣಿ ಮುಗಿದು, ಆಟಗಾರರು ಭಾರತಕ್ಕೆ ಆಗಮಿಸಿ ಕ್ವಾರಂಟೈನ್‌ ಮುಕ್ತಾಯಗೊಳಿಸಿ ತಂಡ ಕೂಡಿಕೊಳ್ಳುವ ವೇಳೆಗೆ ಕನಿಷ್ಠ 4ರಿಂದ 5 ಪಂದ್ಯಗಳು ನಡೆದಿರಲಿವೆ. ಹೀಗಾಗಿ ಕಗಿಸೋ ರಬಾಡ, ನೋಕಿಯ, ಮಾರ್ಕೊ ಯಾನ್ಸನ್‌, ಡೇವಿಡ್ ಮಿಲ್ಲರ್ ಸೇರಿದಂತೆ ವಿವಿಧ ಫ್ರಾಂಚೈಸಿಗಳಿಗೆ ಸೇರ್ಪಡೆಯಾಗಿರುವ ಆಟಗಾರರು ಯಾವುದನ್ನು ಆಯ್ಕೆ ಮಾಡಬೇಕೆಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಈ ನಡುವೆ ಟೆಸ್ಟ್‌ ತಂಡದ ನಾಯಕ ಡೀನ್‌ ಎಲ್ಗರ್‌ ರಾಷ್ಟ್ರವನ್ನು ಪ್ರತಿನಿಧಿಸುವುದಕ್ಕೆ ಪ್ರಾಮುಖ್ಯತೆ ಕೊಡಿ ಎಂದು ಆಟಗಾರರಿಗೆ ಸೂಚಿಸಿದ್ದಾರೆ. ‘ಆಟಗಾರರಿಗೆ ಐಪಿಎಲ್‌ ಮತ್ತು ರಾಷ್ಟ್ರ ತಂಡದ ಆಯ್ಕೆಯನ್ನು ನೀಡುವುದು ಕಷ್ಟ ಎಂಬುದು ಗೊತ್ತಿದೆ. ಆದರೆ ಇದರಲ್ಲಿ ಅವರ ಬದ್ಧತೆ ಗೊತ್ತಾಗಲಿದೆ’ ಎಂದಿದ್ದಾರೆ. 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಒಟ್ಟು 11 ದಕ್ಷಿಣ ಆಫ್ರಿಕಾದ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ ಆರು ಆಟಗಾರರು ಹರಿಣಗಳ ಟೆಸ್ಟ್‌ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಇದರ ಜತೆಗೆ ಇನ್ನು ಮೂರು ಆಟಗಾರರು ದಕ್ಷಿಣ ಆಫ್ರಿಕಾ ಏಕದಿನ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ  

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ವೇಗದ ಅಸ್ತ್ರಗಳೆಂದು ಗುರುತಿಸಿಕೊಂಡಿರುವ ಕಗಿಸೋ ರಬಾಡ (Kagiso Rabada), ಏನ್ರಿಚ್ ನೊಕಿಯ, ಲುಂಗಿ ಎಂಗಿಡಿ ಹಾಗೂ ಮಾರ್ಕೊ ಯಾನ್ಸೆನ್ ಜತೆಗೆ ಬ್ಯಾಟರ್‌ಗಳಾದ ಏಯ್ಡನ್ ಮಾರ್ಕ್‌ರಮ್‌, ರಾಸ್ಸಿ ವ್ಯಾನ್ ಡರ್ ಡುಸೇನ್, ಡೇವಿಡ್ ಮಿಲ್ಲರ್ (David Miller), ಆಲ್ರೌಂಡರ್ ಡ್ವೇನ್ ಪ್ರಿಟೋರಿಯಸ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ದಕ್ಷಿಣ ಆಫ್ರಿಕಾ ಟೆಸ್ಟ್ ಹಾಗೂ ಏಕದಿನ ತಂಡದ ಸಕ್ರಿಯ ಸದಸ್ಯರೆನಿಸಿದ್ದಾರೆ.

ಕಳೆದ ವರ್ಷ ನಡೆದ ಟೂರ್ನಿಯ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯು (Cricket South Africa) ತನ್ನ ಆಟಗಾರರಿಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಿತ್ತು. ತವರಿನಲ್ಲಿ ಪಾಕಿಸ್ತಾನ ವಿರುದ್ದ ಏಕದಿನ ಸರಣಿ ನಡೆಯುತ್ತಿದ್ದರೂ ಸಹಾ, ಟೂರ್ನಿಯ ಮಧ್ಯದಲ್ಲಿಯೇ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ತನ್ನ ಆಟಗಾರರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಅವಕಾಶ ಮಾಡಿಕೊಟ್ಟಿತ್ತು. ಬಿಸಿಸಿಐ (BCCI) ಜತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಲು ಬಯಸುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡಾ ಇದೀಗ ಉಭಯ ಸಂಕಟಕ್ಕೆ ಸಿಲುಕಿದಂತಿದೆ. 

IPL schedule 2022 ಪಂಜಾಬ್ ವಿರುದ್ಧ ಆರಂಭಿಸಿ ಗುಜರಾತ್ ಪಂದ್ಯದೊಂದಿಗೆ ಲೀಗ್ ಅಂತ್ಯ, RCB ಸಂಪೂರ್ಣ ವೇಳಾಪಟ್ಟಿ!

ಇನ್ನು ಕಳೆದ ಜನವರಿಯಲ್ಲಿ ನಡೆದ ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲು ಕೇಂದ್ರೀಯ ಗುತ್ತಿಗೆ ಪಡೆದ ದಕ್ಷಿಣ ಆಫ್ರಿಕಾ ಆಟಗಾರರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಯಾವುದೇ ನಿರಾಪೇಕ್ಷಣ ಪತ್ರವನ್ನು ನೀಡಿರಲಿಲ್ಲ. ಈ ಕುರಿತಂತೆ ಪ್ರತಿಕ್ರಿಯಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಡೈರೆಕ್ಟರ್ ಗೇಮ್ ಸ್ಮಿತ್, ನಾವು ದಕ್ಷಿಣ ಆಫ್ರಿಕಾ ದೇಶಿ ಕ್ರಿಕೆಟ್ ಟೂರ್ನಿಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದಾಗಿ ತಿಳಿಸಿದ್ದರು. ಹೀಗಾಗಿ ಐಪಿಎಲ್‌ನ ಕುರಿತಂತೆ ಮುಂಬರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ